ಬೆಂಗಳೂರು, ಏಪ್ರಿಲ್ 7: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಇಲ್ಲಿಯವರೆಗೆ 19 ಕಂತುಗಳ ಹಣ ಬಿಡುಗಡೆ ಆಗಿದೆ. 2018ರ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ಕೇಂದ್ರ ಸರ್ಕಾರ ಫಲಾನುಭವಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳನ್ನು ಬಿಡುಗಡೆ ಮಾಡುತ್ತದೆ. ಪ್ರತೀ ಕಂತು ಎರಡು ಸಾವಿರ ರೂ ಮೊತ್ತದ್ದಾಗಿರುತ್ತದೆ. ದೇಶಾದ್ಯಂತ 8-12 ಕೋಟಿ ಫಲಾನುಭವಿಗಳಿದ್ದಾರೆ. 19ನೇ ಕಂತಿನ ಹಣವನ್ನು 2025ರ ಫೆಬ್ರುವರಿ 19ರಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 9.8 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಈಗ 20ನೇ ಕಂತಿನ ಹಣಕ್ಕೆ ಎದುರು ನೋಡಲಾಗುತ್ತಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳನ್ನು ನೀಡಲಾಗುತ್ತದೆ. ಡಿಸೆಂಬರ್ನಿಂದ ಮಾರ್ಚ್ವರೆಗೆ, ಏಪ್ರಿಲ್ನಿಂದ ಜುಲೈವರೆಗೆ, ಆಗಸ್ಟ್ನಿಂದ ನವೆಂಬರ್ವರೆಗೆ ಈ ಮೂರು ಸೀಸನ್ಗಳಲ್ಲಿ ಸರ್ಕಾರ 2,000 ರೂ ನೀಡುತ್ತದೆ. ಡಿಸೆಂಬರ್ನಿಂದ ಮಾರ್ಚ್ವರೆಗಿನ ಅವಧಿಯ ಕಂತನ್ನು ಫೆಬ್ರುವರಿ 19ರಂದು ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್ನಿಂದ ಜುಲೈವರೆಗಿನ ಅವಧಿಯ ಕಂತಿನ ಹಣವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ, ಅದೇ ತಿಂಗಳು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಖಚಿತವಾಗಿ ಹೇಳಲು ಅಸಾಧ್ಯ. ಏಪ್ರಿಲ್ನಿಂದ ಜುಲೈವರೆಗಿನ ನಾಲ್ಕು ತಿಂಗಳಲ್ಲಿ ಯಾವ ತಿಂಗಳು ಬೇಕಾದರೂ ಹಣ ಬಿಡುಗಡೆ ಮಾಡಬಹುದು.
ಇದನ್ನೂ ಓದಿ: ಹೊಸ 100 ರೂ ಮತ್ತು 200 ರೂ ಬ್ಯಾಂಕ್ ನೋಟುಗಳ ಬಿಡುಗಡೆ; ಹೀಗಿವೆ ಈ ನೋಟುಗಳು
ಪಿಎಂ ಕಿಸಾನ್ ಯೋಜನೆಯ ಉದ್ದೇಶವು ವ್ಯವಸಾಯ ಮಾಡುವ ರೈತರಿಗೆ ನೆರವಾಗಬೇಕು ಎಂಬುದು. ಸ್ವಂತ ಕೃಷಿ ಜಮೀನು ಹೊಂದಿರುವ ಯಾವುದೇ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಯಾರ ಹೆಸರಿನಲ್ಲಿ ಜಮೀನು ಇರುವುದೋ ಅವರು ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಆದರೆ, ರೈತರಾಗಿದ್ದರೂ ಯೋಜನೆಯಲ್ಲಿ ಕೆಲ ನಿರ್ಬಂಧಗಳಿವೆ. ಅವುಗಳ ವಿವರ ಮುಂದಿದೆ:
ಹೆಚ್ಚಿನ ಮಾಹಿತಿಗೆ ಪಿಎಂ ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ. ಅದರ ಲಿಂಕ್ ಇಲ್ಲಿದೆ: pmkisan.gov.in/
ಇದನ್ನೂ ಓದಿ: ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?
ಈ ವೆಬ್ಸೈಟ್ನಲ್ಲಿ ನೀವು ಫಲಾನುಭವಿಗಳ ಪಟ್ಟಿ ವೀಕ್ಷಿಸಬಹುದು. ಹೊಸದಾಗಿ ಯೋಜನೆಗೆ ನೊಂದಾಯಿಸಿಕೊಳ್ಳಬೇಕೆಂದಿದ್ದರೆ ಈ ವೆಬ್ಸೈಟ್ ಮೂಲಕವೇ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Mon, 7 April 25