ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಬಟ್ಲರ್ ಸುಬ್ಬಯ್ಯಗೂ ಪಾಲು; ವಿಲ್​ನಲ್ಲಿಲ್ಲ ಇತರ ಫ್ಯಾಮಿಲಿ ಸದಸ್ಯರ ಹೆಸರು

Ratan Tata's will: ರತನ್ ಟಾಟಾ ಅವರು ಸಾಯುವ ಮುನ್ನ ಬರೆದಿಟ್ಟಿದ್ದ ವಿಲ್​ನಲ್ಲಿ ತಮ್ಮ ನಂಬಿಕಸ್ಥರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಬಟ್ಲರ್ ಸುಬ್ಬಯ್ಯ, ಶಾಂತನು ನಾಯ್ಡು ಮತ್ತು ರಾಜನ್ ಶಾ ಅವರಿಗೆ ಟಾಟಾ ತಮ್ಮ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಾರೆ. ತಮ್ಮ ಪ್ರೀತಿಯ ಟಿಟೋ ನಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ರಾಜನ್ ಶಾಗೆ ವಹಿಸಿದ್ದಾರೆ.

ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಬಟ್ಲರ್ ಸುಬ್ಬಯ್ಯಗೂ ಪಾಲು; ವಿಲ್​ನಲ್ಲಿಲ್ಲ ಇತರ ಫ್ಯಾಮಿಲಿ ಸದಸ್ಯರ ಹೆಸರು
ರತನ್ ಟಾಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2024 | 6:21 PM

ಮುಂಬೈ, ನವೆಂಬರ್ 12: ರತನ್ ಟಾಟಾ ಅವರು ಬರೆದಿಟ್ಟ ಉಯಿಲಿನ ಸಂಗತಿ ಸ್ವಲ್ಪಸ್ವಲ್ಪವೇ ಹೊರಬರುತ್ತಿದೆ. ಲಕ್ಷಾಂತರ ಕೋಟಿ ರೂ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಅಗಲಿ ಅವರು ಹೋಗಿದ್ದಾರೆ. ವೈಯಕ್ತಿಕವಾಗಿ 10,000 ಕೋಟಿ ರೂ ಸಂಪತ್ತನ್ನು ಹೊಂದಿದ್ದ ಅವರು ಅಕ್ಟೋಬರ್ 9ರಂದು ಇಹಲೋಕ ತ್ಯಜಿಸಿದ್ದರು. ವೈಯಕ್ತಿಕ ಜೀವನದಲ್ಲಿ ಬಹಳ ಸರಳತೆ ಅಳವಡಿಸಿಕೊಂಡಿದ್ದ ರತನ್ ಟಾಟಾ ತನ್ನೊಂದಿಗಿದ್ದ ನಂಬಿಕಸ್ಥರನ್ನು ಸದಾ ಚೆನ್ನಾಗಿ ನೋಡಿಕೊಂಡವರು. ಸಾಯುವಾಗಲೂ ಅವರು ತಮ್ಮ ಆಪ್ತರನ್ನು ಮರೆಯಲಿಲ್ಲ. ತಮ್ಮ ಪ್ರೀತಿಯ ನಾಯಿಯನ್ನೂ ಅವರು ಮರೆಯಲಿಲ್ಲ.

ಟಿಟೋ ನಾಯಿ ಮತ್ತು ಅಡುಗೆಯವ

ರತನ್ ಟಾಟಾ ಅವರಿಗೆ ನಾಯಿಗಳೆಂದರೆ ಬಹಳ ಪ್ರಿಯ. ಅದರಲ್ಲೂ ತಮ್ಮ ಬಳಿ ಇದ್ದ ಟಿಟೋ ಎನ್ನುವ ಜರ್ಮನ್ ಶಫರ್ಡ್ ನಾಯಿ ಜೊತೆ ಅವರಿಗೆ ಅವಿನಾಭಾವ ಸಂಬಂಧ ಇತ್ತು. ತಮ್ಮ ಹಿಂದಿನ ಸಾಕುನಾಯಿಯೊಂದರ ಹೆಸರನ್ನು ಈ ನಾಯಿಗೆ ಇಟ್ಟಿದ್ದರು.

ತಮ್ಮ ವಿಲ್​ನಲ್ಲಿ ಅವರು ನಾಯಿ ಯೋಗಕ್ಷೇಮದ ಬಗ್ಗೆ ಬರೆದಿದ್ದಾರೆ. ತನ್ನ ನಿಧನದ ನಂತರ ಟಿಟೋವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದಿದ್ದು, ಅದರ ಹೊಣೆಗಾರಿಕೆಯನ್ನು ಅಡುಗೆ ಕೆಲಸಗಾರ ರಾಜನ್ ಶಾಗೆ ವಹಿಸಿದ್ದಾರೆ. ಈ ಕಾರ್ಯಕ್ಕಾಗಿ ರಾಜನ್ ಶಾ ಅವರಿಗೆ ರತನ್ ಟಾಟಾ ತಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ಬರೆದಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: ಬೆಳ್ಳಿಯನ್ನೂ ಹಿಂದಿಕ್ಕಿದ ಬಿಟ್​ಕಾಯಿನ್; ಮಾರುಕಟ್ಟೆ ಬಂಡವಾಳದಲ್ಲಿ ವಿಶ್ವದ 8ನೇ ಅತಿದೊಡ್ಡ ಆಸ್ತಿ

ಬಟ್ಲರ್ ಸುಬ್ಬಯ್ಯಗೂ ಆಸ್ತಿಯಲ್ಲಿ ಪಾಲು

ರತನ್ ಟಾಟಾ ವೈಯಕ್ತಿಕ ಜೀವನದಲ್ಲಿ ಬಹಳ ನಂಬಿಕಸ್ಥರಾಗಿ ಇದ್ದ ವ್ಯಕ್ತಿಗಳಲ್ಲಿ ಬಟ್ಲರ್ ಸುಬ್ಬಯ್ಯ ಒಬ್ಬರು. ಮೂರು ದಶಕಗಳಿಂದ ಟಾಟಾ ಜೊತೆಗಿದ್ದಾರೆ ಅವರು. ತಮ್ಮ ಕುಟುಂಬದ ಒಬ್ಬ ಸದಸ್ಯನೇ ಎನ್ನುವಂತೆ ಸುಬ್ಬಯ್ಯರನ್ನು ಟಾಟಾ ಪರಿಗಣಿಸಿದ್ದರು. ಪರಿಚಾರಿಕೆಯ ಕೆಲಸ ಮಾಡುತ್ತಿದ್ದ ಸುಬ್ಬಯ್ಯರಿಗೆ ಡಿಸೈನ್ ಬಟ್ಟೆಗಳನ್ನು ಟಾಟಾ ಕೊಡಿಸುತ್ತಿದ್ದುದುಂಟು. ಈಗ ಸಾಯುವ ಮುನ್ನ ಬರೆದಿಟ್ಟಿದ್ದ ವಿಲ್​ನಲ್ಲಿ ಬಟ್ಲರ್ ಸುಬ್ಬಯ್ಯರನ್ನೂ ಪ್ರಸ್ತಾಪಿಸಿದ್ದು, ಅವರಿಗೆ ಆಸ್ತಿಯಲ್ಲಿ ಪಾಲು ಕೊಟ್ಟಿರುವುದು ತಿಳಿದುಬಂದಿದೆ.

ಶಾಂತನು ನಾಯ್ಡುಗೂ ಪಾಲು

ಶಾಂತನು ನಾಯ್ಡು ಹೆಸರು ಬಹಳ ಜನರು ಕೇಳಿರಬಹುದು. ಈತ ರತನ್ ಟಾಟಾ ಜೊತೆ ಇತ್ತೀಚಿಗೆ ಕೆಲವಾರು ವರ್ಷಗಳಿಂದ ಸದಾ ಜೊತೆಯಲ್ಲಿರುತ್ತಿದ್ದ ಹುಡುಗ. ವೈಯಕ್ತಿಕವಾಗಿ ಟಾಟಾ ಅವರ ಯೋಗಕ್ಷೇಮಗಳನ್ನು ಈತ ನೋಡಿಕೊಳ್ಳುತ್ತಿದ್ದ. ಈತನ ಸ್ವಂತ ಬಿಸಿನೆಸ್​ಗೆ ನೀಡಿದ್ದ ಸಾಲವನ್ನು ರತನ್ ಟಾಟಾ ಸಾಯುವ ಮುನ್ನವೇ ಮನ್ನಾ ಮಾಡಿದ್ದರು. ಈಗ ಆಸ್ತಿಯಲ್ಲೂ ಒಂದಷ್ಟು ಪಾಲನ್ನು ಈತನಿಗೆ ಬರೆದಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾರತದಿಂದ ಸೋಲಾರ್ ಪಿವಿ ಮಾಡ್ಯೂಲ್​ಗಳ ರಫ್ತು ಎರಡು ವರ್ಷದಲ್ಲಿ 23 ಪಟ್ಟು ಹೆಚ್ಚಳ

ರತನ್ ಟಾಟಾ ಅವರ ಹೆಚ್ಚಿನ ಸಂಪತ್ತು ಇರುವುದು ಷೇರುಗಳಲ್ಲಿ ಮತ್ತು ರಿಯಲ್ ಎಸ್ಟೇಟ್​​ನಲ್ಲಿ. ಅವರ ಈ ಸಂಪತ್ತು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್​ಗೆ ವರ್ಗಾವಣೆ ಆಗಲಿದೆ. ಫಿಕ್ಸೆಡ್ ಡೆಪಾಸಿಟ್​ನಲ್ಲಿರುವ ಹಣದಲ್ಲಿ ಕೆಲ ಭಾಗವನ್ನು ಸುಬ್ಬಯ್ಯ, ಶಾಂತನು, ರಾಜನ್ ಮೊದಲಾದವರಿಗೆ ಕೊಡಬಹುದು. ಯಾರ್ಯಾರಿಗೆ ಏನೇನು ಸಿಗುತ್ತದೆ, ಎಷ್ಟೆಷ್ಟು ಸಿಗುತ್ತದೆ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದಿಲ್ಲ.

ಇಲ್ಲಿ ಕುತೂಹಲದ ಮತ್ತೊಂದು ಸಂಗತಿ ಎಂದರೆ ಈಗಿನ ಟಾಟಾ ಟ್ರಸ್ಟ್​ಗಳ ಮುಖ್ಯಸ್ಥ ನೋಯಲ್ ಟಾಟಾ ಹಾಗೂ ಅವರ ಕುಟುಂಬ ಸದಸ್ಯರ ಹೆಸರನ್ನು ರತನ್ ತಮ್ಮ ವಿಲ್​​ನಲ್ಲಿ ಪ್ರಸ್ತಾಪಿಸಿಲ್ಲ. ರತನ್ ಟಾಟಾ ಅವರ ತಂದೆಯ ಎರಡನೇ ಪತ್ನಿಯಾದ ಸಿಮೋನ್ ಅವರ ಮಗ ನೋಯಲ್ ಟಾಟಾ. ಇವರಿಗೆ ಮೂರು ಮಕ್ಕಳಿದ್ದಾರೆ. ಎಲ್ಲರೂ ಕೂಡ ಟಾಟಾ ಗ್ರೂಪ್​ನ ವಿವಿಧ ಬಿಸಿನೆಸ್​ಗಳಲ್ಲಿ ಜೋಡಿತರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ