ನವದೆಹಲಿ, ಏಪ್ರಿಲ್ 5: ಯುಪಿಐ ಮೂಲಕ ಕೆಲ ಎಟಿಎಂಗಳಲ್ಲಿ ಹಣ ವಿತ್ಡ್ರಾ ಮಾಡುವ ಅವಕಾಶ ಪಡೆದಿದ್ದೇವೆ. ಅದೇ ರೀತಿ, ಯುಪಿಐ ಬಳಸಿ ಕ್ಯಾಷ್ ಡೆಪಾಸಿಟ್ (cash deposit through UPI) ಮಾಡುವ ಅವಕಾಶವೂ ಸಿಕ್ಕಿದೆ. ಎಂಪಿಸಿ ಸಭೆ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸೌಲಭ್ಯವನ್ನು ಘೋಷಿಸಿದ್ದಾರೆ. ಕ್ಯಾಷ್ ಡೆಪಾಸಿಟ್ ಮೆಷಿನ್ಗಳಲ್ಲಿ (ಸಿಡಿಎಂ) ಎಟಿಎಂ ಕಾರ್ಡ್ ಬಳಸಿ ನೀವು ನಿಮ್ಮ ಖಾತೆಗೆ ಕ್ಯಾಷ್ ಡೆಪಾಸಿಟ್ ಮಾಡಬಹುದು. ಈಗ ಇದರ ಜೊತೆಗೆ ಯುಪಿಐ ಮೂಲಕ ಈ ಮೆಷಿನ್ಗಳಿಗೆ ಲಾಗಿನ್ ಆಗಿ ಕ್ಯಾಷ್ ಡೆಪಾಸಿಟ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಮಾರ್ಗಸೂಚಿಯನ್ನು ಆರ್ಬಿಐ ಸದ್ಯದಲ್ಲೇ ಬಹಿರಂಗಪಡಿಸಲಿದೆ.
ಸಿಡಿಎಂ ಬಳಕೆಯನ್ನು ಜನಪ್ರಿಯಗೊಳಿಸಲು ಆರ್ಬಿಐ ಈ ಕ್ರಮ ಜಾರಿ ಮಾಡಿರುವ ಸಾಧ್ಯತೆ ಇದೆ. ಬ್ಯಾಂಕ್ ಕಚೇರಿಗಳಲ್ಲಿ ನೀವು ಕ್ಯಾಷ್ ಡೆಪಾಸಿಟ್ ಮೆಷಿನ್ಗಳನ್ನು ಕಾಣಬಹುದು. ಕೆಲ ನಿರ್ದಿಷ್ಟ ಎಟಿಎಂ ಸೆಂಟರ್ಗಳಲ್ಲೂ ಸಿಡಿಎಂಗಳಿರುತ್ತವೆ. ಇದರಿಂದ ಬ್ಯಾಂಕುಗಳಲ್ಲಿ ಸರದಿಯಲ್ಲಿ ನಿಂತು ಕ್ಯಾಷ್ ಡೆಪಾಸಿಟ್ ಮಾಡುವಾಗ ಸಮಯ ವ್ಯಯ ಆಗುವುದನ್ನು ಸಿಡಿಎಂ ಮೂಲಕ ತಪ್ಪಿಸಬಹುದು. ಬ್ಯಾಂಕ್ ಕಚೇರಿ ಬಾಗಿಲು ಹಾಕಿದರೂ ಈ ಸಿಡಿಎಂಗಳು ತೆರೆದಿರುತ್ತವೆ. ಇದರಿಂದ ಗ್ರಾಹಕರಿಗೆ ಅನುಕೂಲ ಆಗುತ್ತದೆ.
ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 6.5ರ ಬಡ್ಡಿದರ ಮುಂದುವರಿಕೆ
ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವಿಸಸ್ ಸೆಂಟರ್ನಲ್ಲಿ (ಐಎಫ್ಎಸ್ಸಿ) ಸಾವರೀನ್ ಗೋಲ್ಡ್ ಬಾಂಡ್ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸ್ಕೀಮ್ ಆರಂಭಿಸಲಾಗುತ್ತಿದೆ.
ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ರೀಟೇಲ್ ಹೂಡಿಕೆದಾರರು ಹೂಡಿಕೆ ಮಾಡಲು ರೀಟೇಲ್ ಡೈರೆಕ್ಟ್ ಸ್ಕೀಮ್ ಅನ್ನು 2020ರಲ್ಲಿ ಆರಂಭಿಸಲಾಗಿದೆ. ಇದರ ಅಧಿಕೃತ ಪೋರ್ಟಲ್ ಇದೆ. ಇದೀಗ ಮೊಬೈಲ್ ಆ್ಯಪನ್ನೂ ಆರ್ಬಿಐ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಆರ್ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ಗಾಗಿ ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಸ್ಕೀಮ್, ಇಲ್ಲಿದೆ ಡೀಟೇಲ್ಸ್
ಪೇಟಿಎಂ, ಫೋನ್ಪೆ ಇತ್ಯಾದಿ ಪ್ರೀಪೇಡ್ ಪೆಮೆಂಟ್ ಇನ್ಸ್ಟ್ರುಮೆಂಟ್ಸ್ನಿಂದ (ಪಿಪಿಐ) ಯುಪಿಐ ಪಾವತಿ ಮಾಡಬೇಕಾದರೆ ಆ ಪಿಪಿಐಗಳ ಪ್ಲಾಟ್ಫಾರ್ಮ್ ಅನ್ನು ಬಳಸಬೇಕಾಗುತ್ತದೆ. ಇದೀಗ ಥರ್ಡ್ ಪಾರ್ಟಿ ಯುಪಿಐ ಆ್ಯಪ್ಗಳನ್ನು ಇದಕ್ಕಾಗಿ ಬಳಸಲು ಅವಕಾಶ ಕೊಡಲು ಆರ್ಬಿಐ ನಿರ್ಧರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ