AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸಿನಿಮಾ ಹಿಟ್ ಆಗುತ್ತಿದ್ದಂತೇ ಪಿವಿಆರ್ ಐನಾಕ್ಸ್ ಷೇರಿಗೆ ಭರ್ಜರಿ ಬೇಡಿಕೆ

PVR Inox share price increase on Monday: ಸಿನಿಮಾಗಳು ಹಿಟ್ ಆದರೆ ಥಿಯೇಟರ್​ಗಳು ನಳನಳಿಸುತ್ತವೆ. ಬ್ಯುಸಿನೆಸ್ ಹೆಚ್ಚಾಗುತ್ತದೆ. ಪಿವಿಆರ್ ಐನಾಕ್ಸ್ ಸಿನಿಮಾ ಮಂದಿರಗಳು ಕಳೆದ ಒಂದು ವಾರದಿಂದ ಮಿಂಚುತ್ತಿವೆ. ಧುರಂಧರ್ ಸಿನಿಮಾ ನೋಡಲು ಜನರು ಮಾಲ್​ಗಳತ್ತ ನುಗ್ಗುತ್ತಿದ್ದಾರೆ. ಇದೇ ಮ್ಯಾಡ್ ರಶ್ ಷೇರು ಬಜಾರಿನಲ್ಲಿ ಪಿವಿಆರ್ ಷೇರು ಖರೀದಿಗೂ ಆಗುತ್ತಿದೆ.

ಈ ಸಿನಿಮಾ ಹಿಟ್ ಆಗುತ್ತಿದ್ದಂತೇ ಪಿವಿಆರ್ ಐನಾಕ್ಸ್ ಷೇರಿಗೆ ಭರ್ಜರಿ ಬೇಡಿಕೆ
ಧುರಂಧರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2025 | 3:12 PM

Share

ನವದೆಹಲಿ, ಡಿಸೆಂಬರ್ 15: ಪಾಕಿಸ್ತಾನದ ಕ್ರೈಮ್ ಲೋಕವನ್ನು ಉಡಾಯಿಸಿದ ಭಾರತೀಯ ಗೂಢಚಾರಿಯ ರೋಚಕ ಕಥಾ ಹಂದರ ಇರುವ ಧುರಂಧರ್ ಸಿನಿಮಾ (Dhurandhar Movie) ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ. ಕಾಂತಾರ ಸೃಷ್ಟಿಸಿದುದಕ್ಕಿಂತಲೂ ಹೆಚ್ಚಿನ ಹವಾ ಮತ್ತು ಹಣವನ್ನು ಧುರಂಧರ್ ಪಡೆದಿದೆ. ಒಟಿಟಿಗೆ ಆದ್ಯತೆ ಕೊಡುತ್ತಿದ್ದ ಸಿನಿಮಾ ಪ್ರೇಮಿಗಳು ಥಿಯೇಟರ್​ಗಳತ್ತ ದಾಪುಗಾಲಿಡುವಂತೆ ಮಾಡಿದೆ. ಇದರ ಪರಿಣಾಮವೋ ಎಂಬಂತೆ ಪಿವಿಆರ್ ಐನಾಕ್ಸ್ (PVR Inox) ಸಂಸ್ಥೆಯ ಷೇರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಕಳೆದ ವೀಕೆಂಡ್​ನಲ್ಲಿ ಧುರಂಧರ್ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ. ಇದರ ಪರಿಣಾಮ ಪಿವಿಆರ್ ಷೇರುಗಳ ಮೇಲೆ ಆದಂತಿದೆ. ಇವತ್ತು ಸೋಮವಾರ ಬೆಳಗ್ಗೆ ಒಂದು ಹಂತದಲ್ಲಿ ಪಿವಿಆರ್ ಐನಾಕ್ಸ್ ಷೇರುಬೆಲೆ 1,134 ರೂವರೆಗೂ ಹೋಗಿತ್ತು. ಶುಕ್ರವಾರ ಸಂಜೆ 1,051 ರೂನಲ್ಲಿ ಟ್ರೇಡಿಂಗ್ ಅಂತ್ಯಗೊಂಡಿದ್ದ ಪಿವಿಆರ್ ಷೇರುಬೆಲೆ ಸೋಮವಾರ ಶೇ 7ರಷ್ಟು ಏರಿತ್ತು. ಸೋಮವಾರ ಕೊನೆಯಲ್ಲಿ ಅದರ ಬೆಲೆ 1,100 ರೂ ಆಸುಪಾಸಿನಲ್ಲಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

ಥಿಯೇಟರ್​ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನೂಕುನುಗ್ಗಲು ಸೃಷ್ಟಿಸಿದ ಕೆಲವೇ ಸಿನಿಮಾಗಳಲ್ಲಿ ಧುರಂಧರ್ ಒಂದು. ರಣವೀರ್ ಸಿಂಗ್ ಅವರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಇದೂ ಒಂದಾಗಿದೆ. ಕಳೆದ ಏಳು ವರ್ಷಗಳಲ್ಲಿ ರಣವೀರ್ ಸಿಂಗ್ ಅವರ ಯಾವುದೇ ಸಿನಿಮಾ ಕೂಡ ಧುರಂಧರ್​ನ ಒಂದು ವಾರದಷ್ಟು ಕಲೆಕ್ಷನ್ ಮಾಡಿದ್ದಿಲ್ಲ. ಅವರ ಅತಿದೊಡ್ಡ ಹಿಟ್ ಆಗಿರುವ ಪದ್ಮಾವತ್ ಅನ್ನೂ ಧುರಂಧರ್ ಮೀರಿಸುವ ಸಾಧ್ಯತೆ ಇದೆ.

ಪದ್ಮಾವತ್ 400 ಕೋಟಿ ರೂ ಕಲೆಕ್ಷನ್ ಕಂಡರೆ, ಧುರಂಧರ್ ಭಾರತದ ಬಾಕ್ಸ್ ಆಫೀಸ್​ನಲ್ಲಿ 10 ದಿನದಲ್ಲಿ ಮಾಡಿದ ಕಲೆಕ್ಷನ್ 350 ಕೋಟಿ ರೂ ಎಂದು ಹೇಳಲಾಗುತ್ತಿದೆ. ಜಾಗತಿಕ ಗಲ್ಲಾಪೆಟ್ಟಿಗೆಗಳನ್ನು ಎಣಿಸಿದರೆ 10 ದಿನದಲ್ಲೇ ಇದು ಗಳಿಸಿದ ಹಣ 530 ಕೋಟಿ ರೂಗೂ ಅಧಿಕ. ಈ ಲೆಕ್ಕದಲ್ಲಿ ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಧುರಂಧರ್ ಅತಿದೊಡ್ಡ ಹಿಟ್ ಸಿನಿಮಾ.

ಇದನ್ನೂ ಓದಿ: Mutual Fund Charges: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…

ಧುರಂಧರ್ ಸಿನಿಮಾದಲ್ಲಿ ರಣವೀರ್ ಸಿಂಗ್ ಭಾರತೀಯ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಖನ್ನ, ಸಂಜಯ್ ದತ್, ಅರ್ಜುನ್ ರಾಮಪಾಲ್, ಆರ್ ಮಾಧವನ್ ಮೊದಲಾದ ಸ್ಟಾರ್ ನಟರೂ ಅಭಿನಯಿಸಿದ್ದಾರೆ. ಪಾಕಿಸ್ತಾನದ ಕ್ರೈಮ್ ಲೋಕದ ಕುಖ್ಯಾತ ಪಾತಕಿಯ ಪಾತ್ರದಲ್ಲಿ ಅಕ್ಷಯ್ ಖನ್ನ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ