AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmers Problem: ಸ್ವಾಮಿನಾಥನ್ ಆಯೋಗದ ಎಂಎಸ್​ಪಿ ಸೂತ್ರದ ಅನುಷ್ಠಾನ ಸಾಧ್ಯವಾ? ತಜ್ಞರ ಅನಿಸಿಕೆ ಇದು

Swaminathan Commission Recommendation on MSP: ಎಂಎಸ್ ಸ್ವಾಮಿನಾಥನ್ ನೇತೃತ್ವದ ಆಯೋಗ 2004ರಿಂದ 2006ರ ಅವಧಿಯಲ್ಲಿ ನಾಲ್ಕೈದು ಬಾರಿ ವರದಿ ಸಲ್ಲಿಸಿ ಹಲವು ಶಿಫಾರಸುಗಳನ್ನು ಮಾಡಿದೆ. ಎಂಎಸ್​ಪಿ ಸೇರಿದಂತೆ ಕೆಲ ಪ್ರಮುಖ ಶಿಫಾರಸುಗಳು ಇನ್ನೂ ಜಾರಿಯಾಗದೇ ಉಳಿದಿವೆ. ಅಂದಿನ ಯುಪಿಎ ಸರ್ಕಾರ ಮತ್ತು ಇಂದಿನ ಎನ್​ಡಿಎ ಸರ್ಕಾರ ಎರಡೂ ಕೂಡ ಎಂಎಸ್​ಪಿ ಜಾರಿ ಮಾಡುವ ಧೈರ್ಯ ತೋರಿಲ್ಲ.

Farmers Problem: ಸ್ವಾಮಿನಾಥನ್ ಆಯೋಗದ ಎಂಎಸ್​ಪಿ ಸೂತ್ರದ ಅನುಷ್ಠಾನ ಸಾಧ್ಯವಾ? ತಜ್ಞರ ಅನಿಸಿಕೆ ಇದು
ರೈತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 14, 2024 | 3:44 PM

Share

ಎಂಎಸ್ ಸ್ವಾಮಿನಾಥನ್ ಆಯೋಗ (MS Swaminathan Commission) ರೈತರ ಬದುಕು ಹಸನಾಗಲು ಸಹಾಯವಾಗುವಂತಹ ಹಲವು ಸಲಹೆಗಳನ್ನು ತಮ್ಮ ವರದಿಗಳಲ್ಲಿ ನೀಡಿದ್ದಾರೆ. 2004ರಿಂದ 2006ರವರೆಗಿನ ಅವಧಿಯಲ್ಲಿ ಅವರ ನೇತೃತ್ವದ ಆಯೋಗ ನಾಲ್ಕೈದು ವರದಿಗಳನ್ನು ಬಿಡುಗಡೆ ಮಾಡಿತ್ತು. ಆಗ ಇದ್ದ ಯುಪಿಎ ಸರ್ಕಾರ ಈ ವರದಿಯಲ್ಲಿನ ಹಲವು ಅಂಶಗಳನ್ನು ಜಾರಿಗೆ ತಂದಿತಾದರೂ ಎಂಎಸ್​ಪಿ (MSP- Minimum support price) ಮೊದಲಾದ ಕೆಲ ಅಂಶಗಳನ್ನು ಕೈಚೆಲ್ಲಿತು. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದ ಎನ್​ಡಿಎ ಕೂಡ ಆ ಕೆಲಸ ಮಾಡಲಿಲ್ಲ. ಆಯೋಗದ ಶಿಫಾರಸಿನಂತೆ ಎಂಎಸ್​ಪಿ ಜಾರಿಗೆ ತಂದರೆ ಮಾರುಕಟ್ಟೆಗೆ ಧಕ್ಕೆಯಾಗುತ್ತದೆ. ಇದು ರೈತರಿಗೆಯೇ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದು ಯುಪಿಎ ಸರ್ಕಾರ ನೀಡಿದ ಒಂದು ಕಾರಣ.

ಪಂಜಾಬ್ ರೈತರ ಸಿಟ್ಟಿಗೇನು ಕಾರಣ?

ಕೃಷಿ ತಜ್ಞ ಅಶೋಕ್ ಗುಲಾಟಿ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಒಂದು ಲೇಖನದಲ್ಲಿ ಪಂಜಾಬ್ ರೈತರ ಸಮಸ್ಯೆ ಮತ್ತು ಎಂಎಸ್​ಪಿ ವಿಚಾರದ ಬಗ್ಗೆ ಒಂದು ಕುತೂಹಲದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಪಂಜಾಬ್ ಕೃಷಿ ಬಹಳ ಸಂಪದ್ಭರಿತವಾಗಿದೆ. ಪೂರ್ಣ ನೀರಾವರಿ ವ್ಯವಸ್ಥೆ ಹೊಂದಿದೆ. ಬಹಳ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪಡೆಯುತ್ತಾರೆ. ಗೋಧಿ ಮತ್ತು ಭತ್ತಕ್ಕೆ ಬಹಳ ಹೆಚ್ಚಿನ ಎಂಎಸ್​ಪಿ ಇದೆ. ಆದರೂ ಕೂಡ ಈ ರೈತರ ನೈಜ ಆದಾಯ ಮಾತ್ರ ಗಣನೀಯವಾಗಿ ಹೆಚ್ಚಾಗುತ್ತಿಲ್ಲ. ಇದು ಪಂಜಾಬ್ ರೈತರನ್ನು ಹತಾಶೆಯ ಸ್ಥಿತಿಗೆ ತಳ್ಳಿದೆ.

ಇದನ್ನೂ ಓದಿ: ಯುಪಿಎ ಸರ್ಕಾರ ಇದ್ದಾಗ ಸ್ವಾಮಿನಾಥನ್ ಸಮಿತಿಯ ಎಂಎಸ್​ಪಿ ಶಿಫಾರಸನ್ನು ತಿರಸ್ಕರಿಸಿದ್ದು ಯಾಕೆ? ಇಲ್ಲಿದೆ ಕಾರಣ

ಮಾರುಕಟ್ಟೆ ದರ ಎಂಎಸ್​ಪಿಗಿಂತ ಮೇಲೇರಲು ಬಿಡದಂತಹ ವ್ಯವಸ್ಥೆ ಕೃಷಿ ಮಾರುಕಟ್ಟೆಯಲ್ಲಿ ಇದೆ. ಎಂಎಸ್​ಪಿ ಎಂದರೆ ಮಿನಿಮಮ್ ಪ್ರೈಸ್ ಎನ್ನುವ ಬದಲು ಮ್ಯಾಕ್ಸಿಮಮ್ ಸಪೋರ್ಟ್ ಪ್ರೈಸ್ ಎನ್ನುವಂತಾಗಿದೆ. ಈ ಕಾರಣಕ್ಕೆ ರೈತರ ಆದಾಯ ಹೆಚ್ಚಳ ಬಹಳ ಮಂದಗತಿಯಲ್ಲಿ ಹೆಚ್ಚುತ್ತಿದೆ.

ಅಶೋಕ್ ಗುಲಾಟಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿರುವ ಇನ್ನೊಂದು ಸಂಭಾವ್ಯ ಕಾರಣ ಎಂದರೆ ಪಂಜಾಬ್ ಕೃಷಿಕರ ಬೆಳೆ ಆದ್ಯತೆ. ಪಂಜಾಬ್​ನಲ್ಲಿ ಬಹುತೇಕ ಎಲ್ಲಾ ರೈತರು ಹೆಚ್ಚಾಗಿ ಗೋಧಿ ಮತ್ತು ಭತ್ತವನ್ನೇ ಬೆಳೆಯುತ್ತಾರೆ. ಬೇರೆ ಲಾಭದಾಯಕ ಬೆಳೆಗಳ ಕಡೆಗೆ ಪಂಜಾಬ್ ರೈತರು ಗಮನ ಹರಿಸಿದರೆ ರಫ್ತು ಮೂಲಕ ಸಾಕಷ್ಟು ಲಾಭ ಮಾಡಬಹುದು.

ಇದನ್ನೂ ಓದಿ: ಕೇಂದ್ರದ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಎಷ್ಟು ವೆಚ್ಚ? ಇಲ್ಲಿದೆ ಡೀಟೇಲ್ಸ್

ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ಎಂಎಸ್​ಪಿ ಜಾರಿ ಮಾಡಿದರೆ ಆಹಾರ ಬೆಲೆ ಸಾಕಷ್ಟು ಏರುತ್ತದೆ. ಬಹುತೇಕ ಎಲ್ಲಾ ಬೆಳೆಗಳ ಬೆಲೆ ಶೇ. 25ರಿಂದ 30ರಷ್ಟು ಹೆಚ್ಚಾಗಬಹುದು. ಈ ಮಟ್ಟದ ಆಹಾರ ಹಣದುಬ್ಬರ ಏರಿಕೆಗೆ ದೇಶ ಸಿದ್ಧ ಇದೆಯಾ? ಯಾವ ಸರ್ಕಾರ ಕೂಡ ಈ ಪರಿಸ್ಥಿತಿ ತಂದುಕೊಳ್ಳಲು ಬಯಸುವುದಿಲ್ಲ. ಅದಕ್ಕೆ ಆಯೋಗದ ವರದಿಯ ಶಿಫಾರಸುಗಳನ್ನು ಮನಮೋಹನ್ ಸಿಂಗ್ ತಿರಸ್ಕರಿಸಿದ್ದು ಎಂದು ಅಶೋಕ್ ಗುಲಾಟಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!