ಈ ವರ್ಷವೇ ರಚನೆಯಾಗುತ್ತಾ 8ನೇ ವೇತನ ಆಯೋಗ? ಕನಿಷ್ಠ ವೇತನ ಡಬಲ್ ಆಗುತ್ತಾ? ಇಲ್ಲಿದೆ ಮಾಹಿತಿ

8th pay commission updates:ಸದ್ಯ ಜಾರಿಯಲ್ಲಿರುವ 7ನೇ ವೇತನ ಆಯೋಗದ 10 ವರ್ಷ ಕಾಲಾವಧಿ 2026ರ ಜನವರಿಗೆ ಮುಗಿಯುತ್ತದೆ. 8ನೇ ವೇತನ ಆಯೋಗ ಈಗಲೇ ರಚನೆ ಆಗಲಿ ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ವರದಿಗಳ ಪ್ರಕಾರ ಮುಂದಿನ ವರ್ಷ ಆಯೋಗ ರಚನೆಯಾಗಬಹುದು. 2026ರ ಜನವರಿಯಿಂದ ಅದರ ಶಿಫಾರಸುಗಳು ಜಾರಿಗೆ ಬರಬಹುದು. ಕನಿಷ್ಠ ವೇತನ ಹೆಚ್ಚಳ ಮತ್ತು ಡಿಎ ಲೆಕ್ಕಾಚಾರ ಬದಲಾಗುವ ನಿರೀಕ್ಷೆಗಳಿವೆ.

ಈ ವರ್ಷವೇ ರಚನೆಯಾಗುತ್ತಾ 8ನೇ ವೇತನ ಆಯೋಗ? ಕನಿಷ್ಠ ವೇತನ ಡಬಲ್ ಆಗುತ್ತಾ? ಇಲ್ಲಿದೆ ಮಾಹಿತಿ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2024 | 1:38 PM

ಬೆಂಗಳೂರು, ನವೆಂಬರ್ 13: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈಗ ಎಂಟನೇ ವೇತನ ಆಯೋಗವನ್ನು ಎದುರು ನೋಡುತ್ತಿದ್ದಾರೆ. 2016ರಲ್ಲಿ ರಚನೆಯಾದ 7ನೇ ವೇತನ ಆಯೋಗದ ನಿಗದಿತ 10 ವರ್ಷದ ಅವಧಿ ಮುಗಿಯುತ್ತಾ ಬರುತ್ತಿದೆ. 2026ರ ಜನವರಿಗೆ ಅದರ ಅವಧಿ ಮುಗಿಯುತ್ತದೆ. ಈ ಹಿನ್ನೆಲೆಯಲ್ಲಿ 8ನೇ ವೇತನ ಆಯೋಗದ ರಚನೆ ಯಾವಾಗ ಆಗಬಹುದು, ಅದರ ಶಿಫಾರಸುಗಳು ಯಾವಾಗ ಆರಂಭವಾಗಬಹುದು ಇತ್ಯಾದಿ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಕೇಂದ್ರ ಸರ್ಕಾರ ಪ್ರತೀ 10 ವರ್ಷಕ್ಕೊಮ್ಮೆ ವೇತನ ಆಯೋಗ ಬದಲಿಸುತ್ತಾ ಹೋಗುತ್ತದೆ. 7ನೇ ವೇತನ ಆಯೋಗ 2014ರಲ್ಲಿ ರಚನೆಯಾಗಿತ್ತು. ಅದರ ಶಿಫಾರಸುಗಳು ಅನ್ವಯ ಆಗತೊಡಗಿದ್ದು 2016ರ ಜನವರಿಯಿಂದ. 8ನೇ ವೇತನ ಆಯೋಗ 2024ರಲ್ಲೇ ಆರಂಭವಾಗಬಹುದು. ಕೆಲ ವರದಗಿಗಳ ಪ್ರಕಾರ ಮುಂದಿನ ವರ್ಷ ಆಯೋಗದ ರಚನೆ ಆಗಬಹುದು. ಇದು ಮಾಡುವ ಶಿಫಾರಸುಗಳು 2026ರಿಂದ ಚಾಲನೆಗೆ ಬರುತ್ತದೆ.

ಇದನ್ನೂ ಓದಿ: 5,000 ಸ್ವಿಗ್ಗಿ ಉದ್ಯೋಗಿಗಳಿಗೆ 9,0000 ಕೋಟಿ ರೂ ಮೊತ್ತದ ಷೇರುಗಳು; ಕೋಟ್ಯಧಿಪತಿಗಳಾದ 500 ಮಂದಿ

ಉದ್ಯೋಗಿಗಳ ಒಕ್ಕೂಟಗಳು 8ನೇ ವೇತನ ಆಯೋಗ ಈಗಲೇ ರಚನೆಯಾಗಲಿ ಎಂದು ಒತ್ತಾಯ ಮಾಡುತ್ತಿವೆ. ಈ ಸಂಬಂಧ ಇತ್ತೀಚೆಗೆ ಕೇಂದ್ರ ಸಂಪುಟ ಕಾರ್ಯದರ್ಶಿಯವರನ್ನು ಭೇಟಿ ಕೂಡ ಮಾಡಿ ವಿನಂತಿಸಿಕೊಳ್ಳಲಾಗಿತ್ತು. 2026 ಇನ್ನೂ ದೂರ ಇರುವುದರಿಂದ ಈಗಲೇ ಆಯೋಗ ರಚನೆ ಮಾಡುವುದು ಅಪ್ರಸ್ತುತ ಎನ್ನುವಂತಹ ಅಭಿಪ್ರಾಯವನ್ನು ಕಾರ್ಯದರ್ಶಿಗಳು ನೀಡಿದರೆನ್ನಲಾಗಿದೆ.

ಎಂಟನೇ ವೇತನ ಆಯೋಗ; ಸಂಬಳ ಹೆಚ್ಚಳ ಎಷ್ಟಾಗಬಹುದು?

ಈಗಿನ 7ನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ಸಂಬಳವನ್ನು ಶೇ. 23ರಷ್ಟು ಹೆಚ್ಚಿಸಿದೆ. ಆದರೆ, ಹಿಂದಿನ ವೇತನ ಆಯೋಗ (6ನೆಯದು) ಮಾಡಿದ ಹೆಚ್ಚಳಕ್ಕೆ ಹೋಲಿಸಿದರೆ ಅದು ಕಡಿಮೆ ಇದೆ.

8ನೇ ವೇತನ ಆಯೋಗದಿಂದ ಬಹಳಷ್ಟು ನಿರೀಕ್ಷೆಗಳಿವೆ. ಅದರಲ್ಲಿ ಪ್ರಮುಖವಾದುದು ಕನಿಷ್ಠ ವೇತನದ ಹೆಚ್ಚಳ. ಸದ್ಯ ಕನಿಷ್ಠ ವೇತನ 18,000 ರೂ ಇದೆ. ಇದನ್ನು 34,500 ರೂಗೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಬಟ್ಲರ್ ಸುಬ್ಬಯ್ಯಗೂ ಪಾಲು; ವಿಲ್​ನಲ್ಲಿಲ್ಲ ಇತರ ಫ್ಯಾಮಿಲಿ ಸದಸ್ಯರ ಹೆಸರು

ಡಿಎ ಲೆಕ್ಕಾಚಾರ ವಿಧಾನ ಬದಲು?

ಹಣದುಬ್ಬರವನ್ನು ಸರಿದೂಗಿಸಲು ಉದ್ಯೋಗಿಗಳಿಗೆ ನೀಡಲಾಗುವ ತುಟ್ಟಿಭತ್ಯ, ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿ ಪರಿಹಾರದ ಮೊತ್ತವನ್ನು ಲೆಕ್ಕ ಮಾಡುವ ಸೂತ್ರ ಬದಲಾಯಿಸುವ ಸಾಧ್ಯತೆ ಇದೆ. ಸದ್ಯ 7ನೇ ವೇತನ ಆಯೋಗ ನಿಗದಿ ಮಾಡಿದ ಸೂತ್ರದ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ಲೆಕ್ಕ ಮಾಡಲಾಗುತ್ತಿದೆ. ಡಿಎ ಲೆಕ್ಕದ ಸೂತ್ರದಲ್ಲಿ ಬಳಸಲಾಗುವ ಹಣದುಬ್ಬರದಲ್ಲಿ ಆಹಾರವಸ್ತುಗಳ ಹಣದುಬ್ಬರವನ್ನೂ ಒಳಗೊಳ್ಳಲಾಗಿರುತ್ತದೆ. ಬಜೆಟ್ ಸಂದರ್ಭದಲ್ಲಿ ಬಿಡುಗಡೆ ಆದ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ಅಹಾರ ಹಣದುಬ್ಬರವನ್ನು ಹಣದುಬ್ಬರದ ಲೆಕ್ಕಕ್ಕೆ ಜೋಡಿಸಬಾರದು ಎನ್ನವು ಸಲಹೆ ನೀಡಿತ್ತು. ಹೀಗಾಗಿ, 8ನೇ ವೇತನ ಆಯೋಗವು ಡಿಎ ಮತ್ತು ಡಿಆರ್ ಲೆಕ್ಕಕ್ಕೆ ಸೂತ್ರವನ್ನು ಬದಲಿಸುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಡಿಎ ಮತ್ತು ಡಿಆರ್ ಏರಿಕೆ ಮೊದಲಿನದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ