AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ಜೆಟ್2 ವಿಮಾನದ ಪೈಲಟ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. LS1266 ವಿಮಾನವು ಟೆನೆರೈಫ್‌ನಿಂದ ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದಾಗ 220 ಪ್ರಯಾಣಿಕರಿದ್ದ ವಿಮಾನ ಓಲಾಡಲಾರಂಭಿಸಿತು. ಈ ವೇಳೆ ಸ್ಟೀವಾರ್ಡೆಸ್‌ಗಳು ಕಣ್ಣೀರು ಸುರಿಸುತ್ತಾ ಓಡುತ್ತಿರುವುದು ಕಂಡುಬಂದಿತು. ಯಾವುದಾದರೂ ಪ್ರಯಾಣಿಕರು ಹೃದಯಕ್ಕೆ ಸಂಬಂಧಿಸಿದ ಪ್ರಥಮ ಚಿಕಿತ್ಸೆ ವೈದ್ಯಕೀಯ ತರಬೇತಿ ಪಡೆದಿದ್ದಾರೆಯೇ? ಎಂದು ಮೈಕ್​ನಲ್ಲಿ ಕೇಳಲಾಯಿತು. ಎಂದು ಕೇಳುವುದು ಕೇಳಿಸಿತು. ಆಮೇಲೇನಾಯ್ತು?

30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?
Jet2 Plane
ಸುಷ್ಮಾ ಚಕ್ರೆ
|

Updated on: May 24, 2026 | 6:19 PM

Share

ನವದೆಹಲಿ, ಮೇ 24: ಸ್ಪೇನ್‌ನ ಟೆನೆರೈಫ್‌ನಿಂದ ಯುಕೆಯ ಬರ್ಮಿಂಗ್ಹ್ಯಾಮ್‌ಗೆ ಹೊರಟಿದ್ದ 220 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೆಟ್2 ಫ್ಲೈಟ್ LS1266, 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಆ ವಿಮಾನದ ಪೈಲಟ್​​ಗೆ ಹೃದಯಾಘಾತವಾಗಿದೆ (Heart Attack). ಇದರಿಂದಾಗಿ ವಿಮಾನವನ್ನು ಪೋರ್ಚುಗಲ್‌ನ ಪೋರ್ಟೊ ವಿಮಾನ ನಿಲ್ದಾಣಕ್ಕೆ ತಿರುಗಿಸಬೇಕಾಯಿತು. ಸಹ ಪೈಲಟ್ ಸಕಾಲಿಕವಾಗಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವು ವೇಗವಾಗಿ ಇಳಿಯಿತು.

ಇದು ವಿಮಾನದಲ್ಲಿ ಅವ್ಯವಸ್ಥೆ ಮತ್ತು ಭೀತಿಯನ್ನು ಉಂಟುಮಾಡಿತು. ಈ ವಿಮಾನದಲ್ಲಿ ಒಟ್ಟು 220 ಪ್ರಯಾಣಿಕರಿದ್ದರು. ಪೈಲಟ್‌ನ ಆರೋಗ್ಯ ಹದಗೆಟ್ಟಿದ್ದರಿಂದ ಕ್ಯಾಬಿನ್ ಸಿಬ್ಬಂದಿ ತೀವ್ರ ಚಿಂತಿತರಾದರು. ಅವರು ಕಣ್ಣೀರು ಸುರಿಸುತ್ತಾ ಪ್ರಯಾಣಿಕರ ನಡುವೆ ಓಡಿಹೋದರು. ಪ್ರಯಾಣಿಕರಲ್ಲಿ ಯಾರಾದರೂ ವೈದ್ಯಕೀಯ ತರಬೇತಿಯನ್ನು ಹೊಂದಿದ್ದಾರೆಯೇ ಅಥವಾ ವೈದ್ಯರೇ ಎಂದು ಮೈಕ್​ನಲ್ಲಿ ಕೇಳಲಾಯಿತು. ವಿಮಾನದಲ್ಲಿನ ಲೈಟ್​​ಗಳು ಮಿನುಗಿದವು. ಇದರಿಂದ ಸಿಬ್ಬಂದಿ ಆತಂಕಕ್ಕೊಳಗಾದರು. ನಿದ್ರಿಸುತ್ತಿದ್ದ ಪ್ರಯಾಣಿಕರು ಎಚ್ಚರಗೊಂಡು ಆತಂಕಕ್ಕೊಳಗಾದರು.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಪೈಲಟ್ ಅನಾರೋಗ್ಯಕ್ಕೆ ಒಳಗಾದ ನಂತರ ಸಹ-ಪೈಲಟ್ ತಕ್ಷಣ ಪ್ರತಿಕ್ರಿಯಿಸಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ಪೋರ್ಚುಗಲ್‌ನ ಪೋರ್ಟೊಗೆ ತಿರುಗಿಸಲಾಯಿತು. ವಿಮಾನವು ತುಂಬಾ ವೇಗವಾಗಿ ಇಳಿಯುತ್ತಿದ್ದಂತೆ, ಒಳಗಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ಸಹ-ಪೈಲಟ್ ತ್ವರಿತವಾಗಿ ಪೋರ್ಟೊ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ರನ್‌ವೇಯಲ್ಲಿ ಸಿದ್ಧವಾಗಿದ್ದ ತುರ್ತು ವೈದ್ಯಕೀಯ ಸಿಬ್ಬಂದಿ ತಕ್ಷಣ ವಿಮಾನವನ್ನು ಹತ್ತಿ, ಪೈಲಟ್‌ಗೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರು.

ಇದನ್ನೂ ಓದಿ: ಹೃದಯಾಘಾತವಾದಾಗ ಮೊದಲು 10ನಿಮಿಷದಲ್ಲಿ ಏನು ಮಾಡಬೇಕು?

ವಿಮಾನ ಸುರಕ್ಷಿತವಾಗಿ ಇಳಿದರೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ. ಪ್ರಯಾಣಿಕರಿಗೆ ಇಳಿದ ನಂತರ 1 ಗಂಟೆಗೂ ಹೆಚ್ಚು ಕಾಲ ವಿಮಾನದಿಂದ ಇಳಿಯಲು ಅವಕಾಶ ನೀಡಲಿಲ್ಲ, ಸರಿಯಾದ ವಸತಿ ಸೌಲಭ್ಯಗಳನ್ನು ಒದಗಿಸಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಜೆಟ್2 ಏರ್ಲೈನ್ಸ್, ಪೈಲಟ್ ಅನಾರೋಗ್ಯದಿಂದಾಗಿ ವಿಮಾನವನ್ನು ಬೇರೆಡೆಗೆ ತಿರುಗಿಸಬೇಕಾಯಿತು ಮತ್ತು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಮಾನದ ವಿಳಂಬಕ್ಕೆ ಕ್ಷಮೆಯಾಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​
ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ