
ಮುಂಬೈ, ಮೇ 25: ಪುಣೆ ಮೂಲದ ನೈಬ್ ಗ್ರೂಪ್ನ (NIBE group) ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಮಹಾರಾಷ್ಟ್ರದ ಶಿರಡಿಯಲ್ಲಿ ಸ್ಥಾಪನೆಯಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟನೆ ಮಾಡಿದ್ದಾರೆ. ನೈಬ್ ಘಟಕದಲ್ಲಿ ರಾಕೆಟ್ ಲಾಂಚರ್ ಸಿಸ್ಟಂಗಳು, ಕಾಮಿಕಾಜೆ ಡ್ರೋನ್ ಹಾಗೂ ಇತರ ದೇಶೀಯ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ. ಉದ್ಘಾಟನೆ ವೇಳೆ ರಾಜನಾಥ್ ಸಿಂಗ್ ಅವರ ಜೊತೆ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರೂ ಉಪಸ್ಥಿತರಿದ್ದರು.
ನೈಬ್ ಸಂಸ್ಥೆ ಬೆಂಗಳೂರು ಸೇರಿದಂತೆ ದೇಶದ ಕೆಲವೆಡೆ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿದೆ. ಭಾರತೀಯ ಸೇನೆಗೆ ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳ ಪೂರೈಕೆ ಮಾಡುತ್ತದೆ. ಇತ್ತೀಚೆಗೆ ಅದು ಸೂರ್ಯಾಸ್ತ್ರ ಎನ್ನುವ ರಾಕೆಟ್ ಲಾಂಚರ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ಈ ಸೂರ್ಯಾಸ್ತ್ರ ಸಿಸ್ಟಂನಿಂದ 300 ಕಿಮೀ ದೂರದವರೆಗೆ ರಾಕೆಟ್ಗಳನ್ನು ಹಾರಿಸಲು ಸಾಧ್ಯ. ಒಡಿಶಾದ ಚಂಡೀಪುರ್ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್) ರಾಕೆಟ್ ಲಾಂಚರ್ ಸಿಸ್ಟಂ ಅನ್ನು ಪರೀಕ್ಷಿಸಲಾಯಿತು.
ಇದನ್ನೂ ಓದಿ: ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ
ಅಹಿಲ್ಯಾ ನಗರ್ ಜಿಲ್ಲೆಯಲ್ಲಿರುವ ಈ ನೈಬ್ ಘಟಕದಲ್ಲಿ ಸಮಗ್ರ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಲಾಗುತ್ತಿದೆ. ಮದ್ದುಗುಂಡುಗಳು, ಮಿಸೈಲ್ ಸಿಸ್ಟಂಗಳು, ಸುಧಾರಿತ ಡಿಫೆನ್ಸ್ ಟೆಕ್ನಾಲಜಿ, ಕ್ಲೀನ್ ಎನರ್ಜಿ ಇತ್ಯಾದಿಯನ್ನು ಒಂದೇ ಕಡೆ ನೆಲೆಗೊಳಿಸಲಾಗಿದೆ.
ಭಾರತವನ್ನು ಮುಂದಿನ 25-30 ವರ್ಷದಲ್ಲಿ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ದೇಶವಾಗಲು ಯಾವ ಶಕ್ತಿಗೂ ತಡೆಯಲು ಆಗದು ಎಂದು ಈ ವೇಳೆ ಡಿಫೆನ್ಸ್ ಮಿನಿಸ್ಟರ್ ರಾಜನಾಥ್ ಸಿಂಗ್ ಹೇಳಿದರು.
ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?
ಇದೇ ವೇಳೆ ಅವರು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಹೆಚ್ಚುತ್ತಿರುವ ಕುರಿತು ಮಾತನಾಡಿದರು. ಕೆಲ ವರ್ಷಗಳ ಹಿಂದೆ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ತೊಡಗಿದ್ದ ಖಾಸಗಿ ಕಂಪನಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಶೇ. 25-30ಕ್ಕೆ ಏರಿದೆ. ಮುಂದಿನ ವರ್ಷಗಳಲ್ಲಿ ಸಂಖ್ಯೆ ಶೇ. 50ಕ್ಕೆ ಏರುವ ಗುರಿ ಇದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ