ಪಿಎಂ ಕಿಸಾನ್ 20ನೇ ಕಂತಿನ ಹಣ ಬಂದಿಲ್ಲವಾ? ಈ ಕಾರಣಗಳಿದ್ದೀತು ಗಮನಿಸಿ

PM Kisan scheme 20th installment: ಪಿಎಂ ಕಿಸಾನ್ ಸಮ್ಮಾನ್ ನಿಧಿ ರೈತರಿಗೆಂದು ಸರ್ಕಾರ ರೂಪಿಸಿರುವ ಯೋಜನೆ. ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎನಿಸಿದೆ. ಈ ಯೋಜನೆ ಅಡಿ 20ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಆಗಸ್ಟ್ 2ರಂದು ಬಿಡುಗಡೆ ಮಾಡಿದ್ದಾರೆ. ನೀವು ಯೋಜನೆಗೆ ನೊಂದಾಯಿಸಿಕೊಂಡಿದ್ದು, ಕಂತಿನ ಹಣ ಸಿಗದೇ ಹೋದರೆ ಕೆಲ ಕಾರಣಗಳಿರಬಹುದು, ಅದರ ವಿವರ ಇಲ್ಲಿದೆ...

ಪಿಎಂ ಕಿಸಾನ್ 20ನೇ ಕಂತಿನ ಹಣ ಬಂದಿಲ್ಲವಾ? ಈ ಕಾರಣಗಳಿದ್ದೀತು ಗಮನಿಸಿ
ರೈತ

Updated on: Aug 03, 2025 | 11:47 AM

ವಾರಾಣಸಿ, ಆಗಸ್ಟ್ 3: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Scheme) ಅಡಿ 20ನೇ ಕಂತಿಗೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಶನಿವಾರ 20,500 ಕೋಟಿ ರೂ ಬಿಡುಗಡೆ ಮಾಡಿದರು. 9.7 ಕೋಟಿಗೂ ಅಧಿಕ ರೈತರಿಗೆ (Farmers) ಅವರ ಬ್ಯಾಂಕ್ ಖಾತೆಗೆ 2,000 ರೂ ಹಣ ನೇರವಾಗಿ ವರ್ಗಾವಣೆ ಆಗಿದೆ. ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದರು.

ಪಿಎಂ ಕಿಸಾನ್ ಯೋಜನೆ ಯಾವುದು?

ಕೃಷಿಕರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಸರ್ಕಾರ ವರ್ಷಕ್ಕೆ ಮೂರು ಬಾರಿ ಉಚಿತವಾಗಿ 2,000 ರೂ ಹಣವನ್ನು ಸಹಾಯವಾಗಿ ನೀಡುತ್ತದೆ. ಒಂದು ವರ್ಷದಲ್ಲಿ 6,000 ರೂ ಹಣ ಬಿಡುಗಡೆ ಆಗುತ್ತದೆ. 2019ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಇಲ್ಲಿಯವರೆಗೆ 20 ಕಂತುಗಳು ಬಿಡುಗಡೆ ಆಗಿವೆ.

ಇದನ್ನೂ ಓದಿ: ಜುಲೈನಲ್ಲಿ ಒಟ್ಟು ಜಿಎಸ್​ಟಿ 1.96 ಲಕ್ಷ ಕೋಟಿ ರೂ, ನಿವ್ವಳ ಸಂಗ್ರಹ 1.69 ಲಕ್ಷ ಕೋಟಿ ರೂ

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?

ಕೃಷಿ ಜಮೀನು ಮಾಲಿಕತ್ವ ಹೊಂದಿರುವ ಯಾವುದೇ ರೈತನೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಅರ್ಹರಿರುತ್ತಾರೆ.

ಪಿಎಂ ಕಿಸಾನ್ ಯೋಜನೆಗೆ ಅನರ್ಹರು ಯಾರು?

ಕೃಷಿ ಜಮೀನು ಮಾಲಿಕತ್ವ ಹೊಂದಿದ್ದಾಗ್ಯೂ ಈ ಕೆಳಗಿನ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ:

ಸಾಂವಿಧಾನಿಕ ಹುದ್ದೆ, ಸಚಿವರು, ಸಂಸದರು, ಶಾಸಕರು, ಮೇಯರ್, ಜಿಲ್ಲಾ ಪಂಚಾಯತ್ ಛೇರ್ಮನ್, ಸರ್ಕಾರಿ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು ಹಾಲಿ ಅಥವಾ ಮಾಜಿಗಳು ಯಾರೇ ಆದರೂ ಕುಟುಂಬದಲ್ಲಿ ಇದ್ದರೆ ಅವರಿಗೆ ಪಿಎಂ ಕಿಸಾನ್ ಯೋಜನೆ ಲಭ್ಯ ಇರುವುದಿಲ್ಲ.

ಇದನ್ನೂ ಓದಿ: ಮಿತ್ರದೇಶಗಳಿಗೂ ಟ್ರಂಪ್ ಟ್ಯಾರಿಫ್ ಬರೆ; ವಿವಿಧ ದೇಶಗಳಿಗೆ ಅಮೆರಿಕ ವಿಧಿಸಿದ ಸುಂಕಗಳ ಪಟ್ಟಿ

ಪೋಷಕರು ಬದುಕಿರುವಾಗ, ಅವರಿಂದ ಜಮೀನು ವರ್ಗಾವಣೆಯಾಗಿ ಅದರ ಮಾಲಿಕತ್ವ ಹೊಂದಿರುವ ಮಕ್ಕಳಿಗೂ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ.

ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ನೊಂದಾವಣಿ ಮಾಡಿಕೊಂಡಿದ್ದರೂ ಇಕೆವೈಸಿ ಮಾಡದ ರೈತರಿಗೂ ಹಣ ಸಿಕ್ಕೋದಿಲ್ಲ. ಅಥವಾ ಬ್ಯಾಂಕ್ ಅಕೌಂಟ್​​ಗೆ ಆಧಾರ್ ಲಿಂಕ್ ಆಗದೇ ಹೋದರೂ ಹಣ ಬಂದಿರುವುದಿಲ್ಲ. ಆಧಾರ್ ಮೂಲಕ ಇಕೆವೈಸಿ ಜೊತೆಗೆ ಜಮೀನು ದಾಖಲೆಗಳನ್ನೂ ಕೂಡ ಮತ್ತೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಇದು ಮಾಡಿಲ್ಲದೇ ಹೋದರೆ ಕಿಸಾನ್ ಹಣ ಬರೋದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ