Bharat Mart: ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್​ಗೆ ಪ್ರತಿಯಾಗಿ ಭಾರತ್ ಮಾರ್ಟ್; ಭಾರತದ ಈ ಮಹಾಮಳಿಗೆಯ ವೈಶಿಷ್ಟ್ಯತೆ ತಿಳಿದಿರಿ

PM Narendra Modi Launches Bharat Mart In Dubai: ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿ ವೇಳೆ ದುಬೈನಲ್ಲಿ ನಿರ್ಮಾಣವಾಗಲಿರುವ ಭಾರತ್ ಮಾರ್ಟ್ ಯೋಜನೆಗೆ ಚಾಲನೆ ಕೊಡಲಾಗಿದೆ. ಭಾರತದಿಂದ ರಫ್ತಾಗುವ ಎಲ್ಲಾ ಸರಕುಗಳ ಪ್ರದರ್ಶನ ಈ ಭಾರತ್ ಮಾರ್ಟ್​ನಲ್ಲಿ ಇರಲಿದ್ದು, 2025ರ ಅಂತ್ಯದೊಳಗೆ ಇದು ಸಿದ್ಧವಾಗುವ ನಿರೀಕ್ಷೆ ಇದೆ. ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್ ಇದ್ದು, ಅದರಿಂದ ಚೀನಾದ ರಫ್ತಿಗೆ ಪುಷ್ಟಿ ಸಿಗುತ್ತಿದೆ. ಅದೇ ಮಾದರಿಯಲ್ಲಿ ಭಾರತ್ ಮಾರ್ಟ್ ನಿರ್ಮಿಸಲಾಗುತ್ತಿದೆ.

Bharat Mart: ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್​ಗೆ ಪ್ರತಿಯಾಗಿ ಭಾರತ್ ಮಾರ್ಟ್; ಭಾರತದ ಈ ಮಹಾಮಳಿಗೆಯ ವೈಶಿಷ್ಟ್ಯತೆ ತಿಳಿದಿರಿ
ಭಾರತ್ ಮಾರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 14, 2024 | 5:11 PM

ಯುಎಇಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ಬಾಂಧವ್ಯ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ದುಬೈನಲ್ಲಿ ಭಾರತ್ ಮಾರ್ಟ್ (Bharat Mart) ಎಂಬ ಬೃಹತ್ ಮಳಿಗೆ ಮತ್ತು ಉಗ್ರಾಣ ಸೌಲಭ್ಯಕ್ಕೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಚಾಲನೆ ಕೊಟ್ಟಿದ್ದಾರೆ. ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ವಹಿವಾಟು ಹೆಚ್ಚಿಸಲು ಮತ್ತು ಭಾರತದ ರಫ್ತುದಾರರಿಗೆ ಅನುಕೂಲ ಒದಗಿಸಲು ಭಾರತ್ ಮಾರ್ಟ್ ನೆರವಾಗಲಿದೆ. ವರದಿ ಪ್ರಕಾರ 2025ರೊಳಗೆ, ಅಂದರೆ ಇನ್ನೊಂದು ವರ್ಷದೊಳಗೆ ಭಾರತ್ ಮಾರ್ಟ್ ಕಾರ್ಯಾಚರಣೆಯಲ್ಲಿ ಇರಲಿದೆ. ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್ (dragon mart) ಇದೆ. ಅದೇ ಮಾದರಿಯಲ್ಲಿ ಭಾರತ್ ಮಾರ್ಟ್ ಅನ್ನು ನಿರ್ಮಿಸಬಹುದು ಎನ್ನಲಾಗಿದೆ. ಈ ಬಗ್ಗೆ ಯೋಜನೆ ಇನ್ನೂ ಅಂತಿಮಗೊಳ್ಳಬೇಕಿದ್ದು, 2025ರ ಅಂತ್ಯದೊಳಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಏನಿದು ಭಾರತ್ ಮಾರ್ಟ್?

ದುಬೈನಲ್ಲಿ ಡಿಪಿ ವರ್ಲ್ಡ್ ನಿರ್ವಹಿಸುವ ಜಿಬೆಲ್ ಅಲಿ ಫ್ರೀ ಝೋನ್​ನಲ್ಲಿ (JAFZA) ಒಂದು ಲಕ್ಷ ಸ್ಕ್ವಯರ್ ಮೀಟರ್ (ಹತ್ತು ಲಕ್ಷ ಚದರಡಿ) ಸ್ಥಳದಲ್ಲಿ ನಿರ್ಮಿತವಾಗಲಿರುವ ಭಾರತ್ ಮಾರ್ಟ್ ಒಂದು ರೀತಿಯಲ್ಲಿ ಮಹಾ ಮಳಿಗೆ. ಭಾರತದ ರಫ್ತುದಾರರ ಉತ್ಪನ್ನಗಳ ಪ್ರದರ್ಶನ ಇಲ್ಲಿ ಇರುತ್ತದೆ. ಈ ಮಹಾಮಳಿಗೆಯಲ್ಲಿ ಸಂಗ್ರಹಾಗಾರಗಳು, ಪ್ರದರ್ಶನ ಮಳಿಗೆಗಳು, ರೀಟೇಲ್ ವ್ಯಾಪಾರದ ಮಳಿಗೆಗಳು, ಹೋಟೆಲ್​ಗಳು, ಭಾರೀ ಯಂತ್ರಗಳು, ಹೀಗೆ ನಾನಾ ವಸ್ತುಗಳು ಇರುತ್ತವೆ.

ಇದನ್ನೂ ಓದಿ: ಜಗತ್ತಿಗೆ ಸ್ವಚ್ಛ, ಪಾರದರ್ಶಕ, ತಂತ್ರಜ್ಞಾನದ ಅರಿವಿರುವ ಸರ್ಕಾರಗಳ ಅಗತ್ಯವಿದೆ: ಯುಎಇಯಲ್ಲಿ ಪ್ರಧಾನಿ ಮೋದಿ

ಯುಎಇಯಲ್ಲಿರುವ ಯಾವುದೇ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಮಹಾ ಮಳಿಗೆಗೆ ಭೇಟಿ ನೀಡಿದರೆ ಭಾರತೀಯ ಉತ್ಪನ್ನಗಳನ್ನು ಕಣ್ಣಾರೆ ಕಂಡು, ಅದನ್ನು ಖರೀದಿಸಬಹುದು. ಒಂದೇ ಸ್ಥಳದಲ್ಲಿ ಎಲ್ಲಾ ಭಾರತೀಯ ವಸ್ತುಗಳು ಸಿಗುವುದರಿಂದ ಆಮದುಗಾರರಿಗೆ ಅನುಕೂಲವಾಗುತ್ತದೆ. ಭಾರತೀಯ ಕಂಪನಿಗಳಿಗೂ ಭಾರತ್ ಮಾರ್ಟ್ ಒಂದು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲು ಒಂದು ಒಳ್ಳೆಯ ವೇದಿಕೆ ಆಗುತ್ತದೆ.

ವರದಿಯೊಂದರ ಪ್ರಕಾರ ಭಾರತೀಯ ರಫ್ತುದಾರ ಸಂಸ್ಥೆಗಳು ಯುಎಇ ಮುಖಾಂತರ ಆಫ್ರಿಕಾ, ಯೂರೋಪ್, ಅಮೆರಿಕ ಖಂಡಗಳಿಗೆ ತಮ್ಮ ಬಿಸಿನೆಸ್ ವಿಸ್ತರಿಸಲು ಸುಲಭವಾಗುತ್ತದೆ. ಬೇರೆ ದೇಶಗಳಿಗೆ ಸರಕು ಸಾಗಣೆ ವೆಚ್ಚ ಮತ್ತು ಸಮಯ ಎರಡೂ ಮಿಗುತ್ತದೆ.

ಇದನ್ನೂ ಓದಿ: ಸ್ವಾಮಿನಾಥನ್ ಆಯೋಗದ ಎಂಎಸ್​ಪಿ ಸೂತ್ರದ ಅನುಷ್ಠಾನ ಸಾಧ್ಯವಾ? ತಜ್ಞರ ಅನಿಸಿಕೆ ಇದು

ನರೇಂದ್ರ ಮೋದಿ ಅವರ ಯುಎಇ ಭೇಟಿ ವೇಳೆ ಎರಡೂ ದೇಶಗಳ ಮಧ್ಯೆ 10 ಒಡಂಬಡಿಕೆ (ಎಂಒಯು) ಒಪ್ಪಂದಗಳಾಗಿವೆ. 2022ರಲ್ಲಿ ಎರಡೂ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದ್ದವು. ಎರಡು ದೇಶಗಳ ನಡುವಿನ ವ್ಯಾಪಾರ ಮೊತ್ತವನ್ನು 100 ಬಿಲಿಯನ್ ಡಾಲರ್​ಗೆ ಹೆಚ್ಚಿಸುವ ಗುರಿ ಇಡಲಾಗಿದೆ. ಹಾಗೆಯೇ, ವ್ಯಾಪಾರದಲ್ಲಿ ಡಾಲರ್ ಕರೆನ್ಸಿ ಬದಲು ರುಪಾಯಿ ಬಳಸಲೂ ಯುಎಇಯನ್ನು ಒಪ್ಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್