AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ನೆನಪು ಮಾತ್ರ; ಪೋಸ್ಟ್ ಆಫೀಸ್​ನ ವಿಶೇಷ ಅಂಚೆ ಸೇವೆಗೆ ವಿದಾಯ ಹೇಳಿದ ಇಲಾಖೆ

Goodbye to Registered post: ರಿಜಿಸ್ಟರ್ಡ್ ಪೋಸ್ಟ್ ಸರ್ವಿಸ್ ಅನ್ನು ಅಂಚೆ ಇಲಾಖೆ ನಿಲ್ಲಿಸಿದೆ. ಸ್ಪೀಡ್ ಪೋಸ್ಟ್ ಸೇವೆ ಜೊತೆ ಅದು ವಿಲೀನಗೊಂಡಿದೆ. ಸೆಪ್ಟೆಂಬರ್ 1ರಿಂದ ಸ್ಪೀಡ್ ಪೋಸ್ಟ್ ಮತ್ತು ನಾರ್ಮಲ್ ಪೋಸ್ಟ್ ಸೇವೆಗಳು ಮಾತ್ರ ಇರುತ್ತವೆ. ರಿಜಿಸ್ಟರ್ಡ್ ಪೋಸ್ಟ್ ಅಂಚೆ ಕಚೇರಿಯ ವಿಶೇಷ ಸರ್ವಿಸ್ ಆಗಿತ್ತು. ಬಹಳ ಮುಖ್ಯವಾದ ಪತ್ರಗಳು ಅದರಲ್ಲಿ ಬರುತ್ತಿದ್ದವು.

ರಿಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ನೆನಪು ಮಾತ್ರ; ಪೋಸ್ಟ್ ಆಫೀಸ್​ನ ವಿಶೇಷ ಅಂಚೆ ಸೇವೆಗೆ ವಿದಾಯ ಹೇಳಿದ ಇಲಾಖೆ
ಅಂಚೆ ಕಚೇರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2025 | 3:03 PM

Share

ನವದೆಹಲಿ, ಜುಲೈ 30: ಅಂಚೆ ಕಚೇರಿಯ (Post Office) ವಿಶೇಷ ಸೇವೆಗಳಲ್ಲಿ ಒಂದಾದ ರಿಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ಇತಿಹಾಸ ಪುಟ ಸೇರಲಿದೆ. ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಇತ್ತೀಚೆಗೆ ಸುತ್ತೋಲೆಯನ್ನೂ ಹೊರಡಿಸಿದೆ. ಅದರ ಪ್ರಕಾರ, ಸೆಪ್ಟೆಂಬರ್ 1ಕ್ಕೆ ರಿಜಿಸ್ಟರ್ಡ್ ಪೋಸ್ಟ್​​ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ. ಅಂದು ಅಂಚೆ ಕಚೇರಿಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಮತ್ತು ಸ್ಪೀಡ್ ಪೋಸ್ಟ್ ಸೇವೆ ವಿಲೀನಗೊಳ್ಳಲಿದೆ.

ರಿಜಿಸ್ಟರ್ಡ್ ಪೋಸ್ಟ್ ಎಂದು ಹೆಸರಿಸಲಾಗಿರುವ ಅಂಚೆ ಕಚೇರಿಯ ಎಲ್ಲಾ ಕಾರ್ಯಾತ್ಮಕ ಮಾರ್ಗಸೂಚಿಗಳಲ್ಲಿ ಜುಲೈ 31ರೊಳಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಲಾಗಿದೆ. ರಿಜಿಸ್ಟರ್ಡ್ ಪೋಸ್ಟ್ ಬದಲು ಅದು ಸ್ಪೀಡ್ ಪೋಸ್ಟ್ ಎಂದಾಗಬಹುದು. ಇದರೊಂದಿಗೆ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಎನ್ನುವ ಅಧ್ಯಾಯ ಮುಗಿಯಲಿದೆ.

ಇದನ್ನೂ ಓದಿ: Post Office plans: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ

ಸೆಪ್ಟೆಂಬರ್ 1ರಿಂದ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್ ಮತ್ತು ಸಾಮಾನ್ಯ ಪೋಸ್ಟ್ ಸೇವೆ ಮಾತ್ರವೇ ಇರುತ್ತದೆ. ಇವು ಅಂಚೆ ವಿಲೇವಾರಿ ಸೇವೆಗಳು. ಅಂಚೆ ಕಚೇರಿಯಲ್ಲಿ ರೆಕರಿಂಗ್ ಡೆಪಾಸಿಟ್, ಸುಕನ್ಯಾ ಸಮೃದ್ಧಿ ಅಕೌಂಟ್ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳು ಯಥಾಪ್ರಕಾರ ಮುಂದುವರಿಯಲಿವೆ.

ರಿಜಿಸ್ಟರ್ಡ್ ಪೋಸ್ಟ್ ಎನ್ನುವುದು ಹಿಂದಿನ ತಲೆಮಾರಿನವರಿಗೆ ಚಿರಸ್ಮರಣೀಯ

ಕೊರಿಯರ್​​ಗಳ ಭರಾಟೆ ಬರುವವರೆಗೂ ರಿಜಿಸ್ಟರ್ಡ್ ಪೋಸ್ಟ್ ಎನ್ನುವುದು ಬಹಳ ವ್ಯಾಪಕವಾಗಿ ಬಳಕೆಯಲ್ಲಿತ್ತು. ಪ್ರಮುಖ ಅಂಚೆಗಳು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬರುತ್ತಿದ್ದುವು. ಕಂಪನಿಗಳ ಸಂದರ್ಶನ, ಅಪಾಯಿಂಟ್ಮೆಂಟ್ ಲೆಟರ್, ನೋಟೀಸ್ ಇತ್ಯಾದಿ ಮಹತ್ವದ ಪತ್ರಗಳು ಒಳಗೊಳ್ಳುತ್ತಿದ್ದುವು. ಎಲ್ಲಕ್ಕಿಂತ ಹೆಚ್ಚಾಗಿ, ರಿಜಿಸ್ಟರ್ಡ್ ಪೋಸ್ಟ್ ಮಾಡಲಾಗಿದೆ ಎಂದರೆ ಅದು ಸುರಕ್ಷಿತವಾಗಿ ತಲುಪುತ್ತದೆ ಎನ್ನುವ ಅಚಲ ನಂಬಿಕೆ ಇತ್ತು.

ಇದನ್ನೂ ಓದಿ: ಬ್ಯಾಂಕಲ್ಲಿ ಕ್ಲೇಮ್ ಆಗದ 67,000 ಕೋಟಿ ರೂ ಹಣ ಆರ್​ಬಿಐನ ಡಿಇಎ ಫಂಡ್​ಗೆ ವರ್ಗಾವಣೆ; ಗ್ರಾಹಕರಿಗೆ ಸಿಗಲ್ವಾ ಹಣ?

ಕೊರಿಯರ್ ಸೇವೆಗಳು ಬಂದ ಬಳಿಕ ರಿಜಿಸ್ಟರ್ಡ್ ಪೋಸ್ಟ್​ಗೆ ಬೇಡಿಕೆ ಕಡಿಮೆ ಆಗತೊಡಗಿತ್ತು. ಅದನ್ನು ಸರಿದೂಗಿಸಲು ಅಂಚೆ ಕಚೇರಿಯು ಸ್ಪೀಡ್ ಪೋಸ್ಟ್ ಸೇವೆ ಆರಂಭಿಸಿತು. ಕೊರಿಯರ್​ಗಳ ರೀತಿಯಲ್ಲಿ ಸ್ಪೀಡ್ ಪೋಸ್ಟ್​ಗಳು ಒಂದು ಅಥವಾ ಎರಡು ದಿನದಲ್ಲಿ ವಿಳಾಸವನ್ನು ತಲುಪುತ್ತಿದ್ದವು. ಈಗ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಬದಲು ಸ್ಪೀಡ್ ಪೋಸ್ಟ್ ಮುಂದುವರಿಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!