PM Kisan: ಪಿಎಂ ಕಿಸಾನ್ 14ನೇ ಕಂತು ಸದ್ಯದಲ್ಲೇ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯಿರಿ

|

Updated on: May 12, 2023 | 12:52 PM

14th Installment Of PM Kisan Yojana: ಮೇ ತಿಂಗಳ ಕೊನೆಯ ವಾರದಲ್ಲಿ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗಬಹುದು ಎಂದು ವರದಿಗಳು ಹೇಳುತ್ತಿವೆ. 13ನೇ ಕಂತಿನ ಹಣ ಫೆಬ್ರುವರಿಯಲ್ಲಿ ರಿಲೀಸ್ ಆಗಿತ್ತು.

PM Kisan: ಪಿಎಂ ಕಿಸಾನ್ 14ನೇ ಕಂತು ಸದ್ಯದಲ್ಲೇ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರೈತರಿಗೆ ವರ್ಷಕ್ಕೆ 6,000 ರೂ ಸಹಾಯಧನ ಒದಗಿಸುವ ಪಿಎಂ ಕಿಸಾನ್ ಯೋಜನೆ(PM Kisan Yojana) 14ನೇ ಕಂತಿನ ಹಣ ಸದ್ಯದಲ್ಲೇ ಬರುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಅರ್ಹ ಫಲಾನುಭವಿ ರೈತರಿಗೆ 2,000 ರೂ ಹಣ ಬಿಡುಗಡೆ ಆಗಲಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ, ಆದರೆ, ಮೂಲಗಳಿಂದ ಮಾಹಿತಿ ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರದಿಂದ 13ನೇ ಕಂತಿನ ಹಣ ಫೆಬ್ರುವರಿಯಲ್ಲಿ ಬಿಡುಗಡೆ ಆಗಿತ್ತು. ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಆಗಿರುವ ಸಂಗತಿಯನ್ನು ಪ್ರಕಟಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ.

ಏನಿದು ಪಿಎಂ ಕಿಸಾನ್ ಯೋಜನೆ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019ರಲ್ಲಿ ಆರಂಭವಾಗಿದ್ದು. ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಸರ್ಕಾರ ವರ್ಷಕ್ಕೆ 6,000 ರೂ ನೀಡುತ್ತದೆ. ವರ್ಷಕ್ಕೆ ಒಮ್ಮೆಗೇ ಹಣ ನೀಡುವ ಬದಲಕು 3 ಕಂತುಗಳಲ್ಲಿ ಧನಸಹಾಯ ಒದಗಿಸುತ್ತದೆ. ಅಂದರೆ 2,000 ರೂಗಳ ಮೂರು ಕಂತುಗಳನ್ನು ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ. ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಇನ್ನೂ 2 ಕಂತು ಸೇರಿಸಿಕೊಡುತ್ತದೆ. ಅಂದರೆ ರಾಜ್ಯದ ರೈತರಿಗೆ ವರ್ಷಕ್ಕೆ 10,000 ರೂ ಸಿಗುತ್ತದೆ.

ಇದನ್ನೂ ಓದಿArecanut Price: ಇಂದಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಪಿಎಂ ಕಿಸಾನ್ ಸ್ಕೀಮ್​ನಲ್ಲಿ ನೀವು ಫಲಾನುಭವಿಯಾ ಎಂದು ಪರಿಶೀಲಿಸುವುದು ಹೇಗೆ?

ನೀವು ಈಗಾಗಲೇ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಬೆನಿಫಿಷಿಯರಿ ಸ್ಟೇಟಸ್ ಏನಿದೆ ಎಂಬುದನ್ನು ಈ ಕೆಳಗಿನ ಕ್ರಮಗಳಿಂದ ತಿಳಿಯಬಹುದು.

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್ pmkisan.gov.in ಇಲ್ಲಿಗೆ ಭೇಟಿ ನೀಡಿ
  • ಫಾರ್ಮರ್ಸ್ ಕಾರ್ನರ್ ಸೆಕ್ಷನ್​ನಲ್ಲಿ ‘ಬೆನಿಫಿಷಿಯರಿ ಸ್ಟೇಟಸ್’ ಅನ್ನು ಕಾಣಬಹುದು.
  • ಇದನ್ನು ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯುತ್ತದೆ.
  • ಇಲ್ಲಿ ನೊಂದಾಯಿತ ಮೊಬೈಲ್ ನಂಬರ್, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ಆಧಾರ್ ನಂಬರ್ ಅನ್ನು ತುಂಬಿಸಬೇಕು.
  • ಕ್ಯಾಪ್ಚಾ ಕೋಡ್ ಹಾಕಿ, ‘ಗೆಟ್ ಡಾಟಾ’ ಕ್ಲಿಕ್ ಮಾಡಿ.
  • ಇದಾದಾಗ ನಿಮ್ಮ ಬೆನಿಫಿಷಿಯರಿ ಸ್ಟೇಟಸ್ ಏನು ಎಂಬುದು ಗೊತ್ತಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯುವುದು ಹೇಗೆ?

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ
  • ಫಾರ್ಮರ್ಸ್ ಕಾರ್ನರ್​ನಲ್ಲಿ ಬೆನಿಫಿಷಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಳ್ಳಿ.
  • ಆ ಗ್ರಾಮದಲ್ಲಿ ಇರುವ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.
  • ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ದೃಢಪಡಿಸಿಕೊಳ್ಳಿ.

ಇದನ್ನೂ ಓದಿPPF: ಸಂಬಳ ಪಡೆಯುವ ನೌಕರರಿಗೆ ಪಿಪಿಎಫ್ ಹೂಡಿಕೆ ಅಗತ್ಯವಾ? ಬೇರೆ ಉತ್ತಮ ಆಯ್ಕೆಗಳೇನು?

ಪಿಎಂ ಕಿಸಾನ್ ಯೋಜನೆಗೆ ಹೊಸದಾಗಿ ನೊಂದಾಯಿಸುವುದು ಹೇಗೆ?

ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಬೆನಿಫಿಷಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ಅಥವಾ ನೀವು ಇದೇ ಮೊದಲ ಬಾರಿಗೆ ಯೋಜನೆಯಲ್ಲಿ ನೊಂದಾಯಿಸುತ್ತಿದ್ದರೆ ಆನ್​ಲೈನ್​ನಲ್ಲೇ ಈ ಕೆಲಸ ಮಾಡಬಹುದು.

  • ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ಗೆ ಹೋಗಿ
  • ಅಲ್ಲಿ ಫಾರ್ಮರ್ ಕಾರ್ನರ್​ನಲ್ಲಿ ‘ನ್ಯೂ ಫಾರ್ಮರ್ ರಿಜಿಸ್ಟ್ರೇಷನ್’ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಅವಶ್ಯ ವಿವರಗಳನ್ನು ತುಂಬಿ ಸಬ್ಮಿಟ್ ಕೊಡಿ
  • ಅರ್ಜಿಯನ್ನು ಡೌನ್​ಲೋಡ್ ಮಾಡಿ ಪ್ರಿಂಟೌಟ್ ಕೂಡ ತೆಗೆದಿಟ್ಟುಕೊಳ್ಳಬಹುದು.

ಆನ್​ಲೈನ್​ನಲ್ಲಿ ಬೇಡ ಎಂದರೆ ಸಮೀಪದ ರೈತ ಕೇಂದ್ರಕ್ಕೆ ಹೋಗಿ ಅಲ್ಲಿಯ ಸಿಬ್ಬಂದಿ ಮೂಲಕ ಪಿಎಂ ಕಿಸಾನ್ ಯೋಜನೆಗೆ ರೈತರು ಹೊಸದಾಗಿ ನೊಂದಾಯಿಸಿಕೊಳ್ಳಬಹುದು. ಆಧಾರ್ ಕಾರ್ಡ್, ಜಮೀನಿನ ಪಹಣಿ ಪತ್ರ ಮುಖ್ಯವಾಗಿ ಬೇಕಾಗುತ್ತದೆ. ಯೋಜನೆಯ ಫಲಾನುಭವಿಗಳಾದವರು ಜಮೀನು ಮಾಲೀಕರಾಗಿರಬೇಕು. ಜಮೀನು ಇಲ್ಲದೇ ಕೇವಲ ಕೃಷಿ ಕೂಲಿಕಾರ್ಮಿಕರಾಗಿದ್ದರೆ ಈ ಯೋಜನೆ ಅನ್ವಯ ಆಗುವುದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ