AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್ ಯೋಜನೆ: ನೊಂದಾಯಿಸಿಯೂ ಹಣ ಸಿಗದಿದ್ದರೆ ನಿರಾಸೆ ಬೇಡ; ಹಣ ತಲುಪಿಸಲು ನಡೆದಿದೆ ಅಭಿಯಾನ

PM Kisan Samman Nidhi Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೊಂದಾಯಿಸಿಯೂ ಹಣ ಸಿಗದೇ ಇದ್ದ ರೈತನ್ನು ತಲುಪಲು ಸರ್ಕಾರ ಅಭಿಯಾನ ಆರಂಭಿಸಿದೆ. ದೇಶಾದ್ಯಂತ ಸಾವಿರಾರು ಕಡೆ ಕಾಮನ್ ಸರ್ವಿಸ್ ಸೆಂಟರ್ ಶಿಬಿರಗಳನ್ನು ತೆರೆದು ಸಂತ್ರಸ್ತರಿಗೆ ಪರಿಹಾರ ಕೊಡುವ ಪ್ರಯತ್ನವಾಗಲಿದೆ. ಇ-ಕೆವೈಸಿ ಆಗದಿದ್ದರೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಪಿಎಂ ಕಿಸಾನ್ ಹಣ ಬರದೇ ಹೋಗಿರುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆ: ನೊಂದಾಯಿಸಿಯೂ ಹಣ ಸಿಗದಿದ್ದರೆ ನಿರಾಸೆ ಬೇಡ; ಹಣ ತಲುಪಿಸಲು ನಡೆದಿದೆ ಅಭಿಯಾನ
ಪಿಎಂ ಕಿಸಾನ್ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2024 | 6:21 PM

Share

ನವದೆಹಲಿ, ಫೆಬ್ರುವರಿ 12: ಕೇಂದ್ರ ಸರ್ಕಾರ ರೈತರ ವ್ಯವಸಾಯ ಕಾರ್ಯಕ್ಕೆಂದು ನೆರವಾಲು ನಡೆಸುತ್ತಿರುವ ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Samman Nidhi Yojana) ಫಲಾನುಭವಿ ರೈತರಿಗೆ ವರ್ಷಕ್ಕೆ 6,000 ರೂ ಧನಸಹಾಯ ಸಿಗುತ್ತದೆ. 9 ಕೋಟಿಗೂ ಹೆಚ್ಚು ಮಂದಿ ರೈತರು ಈ ಸ್ಕೀಮ್​ಗೆ ನೊಂದಾಯಿತರಾಗಿದ್ದು ಪ್ರತೀ ನಾಲ್ಕು ತಿಂಗಳಿಗೆ 2,000 ರೂ ಹಣವನ್ನು ತಮ್ಮ ಅಕೌಂಟ್​ಗಳಲ್ಲಿ ಪಡೆಯುತ್ತಾರೆ. 2019ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ಈವರೆಗೆ 15 ಕಂತುಗಳ ಹಣವು ರೈತರ ಖಾತೆಗಳಿಗೆ ವರ್ಗಾವಣೆ ಆಗಿದೆ. 16ನೇ ಕಂತಿನ ಹಣ ಈ ತಿಂಗಳು ಅಥವಾ ಮಾರ್ಚ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಆದರೆ, ಯೋಜನೆಯಲ್ಲಿ ತಮ್ಮ ಹೆಸರು ನೊಂದಾಯಿಸಲಾಗಿದ್ದರೂ ಖಾತೆಗೆ ಹಣ ಬಂದಿಲ್ಲ ಎಂದು ಹಲವಾರು ರೈತರು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಇಂದು ಅಭಿಯಾನ ಆರಂಭಿಸಿದೆ.

ಇಂದಿನಿಂದ (ಫೆ. 12) ಹತ್ತು ದಿನಗಳ (ಫೆ. 21) ಕಾಲ ಕೃಷಿ ಸಚಿವಾಲಯವು ಈ ಅಭಿಯಾನ ಕೈಗೊಂಡಿದೆ. ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಈ ಕಾರ್ಯದಲ್ಲಿ ಸಹಕಾರ ತೋರಲಿದ್ದು, ನಾಲ್ಕು ಲಕ್ಷ ಸಿಎಸ್​ಸಿ ಕೇಂದ್ರಗಳ ಮೂಲಕ ಅರ್ಹ ರೈತರಿಗೆ ಅವರ ಹಣ ಸಿಗದೇ ಹೋಗಲು ಕಾರಣವೇನೆಂದು ಪತ್ತೆ ಹಚ್ಚಿ ಪರಿಹಾರ ಒದಗಿಸುವ ಕಾರ್ಯ ಮಾಡಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರ ಇಳಿಕೆ; ಜನವರಿ ತಿಂಗಳ ಇನ್​ಫ್ಲೇಶನ್ ಶೇ. 5.1; ಸರ್ಕಾರದಿಂದ ದತ್ತಾಂಶ ಬಿಡುಗಡೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೊಂದಾವಣಿ ಮಾಡಿದ ಅರ್ಹ ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿಲ್ಲ ಎಂದರೆ ಅದಕ್ಕೆ ಎರಡು ಸಂಭಾವ್ಯ ಕಾರಣ ಇರಬಹುದು ಎಂದು ಸರ್ಕಾರಿ ಅಧಿಕಾರಿಗಳು ಭಾವಿಸಿದ್ದಾರೆ. ಒಂದನೆಯ ಕಾರಣವೆಂದರೆ ಇ-ಕೆವೈಸಿ ಅಪ್​ಡೇಟ್ ಆಗಿಲ್ಲದೇ ಇರಬಹುದು. ಇನ್ನೊಂದು ಸಂಭಾವ್ಯ ಕಾರಣವೆಂದರೆ ಯೋಜನೆಗೆ ನೀಡಲಾದ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿಲ್ಲದೇ ಇರಬಹುದು.

ಯಾವ್ಯಾವ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲ ಎಂಬುದನ್ನು ಮೊದಲು ಗುರುತಿಸಲಾಗುತ್ತದೆ. ವಿವಿಧೆಡೆ ಕಾಮನ್ ಸರ್ವಿಸ್ ಸೆಂಟರ್ ಕ್ಯಾಂಪ್​ಗಳನ್ನು ಜಿಲ್ಲಾಡಳಿತ ಸ್ಥಾಪಿಸಲಿದೆ. ಈ ಕ್ಯಾಂಪ್​ನಲ್ಲಿರುವ ಎಕ್ಸಿಕ್ಯೂಟಿವ್​ಗಳು ಸಂತ್ರಸ್ತರ ರೈತರ ಸಮಸ್ಯೆಯನ್ನು ಗುರುತಿಸಿ ಅದನ್ನು ಸ್ಥಳದಲ್ಲೇ ಸರಿಪಡಿಸಲು ಯತ್ನಿಸಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲದವರು ತಮ್ಮ ಸಮೀಪದ ಇಂಥ ಒಂದು ಕ್ಯಾಂಪ್​ಗೆ ಭೇಟಿ ನೀಡಿ ತಮ್ಮ ಸಮಸ್ಯೆ ತಿಳಿಸಬಹುದು.

ಇದನ್ನೂ ಓದಿ: ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ವರ್ಷಕ್ಕೆ ಕೇವಲ 436 ರೂ ಪ್ರೀಮಿಯಮ್; 2 ಲಕ್ಷ ರೂ ಕವರೇಜ್

ಫೆಬ್ರುವರಿ 21ರವರೆಗೆ ಕಾಲಾವಕಾಶ ಇದೆ. ಸಿಎಸ್​ಸಿ ಸೆಂಟರ್​ಗೆ ಹೋಗುವಾಗ ಆಧಾರ್, ಇತ್ಯಾದಿ ದಾಖಲೆಗಳ್ನು ತೆಗೆದುಕೊಂಡು ಹೋಗಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್