ಬೆಳ್ಳಿಯನ್ನೂ ಹಿಂದಿಕ್ಕಿದ ಬಿಟ್​ಕಾಯಿನ್; ಮಾರುಕಟ್ಟೆ ಬಂಡವಾಳದಲ್ಲಿ ವಿಶ್ವದ 8ನೇ ಅತಿದೊಡ್ಡ ಆಸ್ತಿ

Bitcoin overtakes silver: ಬಿಟ್​ಕಾಯಿನ್ ಬೆಲೆ ಮಂಗಳವಾರ 90,000 ಡಾಲರ್ ಸಮೀಪಕ್ಕೆ ಹೋಗಿದೆ. ಈ ಹಂತದಲ್ಲಿ ವಿಶ್ವದ ಅತ್ಯಂತ ಮೌಲ್ಯಯುತ ಆಸ್ತಿಗಳ ಪಟ್ಟಿಯಲ್ಲಿ ಬೆಳ್ಳಿಯನ್ನೂ ಹಿಂದಿಕ್ಕಿತ್ತು ಬಿಟ್​​ಕಾಯಿನ್. ಈ ಕ್ರಿಪ್ಟೋದ ಮಾರುಕಟ್ಟೆ ಬಂಡವಾಳ 1.752 ಟ್ರಿಲಿಯನ್ ಡಾಲರ್ ತಲುಪಿತ್ತು. ಬೆಳ್ಳಿಯ ಒಟ್ಟು ಮವಲ್ಯ 1.726 ಟ್ರಿಲಿಯನ್ ಡಾಲರ್ ಇದೆ.

ಬೆಳ್ಳಿಯನ್ನೂ ಹಿಂದಿಕ್ಕಿದ ಬಿಟ್​ಕಾಯಿನ್; ಮಾರುಕಟ್ಟೆ ಬಂಡವಾಳದಲ್ಲಿ ವಿಶ್ವದ 8ನೇ ಅತಿದೊಡ್ಡ ಆಸ್ತಿ
ಬಿಟ್​ಕಾಯಿನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2024 | 5:44 PM

ನವದೆಹಲಿ, ನವೆಂಬರ್ 12: ಬಿಟ್​ಕಾಯಿನ್ ಬೆಲೆ ರಾಕೆಟ್​ನಂತೆ ಮೇಲೇರುತ್ತಿದೆ. ಮೊನ್ನೆ ಮೊದಲ ಬಾರಿಗೆ 80,000 ಡಾಲರ್ ಬೆಲೆ ಗಡಿ ದಾಟಿ ಇತಿಹಾಸ ಸೃಷ್ಟಿಸಿದ್ದ ಬಿಟ್​ಕಾಯಿನ್ ಈಗ ಹೊಸ ಗರಿಷ್ಠ ಮಟ್ಟ ಮುಟ್ಟಿದೆ. ಇವತ್ತು ಒಂದು ಹಂತದಲ್ಲಿ ಬಹುತೇಕ 90,000 ಡಾಲರ್ ಗಡಿ ಸಮೀಪಕ್ಕೆ ಬಿಟ್​ಕಾಯಿನ್ ಬೆಲೆ ಹೋಗಿತ್ತು. ಈ ಮಧ್ಯೆ ಬಿಟ್​ಕಾಯಿನ್ ಜಗತ್ತಿನ ಅತಿಮೌಲ್ಯಯುತ ಆಸ್ತಿಗಳ ಸಾಲಿನಲ್ಲಿದೆ. ಮಾರುಕಟ್ಟೆ ಬಂಡವಾಳದಲ್ಲಿ ಬೆಳ್ಳಿಯನ್ನೂ ಅದು ಹಿಂದಿಕ್ಕಿದೆ.

ಬಿಟ್​ಕಾಯಿನ್​ನ ಒಟ್ಟು ಮಾರುಕಟ್ಟೆ ಬಂಡವಾಳ 1.752 ಟ್ರಿಲಿಯನ್ ಡಾಲರ್​ನಷ್ಟಿದೆ. ಅಂದರೆ ಸುಮಾರು 175 ಲಕ್ಷ ಕೋಟಿ ರೂನಷ್ಟು ಮೌಲ್ಯದ ಬಿಟ್​ಕಾಯಿನ್​ಗಳನ್ನು ಜನರು ಹೊಂದಿದ್ದಾರೆ. ಅದೇ ಬೆಳ್ಳಿಯ ಮಾರುಕಟ್ಟೆ ಬಂಡವಾಳ 1.726 ಟ್ರಿಲಿಯನ್ ಡಾಲರ್ ಇದೆ. ಇದು ಇಂದು ಮಂಗಳವಾರ ಬೆಳಗ್ಗೆಗೆ ಲಭ್ಯ ಇದ್ದ ದತ್ತಾಂಶ. ಸಂಜೆಯ ವೇಳೆಗೆ ಬಿಟ್​​ಕಾಯಿನ್ ಬೆಲೆ ತುಸು ಕಡಿಮೆ ಆಗಿದೆ. ಅದರ ಮಾರುಕಟ್ಟೆ ಬಂಡವಾಳ ಬಹುಶಃ ಬೆಳ್ಳಿಯದಕ್ಕಿಂತಲೂ ತಸು ಕಡಿಮೆ ಆಗಿರಬಹುದು.

ಇದನ್ನೂ ಓದಿ: ಭಾರತದಿಂದ ಸೋಲಾರ್ ಪಿವಿ ಮಾಡ್ಯೂಲ್​ಗಳ ರಫ್ತು ಎರಡು ವರ್ಷದಲ್ಲಿ 23 ಪಟ್ಟು ಹೆಚ್ಚಳ

ಇಲ್ಲಿ ಮಾರುಕಟ್ಟೆ ಬಂಡವಾಳ ಎಂದರೆ, ಒಂದು ಆಸ್ತಿಯ ಮೇಲೆ ಮಾಡಲಾಗಿರುವ ಹೂಡಿಕೆ ಹಾಗೂ ಅದರ ಒಟ್ಟು ಮೌಲ್ಯವಾಗಿರುತ್ತದೆ. ಹಾಗೆ ನೋಡಿದರೆ ಜಗತ್ತಿನಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಆಸ್ತಿ ಎಂದರೆ ಅದು ಚಿನ್ನ. ಈ ಹಳದಿ ಲೋಹದ ಮಾರ್ಕೆಟ್ ಕ್ಯಾಪ್ ಬರೋಬ್ಬರಿ 17.6 ಟ್ರಿಲಿಯನ್ ಡಾಲರ್ ಇದೆ. ಹೆಚ್ಚೂಕಡಿಮೆ ಚೀನಾದ ಜಿಡಿಪಿಗೆ ಇದು ಸಮವಾಗಿದೆ.

ಕುತೂಹಲ ಎಂದರೆ ಮಾರುಕಟ್ಟೆ ಬಂಡವಾಳದಲ್ಲಿ ಚಿನ್ನದ ನಂತರದ ನಾಲ್ಕು ಸ್ಥಾನದಲ್ಲಿರುವುದು ಷೇರುಗಳೇ. ನಿವಿಡಿಯಾ, ಆ್ಯಪಲ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಷೇರುಗಳು ಟಾಪ್-5 ಪಟ್ಟಿಯಲ್ಲಿವೆ.

ಭಾರತದಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಷೇರು ರಿಲಾಯನ್ಸ್ ಇಂಡಸ್ಟ್ರೀಸ್​ನದ್ದು. ಇದರ ಮಾರ್ಕೆಟ್ ಕ್ಯಾಪ್ 200 ಬಿಲಿಯನ್ ಡಾಲರ್​ನಷ್ಟಿದೆ. ಟಾಪ್ 50 ಭಾರತೀಯ ಕಂಪನಿಗಳನ್ನು ಸೇರಿಸಿದರೂ ಬಿಟ್​ಕಾಯಿನ್​ ಸಮಕ್ಕೆ ಮಾರುಕಟ್ಟೆ ಬಂಡವಾಳ ಇಲ್ಲ.

ಇದನ್ನೂ ಓದಿ: ಒಂದು ಬಿಟ್​ಕಾಯಿನ್ 68 ಲಕ್ಷ ರೂ; ಕ್ರಿಪ್ಟೋಕರೆನ್ಸಿ ಬೆಲೆ ಈ ಪರಿ ಏರಿಕೆ ಯಾಕೆ? ಭಾರತದಲ್ಲಿ ಹೂಡಿಕೆಗೆ ಅವಕಾಶವಿದೆಯಾ?

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವುದು ನಿಶ್ಚಿತವಾಗುತ್ತಿದ್ದಂತೆಯೇ ಬಿಟ್​ಕಾಯಿನ್ ಬೆಲೆ ಗಗನಕ್ಕೇರತೊಡಗಿದೆ. ಟ್ರಂಪ್ ಹಿಂದೆಂದಿಗಿಂತಲೂ ಈಗ ಕ್ರಿಪ್ರೋಕರೆನ್ಸಿಗಳ ಬೆಂಬಲಿಗರಾಗಿದ್ದಾರೆ. ಟ್ರಂಪ್​ನ ಪ್ರಮುಖ ಬೆಂಬಲಿಗರಾದ ಇಲಾನ್ ಮಸ್ಕ್ ಅವರೂ ಕೂಡ ಕ್ರಿಪ್ಟೋ ಸಮರ್ಥಕರೇ ಆಗಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಿಟ್​​ಕಾಯಿನ್ ಸೇರಿದಂತೆ ವಿವಿಧ ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಗಣನೀಯವಾಗಿ ಹೆಚ್ಚಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ