
ಬೆಂಗಳೂರು, ಮೇ 20: ರಾಜ್ಯದಲ್ಲಿ ಈಗ ಮಳೆಗಾಲದ ರೀತಿ ಭಾರೀ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು ನಗರದ ಹಲವು ಭಾಗಗಳು ಕೆರೆಗಳಂತಾಗಿವೆ. ಅಪಾರ್ಟ್ಮೆಂಟ್ಗಳ ಪಾರ್ಕಿಂಗ್ ಜಾಗಗಳಂತೂ ಅಕ್ಷರಶಃ ಸ್ವಿಮಿಂಗ್ ಪೂಲ್ ಆಗಿ ಹೋಗಿವೆ. ರಸ್ತೆಯಲ್ಲಿ ನಿಲ್ಲಿಸಿದ ಕಾರುಗಳೂ ಕೂಡ ಜಲಾವೃತಗೊಳ್ಳುತ್ತಿವೆ. ಮಳೆ ನೀರಿನ (rain flood water) ಮಧ್ಯೆ ಕಾರು ನಿಂತು ಹೋದರೆ, ಅಥವಾ ನಿಲ್ಲಿಸಿದ್ದ ಕಾರಿಗೆ ನೀರು ಆವೃತಗೊಂಡರೆ ಬಹಳ ಎಚ್ಚರದಿಂದ ಇರಬೇಕು. ಆ ಸಂದರ್ಭದಲ್ಲಿ ಕಾರಿನ ಎಂಜಿನ್ ಸ್ಟಾರ್ಟ್ ಮಾಡಿದರೆ ಕೆಟ್ಟು ಹೋಗುವ ಸಾಧ್ಯತೆ ಇದೆ. ಅದಕ್ಕಿಂತ ಹೆಚ್ಚಾಗಿ, ನಿಮಗೆ ಕಾರಿನ ಇನ್ಷೂರೆನ್ಸ್ (vehicle insurance) ಇದ್ದರೆ ಪ್ರಯೋಜನಕ್ಕೆ ಬರದಂತಾಗಿಬಿಡಬಹುದು.
ಮೊದಲಿಗೆ ನಿಮ್ಮ ಕಾರಿಗೆ ಮಾಡಿಸಿರುವ ಇನ್ಷೂರೆನ್ಸ್ ಪ್ಲಾನ್ ಯಾವ ರೀತಿಯದ್ದು ಎಂಬುದನ್ನು ಗಮನಿಸಿ. ನೀವು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಕವರೇಜ್ ಮಾತ್ರವೇ ಮಾಡಿಸಿದ್ದರೆ ಫ್ಲಡಿಂಗ್ ವೇಳೆ ಉಪಯೋಗಕ್ಕೆ ಬರುವುದಿಲ್ಲ. ಕಾಂಪ್ರಹೆನ್ಸಿವ್ ಇನ್ಷೂರೆನ್ಸ್ ಪ್ಲಾನ್ ಪಡೆದಿರಬೇಕು.
ಈ ಕಾಂಪ್ರಹೆನ್ಸಿವ್ ಪ್ಲಾನ್ನಲ್ಲಿ ಥರ್ಡ್ ಪಾರ್ಟಿ ವಿಮೆ ಜೊತೆಗೆ ನೈಸರ್ಗಿಕ ವಿಕೋಪಗಳಿಂದ ಕಾರಿಗೆ ಆಗುವ ಹಾನಿಗೂ ಕವರೇಜ್ ಸಿಗುತ್ತದೆ. ಅಪಘಾತ, ಕಳುವು ಇತ್ಯಾದಿಗೂ ಕವರೇಜ್ ಇರುತ್ತದೆ.
ಇದನ್ನೂ ಓದಿ: ಭಾರತೀಯ ಮನೆಗಳಲ್ಲಿದೆ ಜಗತ್ತಿನ ಅತಿಹೆಚ್ಚು ಚಿನ್ನ; ಅವಿಷ್ಟೂ ಸೇರಿಸಿದರೆ ಇವತ್ತಿನ ಮೌಲ್ಯ ಅದೆಷ್ಟು ಅಗಾಧ ಗೊತ್ತಾ?
ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪ್ಲಾನ್ಗಿಂತ ಕಾಂಪ್ರಹೆನ್ಸಿವ್ ಪ್ಲಾನ್ನ ಪ್ರೀಮಿಯಮ್ ಹೆಚ್ಚಿರುತ್ತದೆ. ಹೆಚ್ಚಿನ ಜನರು, ಆರ್ಟಿಒ ನಿಯಮ ಪಾಲನೆ ಉದ್ದೇಶದಿಂದ ನಾಮಕವಾಸ್ತೆಗೆ ಇನ್ಷೂರೆನ್ಸ್ ಪಾಲಿಸಿ ಪಡೆಯುವುದುಂಟು. ಅಂಥವರು ಕಡಿಮೆ ಪ್ರೀಮಿಯಮ್ನ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪ್ಲಾನ್ ಪಡೆದಿರುತ್ತಾರೆ. ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್ ಪ್ಲಾನ್ ಎಲ್ಲಾ ರೀತಿಯಿಂದ ಅಗತ್ಯವಾದುದು.
ಇದನ್ನೂ ಓದಿ: ದುಡ್ಡು ಉಳಿಸೋಕೆ ಎಐ ಇಟ್ಟು ಕೈಸುಟ್ಟುಕೊಂಡ ಕಂಪನಿ; ಈಗ ಮತ್ತೆ ಮನುಷ್ಯರೇ ಗತಿ
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನೀರಿನಲ್ಲಿ ಕಾರು ನಿಂತಿದ್ದಾಗ ನೀವು ಎಂಜಿನ್ ಸ್ಟಾರ್ಟ್ ಮಾಡಿ, ಅದು ಕೆಟ್ಟು ಹೋಗಿಬಿಟ್ಟರೆ ಆಗ ಇನ್ಷೂರೆನ್ಸ್ ಕವರೇಜ್ ಸಿಕ್ಕೋದಿಲ್ಲ. ಹೀಗಾಗಿ, ಕಾರು ಸ್ಟಾರ್ಟ್ ಮಾಡುವ ಮುನ್ನ ಈ ಮೇಲಿನ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ