ಪಿಎಂ ಇಂಟರ್ನ್​ಶಿಪ್ ಸ್ಕೀಮ್: ನ. 15, ಶುಕ್ರವಾರ ನೊಂದಣಿಗೆ ಕೊನೆಯ ದಿನ; ತ್ವರೆ ಮಾಡಿ…

PM Internship scheme, last date for registration: ಪಿಎಂ ಇಂಟರ್ನ್​ಶಿಪ್ ಯೋಜನೆಗೆ ನೊಂದಾಯಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇನ್ನು ಎರಡು ದಿನ ಮಾತ್ರವೇ ಬಾಕಿ ಇದೆ. ನಿರುದ್ಯೋಗಿ ಯುವಕರು, ಈಗಷ್ಟೇ ಓದು ಮುಗಿಸಿದವರಿಗೆ ಈ ಸ್ಕೀಮ್ ವರದಾನವಾಗಿದೆ. ತಮ್ಮ ಪರಿಣತಿ ಮತ್ತು ಆಸಕ್ತಿ ಇರುವ ಕ್ಷೇತ್ರಗಳ ಕಂಪನಿಗಳಲ್ಲಿ ಒಂದು ವರ್ಷ ಇಂಟರ್ನ್ ಆಗಿ ಕೆಲಸ ಮಾಡುವ ಅವಕಾಶ ಯುವಕರಿಗೆ ಸಿಗುತ್ತದೆ.

ಪಿಎಂ ಇಂಟರ್ನ್​ಶಿಪ್ ಸ್ಕೀಮ್: ನ. 15, ಶುಕ್ರವಾರ ನೊಂದಣಿಗೆ ಕೊನೆಯ ದಿನ; ತ್ವರೆ ಮಾಡಿ...
ಉದ್ಯೋಗಾಕಾಂಕ್ಷಿಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2024 | 5:32 PM

ನವದೆಹಲಿ, ನವೆಂಬರ್ 13: ಯುವಜನರಲ್ಲಿ ಉದ್ದಿಮೆಯ ನೈಜ ಕೌಶಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭಿಸಲಾದ ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್​ಲೈನ್ ಸಮೀಪಿಸಿದೆ. ನವೆಂಬರ್ 15ಕ್ಕೆ ಅರ್ಜಿ ಸಲ್ಲಿಕೆ ಅವಕಾಶ ಮುಕ್ತಾಯವಾಗುತ್ತದೆ. ಯುವಜನರಲ್ಲಿ ಅವಶ್ಯಕ ಕೌಶಲ್ಯಗಳನ್ನು ಒದಗಿಸಿ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಇಂಟರ್ನ್​ಶಿಪ್ ಸ್ಕೀಮ್ ಅನ್ನು ನಡೆಸಲಾಗುತ್ತಿದೆ. ದೇಶದ ಟಾಪ್-500 ಕಂಪನಿಗಳಲ್ಲಿ ಒಂದು ವರ್ಷ ಇಂಟರ್ನ್​ಶಿಪ್ ಮಾಡುವ ಅವಕಾಶ ಇದೆ. ಸರ್ಕಾರದಿಂದ ಅಭ್ಯರ್ಥಿಗಳಿಗೆ ಸಹಾಯಧನವೂ ಸಿಗುತ್ತದೆ.

ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಯಾರು ಅರ್ಹರು?

  • ಇಂಟರ್ನ್​ಶಿಪ್ ಬಯಸುವ ಅಭ್ಯರ್ಥಿಗಳ ವಯಸ್ಸು 21ರಿಂದ 24 ವರ್ಷ ಇರಬೇಕು.
  • ಎಲ್ಲಿಯೂ ಪೂರ್ಣಾವಧಿ ಉದ್ಯೋಗದಲ್ಲಿರುವಂತಿಲ್ಲ.
  • ಪೂರ್ಣಾವಧಿ ಶಿಕ್ಷಣದಲ್ಲಿ ತೊಡಗಿರುವಂತಿಲ್ಲ.
  • ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಪಾಲಿಟೆಕ್ನಿಕ್ ಡಿಪ್ಲೊಮಾ, ಪದವಿ ಓದಿರಬೇಕು. ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ, ಬಿಫಾರ್ಮಾ ಇತ್ಯಾದಿ ಪದವೀಧರರು.
  • ಐಐಟಿಯಂತಹ ದೊಡ್ಡ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಮಾಡಿದವರಿಗೆ ಅವಕಾಶ ಇರುವುದಿಲ್ಲ. ಸಿಎ, ಎಂಬಿಬಿಎಸ್ ಇತ್ಯಾದಿ ವೃತ್ತಿಪರ ಶಿಕ್ಷಣದಲ್ಲಿ ಪದವಿ ಪಡೆದವರಿಗೂ ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ಬಡ್ಡಿದರ ಫೆಬ್ರುವರಿಯಲ್ಲೂ ಕಡಿಮೆ ಮಾಡುವ ಸಾಧ್ಯತೆ ಇಲ್ಲ: ಎಸ್​ಬಿಐ ರಿಸರ್ಚ್

ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಅಭ್ಯರ್ಥಿಗಳಿಗೆ ಏನು ಲಾಭ?

ಐಟಿ ಕಂಪನಿಗಳಿಂದ ಹಿಡಿದು ಜವಳಿ ಉದ್ಯಮದವರೆಗೂ ವಿವಿಧ ಕ್ಷೇತ್ರಗಳಲ್ಲಿರುವ 300ಕ್ಕೂ ಅಧಿಕ ಪ್ರಮುಖ ಕಂಪನಿಗಳು ಈ ವರ್ಷ ಇಂಟರ್ನ್​ಶಿಪ್ ಆಫರ್ ಮಾಡುತ್ತಿವೆ. ಅಭ್ಯರ್ಥಿಗಳು ತಮ್ಮಿಚ್ಛೆಯ ಕ್ಷೇತ್ರದಲ್ಲಿ ಇಂಟರ್ನ್ ಆಗುವ ಅವಕಾಶ ನೀಡಲಾಗುತ್ತದೆ. ಒಂದು ವರ್ಷ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡಬಹುದು.

ಯೋಜನೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಸರ್ಕಾರ ಲಂಪ್ಸಮ್ ಆಗಿ 6,000 ರೂ ಒದಗಿಸುತ್ತದೆ. ಜೊತೆಗೆ, ಇಂಟರ್ನ್​ಶಿಪ್​ನ ಒಂದು ವರ್ಷದಲ್ಲಿ ಪ್ರತೀ ತಿಂಗಳು 4,500 ರೂ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಕಂಪನಿ ವತಿಯಿಂದಲೂ ಮಾಸಿಕವಾಗಿ 500 ರೂವರೆಗೆ ನೀಡಲಾಗುತ್ತದೆ. ತಿಂಗಳಿಗೆ ಒಟ್ಟು 5,000 ರೂ ಹಣವನ್ನು ಈ ತರಬೇತಿ ಅವಧಿಯಲ್ಲಿ ಪಡೆಯಬಹುದು.

ಇದನ್ನೂ ಓದಿ: ಈ ವರ್ಷವೇ ರಚನೆಯಾಗುತ್ತಾ 8ನೇ ವೇತನ ಆಯೋಗ? ಕನಿಷ್ಠ ವೇತನ ಡಬಲ್ ಆಗುತ್ತಾ? ಇಲ್ಲಿದೆ ಮಾಹಿತಿ

ಇಂಟರ್ನ್​ಶಿಪ್ ಅವಧಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ಸರ್ಕಾರದ ವತಿಯಿಂದ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪಿಎಂ ಸುರಕ್ಷಾ ಬಿಮಾ ಯೋಜನೆಯ ನೆರವು ಸಿಗುತ್ತದೆ. ಇದರ ಜೊತೆಗೆ ಕಂಪನಿ ವತಿಯಿಂದ ಹೆಚ್ಚುವರಿ ಅಪಘಾತ ವಿಮಾ ಕವರೇಜ್ ಕೂಡ ಸಿಗುತ್ತದೆ.

ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ, ಅಭ್ಯರ್ಥಿಗಳಿಗೆ ಬಹುತೇಕ ನೈಜ ಕೆಲಸದ ಅನುಭವ ಸಿಗುತ್ತದೆ. ಈ ಅನುಭವವನ್ನು ಬಳಸಿಕೊಂಡು ಅವರು ಬೇರೆ ಉದ್ಯೋಗಗಳನ್ನು ಅರಸಬಹುದು. ಅದೇ ಕಂಪನಿ ಇಚ್ಛಿಸಿದರೆ ಇವರನ್ನು ಪೂರ್ಣಾವಧಿ ಉದ್ಯೋಗಿಯಾಗಿ ನೇಮಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ