AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Earn Crores: ತಿಂಗಳಿಗೆ 5,000 ರೂ ಹೂಡಿಕೆ; ಕೋಟ್ಯಾಧೀಶರನಾಗಲು ಎಷ್ಟು ವರ್ಷ ಬೇಕು?

Become crorepathi with Rs 5,000 per month investment: ನೀವು ಪ್ರತೀ ತಿಂಗಳು ನಿಯಮಿತವಾಗಿ ಕೇವಲ 5,000 ರೂ ಮಾತ್ರವೇ ಹೂಡಿಕೆ ಮಾಡಿದರೆ, ಒಂದು ಕೋಟಿ ರೂ ಆಗಲು ಸುಮಾರು 20-30 ವರ್ಷ ಬೇಕಾಗಬಹುದು. ನೀವು ಹೂಡಿಕೆ ಮಾಡಿರುವ ಫಂಡ್ ಶೇ. 12ರಷ್ಟು ವಾರ್ಷಿಕ ದರದಲ್ಲಿ ರಿಟರ್ನ್ ಕೊಟ್ಟರೆ ಕೇವಲ 25 ವರ್ಷದಲ್ಲಿ ಒಂದು ಕೋಟಿ ರೂ ಪಡೆಯಬಹುದು. ಸ್ಟೆಪಪ್ ಹೂಡಿಕೆ ಮಾಡಿದರೆ, ಅಂದರೆ ಪ್ರತೀ ವರ್ಷ ಹೂಡಿಕೆ ಹೆಚ್ಚಿಸುತ್ತಾ ಹೋದರೆ ಇನ್ನೂ ಬೇಗ ಕೋಟ್ಯಾಧೀಶ್ವರ ಎನಿಸಬಹುದು.

Earn Crores: ತಿಂಗಳಿಗೆ 5,000 ರೂ ಹೂಡಿಕೆ; ಕೋಟ್ಯಾಧೀಶರನಾಗಲು ಎಷ್ಟು ವರ್ಷ ಬೇಕು?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2025 | 2:42 PM

Share

ನೀವು ಐದು ಲಕ್ಷ ರೂ ಸಾಲ ಮಾಡಿ, ಅದನ್ನು ತೀರಿಸಲು ಏಳೆಂಟು ವರ್ಷ ಇಎಂಐ ಕಟ್ಟುತ್ತಲೇ ಇರುತ್ತಿರಬಹುದು. ಒಂದು ಕೋಟಿ ರೂ ಹೇಗಪ್ಪ ಸಂಪಾದಿಸುವುದು ಎಂದು ನಿಮಗೆ ಯಾವತ್ತಾದರೂ ಅನಿಸಿದ್ದೇ ಇರುತ್ತದೆ. ಹಣಕಾಸು ಶಿಸ್ತು ಇಲ್ಲದೇ ಹೋದರೆ ಒಂದು ಲಕ್ಷ ರೂ ಹಣ ಕೂಡಿಡುವುದೂ ಕೂಡ ಕಷ್ಟವಾಗುತ್ತದೆ. ನೀವು ಒಂದು ಕೋಟಿ ರೂ ಗಳಿಸುತ್ತೇನೆಂದು ಸಂಕಲ್ಪ ತೊಡುವುದು ಎಲ್ಲಕ್ಕಿಂತ ಮುಖ್ಯ. ಸಂಬಳ ಕಡಿಮೆ ಇದ್ದರೂ ಕೂಡ ಕೋಟಿಯ ಒಡೆಯನಾಗುವುದು ದೊಡ್ಡ ವಿಷಯವಲ್ಲ. ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ (investment) ನೀವು ಅಚ್ಚರಿಪಡುವಷ್ಟು ಹಣವಂತರಾಗಲು ಸಾಧ್ಯ. ಇದೆಲ್ಲವೂ ನಿಮ್ಮ ಬದ್ಧತೆ ಹಾಗೂ ನೀವು ಯಾವುದರ ಮೇಲೆ ಹೂಡಿಕೆ ಮಾಡುತ್ತೀರಿ ಎಂಬುದನ್ನು ಅವಲಂಬಿಸುತ್ತದೆ.

ಬ್ಯಾಂಕ್ ಆರ್​​ಡಿಯಲ್ಲಿ 5,000 ರೂ ಹೂಡಿಕೆ

ನೀವು ಬ್ಯಾಂಕ್​​ನ ರಿಕರಿಂಗ್ ಡೆಪಾಸಿಟ್ ಪ್ಲಾನ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಬಹುದು. ಅದು ಶೇ. 7ರ ವಾರ್ಷಿಕ ರಿಟರ್ನ್ ಕೊಡುತ್ತದೆಂದು ಭಾವಿಸಿ. ಆಗ 10 ವರ್ಷ ನೀವು ಇದೇ ರೀತಿ ಹೂಡಿಕೆ ಮುಂದುವರಿಸಿದರೆ 8-9 ಲಕ್ಷ ರೂ ಸಿಗುತ್ತದೆ.

ಎಸ್​​​ಐಪಿ ಪ್ಲಾನ್​​​ನಲ್ಲಿ ಹೂಡಿಕೆ ಮಾಡಿ…

ನೀವು ಮ್ಯೂಚುವಲ್ ಫಂಡ್​​ನ ಎಸ್​​ಐಪಿ ಪ್ಲಾನ್​​ನಲ್ಲಿ ಹೂಡಿಕೆ ಮಾಡುವುದು ಇನ್ನೊಂದು ಪರ್ಯಾಯ ಉಳಿತಾಯ ಕಮ್ ಇನ್ವೆಸ್ಟ್​​ಮೆಂಟ್ ಆಯ್ಕೆಯಾಗಿದೆ. ನೀವು ಮ್ಯುಚುವಲ್ ಫಂಡ್​ನ ಎಸ್​​ಐಪಿಯಲ್ಲಿ ತಿಂಗಳಿಗೆ 5,000 ರೂನಂತೆ 10 ವರ್ಷ ಹೂಡಿಕೆ ಮಾಡಿದರೆ 10-12 ಲಕ್ಷ ರೂ ಗಳಿಸಬಹುದು. ನಿಮ್ಮ ಹೂಡಿಕೆ ಶೇ. 10-12ರ ವಾರ್ಷಿಕ ದರದಲ್ಲಿ ಬೆಳೆಯಬಹುದು ಎಂಬ ಅಂದಾಜಿರುವ ಮೊತ್ತ ಇದು.

ಇದನ್ನೂ ಓದಿ
Image
ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನೇನು ಸಮಸ್ಯೆ?
Image
ಷೇರುಗಳ ಮೇಲೆ ಹೂಡಿಕೆ ಮಾಡುವವರೆ, ಈ ಪಂಚ ಪಾಠ ತಿಳಿದಿರಿ
Image
ಎಪಿವೈ ಪೆನ್ಷನ್ ಸ್ಕೀಮ್; ಅರ್ಹತೆ, ವಯಸ್ಸು ಇತ್ಯಾದಿ ಮಾಹಿತಿ
Image
ಪರ್ಸನಲ್ ಲೋನ್; ಕಣ್ಣಿಗೆ ಕಾಣದ ಶುಲ್ಕಗಳಿವು..

ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ

ಒಂದು ಕೋಟಿ ರೂ ಗಳಿಸಲು ಎಷ್ಟು ವರ್ಷ ಬೇಕು?

ಸಾಮಾನ್ಯವಾಗಿ ಮ್ಯುಚುವಲ್ ಫಂಡ್​​​ಗಳು ವರ್ಷಕ್ಕೆ ಶೇ. 10ರಿಂದ 12ರಷ್ಟು ರಿಟರ್ನ್ ಕೊಡಬಹುದು ಎಂದು ನಿರೀಕ್ಷಿಸಬಹುದು. ನೀವು ತಿಂಗಳಿಗೆ 5,000 ರೂನಂತೆ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋಗುತ್ತೀರಿ. ಅದು ಸರಾಸರಿಯಾಗಿ ಶೇ. 12ರ ವಾರ್ಷಿಕ ರಿಟರ್ನ್ ಕೊಟ್ಟರೆ, ಹೂಡಿಕೆ ಮೊತ್ತ ಒಂದು ಕೋಟಿ ರೂ ಆಗಲು 24-25 ವರ್ಷ ಬೇಕಾಗುತ್ತದೆ.

ಒಂದು ವೇಳೆ, ಫಂಡ್ ಶೇ. 10ರಷ್ಟು ಮಾತ್ರವೇ ಬೆಳೆದಲ್ಲಿ ನಿಮಗೆ ಒಂದು ಕೋಟಿ ಶೇಖರಣೆಯಾಗಲು 27-28 ವರ್ಷ ಬೇಕಾಗುತ್ತದೆ.

ಸ್ಟೆಪ್ ಅಪ್ ತಂತ್ರ ಅನುಸರಿಸಿ…

ಸ್ಟೆಪ್ ಅಪ್ ಇನ್ವೆಸ್ಟಿಂಗ್ ಎಂದರೆ ನೀವು ವರ್ಷಕ್ಕೆ ಹೂಡಿಕೆ ಹೆಚ್ಚಿಸುವುದು. ಉದಾಹರಣೆಗೆ, ನೀವು 5,000 ರೂ ಹೂಡಿಕೆ ಮಾಡುತ್ತಿರುತ್ತೀರಿ. ಮುಂದಿನ ವರ್ಷ ಸಂಬಳ ಹೆಚ್ಚಾಗುವುದರಿಂದ ಹೆಚ್ಚಿನ ಹಣ ಸಿಗುತ್ತದೆ. ನೀವು ಶೇ. 10ರಷ್ಟು ಹೆಚ್ಚು ಹೂಡಿಕೆ ಮಾಡಲು ಅವಕಾಶ ಇರಬಹುದು. ಆಗ 5,000 ರೂ ಜೊತೆಗೆ ಇನ್ನೂ 500 ರೂ ಹೆಚ್ಚು ಹೂಡಿಕೆ ಮಾಡಬಹುದು. ಅದೇ ರೀತಿ ಪ್ರತೀ ವರ್ಷವೂ ಹೂಡಿಕೆ ಹೆಚ್ಚಿಸುತ್ತಾ ಹೋಗುವುದೇ ಸ್ಟೆಪ್ ಅಪ್ ಇನ್ವೆಸ್ಟಿಂಗ್ ಎನ್ನುವುದು.

ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು

ವಾರ್ಷಿಕ ಶೇ. 10ರಷ್ಟು ಬೆಳೆಯುವ ಫಂಡ್​​​ನಲ್ಲಿ 5,000 ರೂ ಎಸ್​​ಐಪಿ ಮಾಡುತ್ತಾ, ಶೇ. 10ರ ಸ್ಟೆಪ್ ಅಪ್ ಕ್ರಮ ಅನುಸರಿಸಿದರೆ ನೀವು ಒಂದು ಕೋಟಿ ರೂ ಗಳಿಸಲು 19-20 ವರ್ಷ ಬೇಕಾಗುತ್ತದೆ.

ಕಾಂಪೌಂಡಿಂಗ್ ಎಫೆಕ್ಟ್ ಅದ್ಭುತವಾದುದು…

ನಿಮ್ಮ ಹೂಡಿಕೆ ಅವಧಿ ಹೆಚ್ಚಿದಷ್ಟೂ ನಿಮ್ಮ ರಿಟರ್ನ್ ಹೆಚ್ಚುತ್ತಾ ಹೋಗುತ್ತದೆ. ಇದು ಕಾಂಪೌಂಡಿಂಗ್ ಎಫೆಕ್ಟ್. ಉದಾಹರಣೆಗೆ, ಶೇ. 12ರ ರಿಟರ್ನ್ ನೀಡುವ ಫಂಡ್​​​ನಲ್ಲಿ 5,000 ರೂ ಎಸ್​​ಐಪಿ ಮಾಡಿದರೆ 10 ಲಕ್ಷ ರೂ ಆಗಲು 10 ವರ್ಷ ಬೇಕಾಗುತ್ತದೆ. ಅದೇ 20 ಲಕ್ಷ ರೂ ಆಗಲು 15 ವರ್ಷವೂ ಬೇಕಾಗುವುದಿಲ್ಲ.

ಇದು ಎಸ್​​ಐಪಿ ಮಾತ್ರವಲ್ಲ, ನಿಗದಿತ ಆದಾಯ ತರುವ ಯಾವುದೇ ಪ್ಲಾನ್​​ಗಳಲ್ಲೂ ಈ ಕಾಂಪೌಂಡಿಂಗ್ ಎಫೆಕ್ಟ್ ಇರುತ್ತದೆ. ಹಣ ಡಬಲ್ ಆಗುವ ವೇಗ ಹೆಚ್ಚುತ್ತಲೇ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ