AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flight to Ayodhya: ರಾಮಮಂದಿರ ಅನಾವರಣ: ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ ಗಗನಕ್ಕೆ

Ayodhya Flight Ticket Price: ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ವೀಕ್ಷಿಸಲು ಸಾಗರೋಪಾದಿಯಲ್ಲಿ ಜನರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಜನವರಿ 21ರಂದು ಅಯೋಧ್ಯೆಗೆ ಹೋಗುವ ಎಲ್ಲಾ ವಿಮಾನಗಳಿಗೂ ಬೇಡಿಕೆ ಶುರುವಾಗಿದೆ. ಅಂದು ಫ್ಲೈಟ್ ಟಿಕೆಟ್ ಬೆಲೆ ಎರಡು, ಮೂರು ಪಟ್ಟು ಹೆಚ್ಚಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಟಿಕೆಟ್ ಬೆಲೆ 22 ಸಾವಿರ ರೂ ಆಗಿದೆ.

Flight to Ayodhya: ರಾಮಮಂದಿರ ಅನಾವರಣ: ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ ಗಗನಕ್ಕೆ
ಅಯೋಧ್ಯೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Dec 28, 2023 | 11:13 AM

ನವದೆಹಲಿ, ಡಿಸೆಂಬರ್ 19: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ (Ram Temple consecration) ಕಾರ್ಯಕ್ರಮ 2024ರ ಜನವರಿ 22ರಂದು ನಡೆಯಲಿದೆ. ಅಂದು ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ಅಯೋಧ್ಯೆಗೆ ತೆರಳಲಿದ್ದಾರೆ. ಅಂತೆಯೇ, ಮರ್ಯಾದ ಪುರುಷೋತ್ತಮ ಶ್ರೀ ರಾಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ನಾಮಾಂಕಿತವಾಗಿರುವ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ (Ayodhya Airport) ಹೋಗುವ ವಿಮಾನಗಳಿಗೆ ಭಾರೀ ಬೇಡಿಕೆ ಶುರುವಾಗಿವೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ ಗಗನಕ್ಕೇರಿದೆ.

ದೇಶದ ಒಳಗೆ ವಿವಿಧ ನಗರಗಳಿಂದ ಅಯೋಧ್ಯೆಗೆ ಇಂಡಿಗೋ ಏರ್ಲೈನ್ಸ್ ವಿಮಾನಗಳು ಸಂಚಾರ ನಡೆಸುತ್ತವೆ. ರಾಮಮಂದಿರ ಉದ್ಘಾಟನಾ ಸಮಾರಂಭ ಇರುವ ಜನವರಿ 21ರಂದು ಹಾಗೂ ಸುತ್ತಮುತ್ತಲ ಕೆಲ ದಿನ ಅಲ್ಲಿಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ ಹೆಚ್ಚಿದೆ. ಬಹುತೇಕ ಮಾರ್ಗಗಳಲ್ಲಿ ಟಿಕೆಟ್ ಬೆಲೆ ಡಬಲ್ ಇದೆ. ದೆಹಲಿಯಲ್ಲಿ ಟಿಕೆಟ್ ಬೆಲೆ ಮೂರು ಪಟ್ಟು ಹೆಚ್ಚಿದೆ. ಜೈಪುರದಿಂದ ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ 10,000 ರೂಗಿಂತ ಕಡಿಮೆ ಇರುತ್ತದೆ. ಆದರೆ, ಜನವರಿ 21ರಂದು ಟಿಕೆಟ್ ಬೆಲೆ 19,000 ರೂ ಇದೆ. ಜನವರಿ 23ರಂದು 30,000 ರೂ ಆಗಿದೆ.

ಇದನ್ನೂ ಓದಿ: ದಿವಾಳಿ ಎದ್ದ ಗೋಫಸ್ಟ್ ಏರ್ಲೈನ್ ಸಂಸ್ಥೆಯ ಖರೀದಿಗೆ ಮುಂದಾದ ಸ್ಪೈಸ್ ಜೆಟ್; ಸ್ಕೈ ಒನ್, ಸಾಫ್ರಿಕ್​ನಿಂದಲೂ ಆಸಕ್ತಿ

ಜನವರಿ 21ರಂದು ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ (ಎಕನಾಮಿ ಕ್ಲಾಸ್)

  • ಮುಂಬೈನಿಂದ: 19,000 ರೂನಿಂದ 20,000 ರೂ; ಬೇರೆ ದಿನಗಳಲ್ಲಿ ಸುಮಾರು 10,000 ರೂ
  • ಬೆಂಗಳೂರಿನಿಂದ: 22,000 ರೂ; ಬೇರೆ ದಿನಗಳಲ್ಲಿ 12,000 ರೂ
  • ಚೆನ್ನೈನಿಂದ: 20,000 ರೂ; ಬೇರೆ ದಿನಗಳಲ್ಲಿ 13,000 ರೂ
  • ದೆಹಲಿಯಿಂದ: 10,199 ರೂ; ಬೇರೆ ದಿನಗಳಲ್ಲಿ 3,500 ರೂ
  • ಕೋಲ್ಕತಾದಿಂದ: 20,768 ರೂ; ಬೇರೆ ದಿನಗಳಲ್ಲಿ 10,000 ರೂ
  • ಜೈಪುರದಿಂದ: ಜನವರಿ 21ಕ್ಕೆ ಟಿಕೆಟ್ ಬೆಲೆ 19,000 ರೂ ಇದೆ. ಜನವರಿ 23ಕ್ಕೆ 30,000 ರೂ ಇದೆ. ಬೇರೆ ದಿನಗಳಲ್ಲಿ ಫ್ಲೈಟ್ ಟಿಕೆಟ್ 10,000 ರೂಗಿಂತ ಕಡಿಮೆ ಇರುತ್ತದೆ.

ಇದನ್ನೂ ಓದಿ: ಪೇಟೆಂಟ್ ವ್ಯಾಜ್ಯ; ಆ್ಯಪಲ್​ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?

ರಾಮ ಮಂದಿರ ಉದ್ಘಾಟನೆ

ಶ್ರೀರಾಮನ ಜನ್ಮಸ್ಥಾನವೆಂದು ಭಾವಿಸಲಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿ ಭವ್ಯವಾಗಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಜನವರಿ 22ರಂದು ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಹಾಗೂ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಸೇರಿದಂತೆ ಬಹಳಷ್ಟು ಗಣ್ಯರು ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಕ್ರೀಡೆ, ಉದ್ಯಮ ಹೀಗೆ ವಿವಿಧ ರಂಗಗಳ ಗಣ್ಯರಿಗೆ ಆಹ್ವಾನ ಕೊಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Tue, 19 December 23

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ