ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಿಂದ ಮಾರ್ಚ್ 15ನೇ ತಾರೀಕಿನಂದು IL&FS ತಮಿಳುನಾಡು ಪವರ್ ಕಂಪೆನಿ ಲಿಮಿಟೆಡ್ (ITPCL)ನ NPA ಖಾತೆಯಲ್ಲಿ 2,060 ಕೋಟಿ ರೂಪಾಯಿಗಳ ವಂಚನೆಯನ್ನು ವರದಿ ಮಾಡಿದೆ. ನಿಗದಿತ ವಿವೇಚನಾ ನಿಯಮಗಳ ಪ್ರಕಾರ, 824.1 ಕೋಟಿ ರೂಪಾಯಿ ಮೊತ್ತದ ಪ್ರಾವಿಷನ್ ಈಗಾಗಲೇ ಮಾಡಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ನಿಯಂತ್ರಕ ಫೈಲಿಂಗ್‌ನಲ್ಲಿ ಪಿಎನ್‌ಬಿ ಹೀಗೆ ಹೇಳಿದೆ: “ಕಂಪೆನಿಯ ಖಾತೆಗಳಲ್ಲಿ 2060.14 ಕೋಟಿ ರೂ.ಗಳ ವಂಚನೆಯನ್ನು ಬ್ಯಾಂಕ್ನಿಂದ ಆರ್‌ಬಿಐಗೆ ವರದಿ ಮಾಡುತ್ತಿದೆ. ನಿಗದಿತ ವಿವೇಕದ ಮಾನದಂಡಗಳ ಪ್ರಕಾರ, ಬ್ಯಾಂಕ್ ಈಗಾಗಲೇ 824.06 ಕೋಟಿ ರೂಪಾಯಿ ಪ್ರಾವಿಷನ್ ಮಾಡಿದೆ.”
ನಿಖರವಾಗಿ ಒಂದು ತಿಂಗಳ ಹಿಂದೆ, ಫೆಬ್ರವರಿಯಲ್ಲಿ ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ IL&FS ತಮಿಳುನಾಡು ವಂಚನೆ ಖಾತೆಯನ್ನು ಘೋಷಿಸಿದ್ದು, 148 ಕೋಟಿ ರೂಪಾಯಿ ಬಾಕಿ ಇದೆ ಎಂದಿದೆ. “148.86 ಕೋಟಿ ರೂಪಾಯಿಗಳ ಬಾಕಿ ಇರುವ ಎನ್‌ಪಿಎ ಖಾತೆ, ಅಂದರೆ ಐಎಲ್‌ಅಂಡ್‌ಎಫ್‌ಎಸ್ ತಮಿಳುನಾಡು ಪವರ್ ಕಂಪೆನಿ ಲಿಮಿಟೆಡ್ ಅನ್ನು ವಂಚನೆ ಎಂದು ಘೋಷಿಸಲಾಗಿದೆ. ಮತ್ತು ನಿಯಂತ್ರಕ ಅಗತ್ಯಗಳ ಪ್ರಕಾರ ಇಂದು ಆರ್‌ಬಿಐಗೆ ವರದಿ ಮಾಡಲಾಗಿದೆ,” ಎಂದು ಬ್ಯಾಂಕ್ನಿಂದ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ.
ತಮಿಳುನಾಡಿನ ಕಡಲೂರಿನಲ್ಲಿ ಶಾಖೋತ್ಪನ್ನ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕಾಗಿ ತನ್ನ ಎನರ್ಜಿ ಪ್ಲಾಟ್ಫಾರ್ಮ್ IEDCL ಅಡಿಯಲ್ಲಿ ಸಾಲದ ಹೊರೆ ಹೊತ್ತಿರುವ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (IL&FS) ನಿಂದ ಕಂಪೆನಿಯನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ಆಗಿ ಸ್ಥಾಪಿಸಲಾಯಿತು.
ಇದನ್ನೂ ಓದಿ: Bank Locker Fee: ಎಸ್ಬಿಐ, ಐಸಿಐಸಿಐ ಬ್ಯಾಂಕ್, ಪಿಎನ್‌ಬಿ ಬ್ಯಾಂಕ್ ಲಾಕರ್ ಶುಲ್ಕಗಳ ವಿವರ ಇಲ್ಲಿದೆ