ಆರ್​ಬಿಐನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೇಶವನ್ ರಾಮಚಂದ್ರನ್ ನೇಮಕ; ಇಲ್ಲಿದೆ ರಿಸರ್ವ್ ಬ್ಯಾಂಕ್ ಮುಖ್ಯ ಅಧಿಕಾರಿಗಳ ಪಟ್ಟಿ

Kesavan Ramchandran appointed as new RBI executive director: ಆರ್​​ಬಿಐನ ರೆಗ್ಯುಲೇಶನ್ ವಿಭಾಗದ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೇಶವನ್ ರಾಮಚಂದ್ರನ್ ಅವರನ್ನು ನೇಮಕ ಮಾಡಲಾಗಿದೆ. ಜುಲೈ 1ರಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೆ ಮುನ್ನ ಅವರು ಆರ್​​ಬಿಐನಲ್ಲಿ ಪ್ರಿನ್ಸಿಪಾಲ್ ಚೀಫ್ ಜನರಲ್ ಮ್ಯಾನೇಜರ್ ಆಗಿದ್ದರು. 30 ವರ್ಷಗಳ ಕಾಲ ಅನುಭವ ಹೊಂದಿರುವ ಕೆ ರಾಮಚಂದ್ರನ್ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

ಆರ್​ಬಿಐನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೇಶವನ್ ರಾಮಚಂದ್ರನ್ ನೇಮಕ; ಇಲ್ಲಿದೆ ರಿಸರ್ವ್ ಬ್ಯಾಂಕ್ ಮುಖ್ಯ ಅಧಿಕಾರಿಗಳ ಪಟ್ಟಿ
ಆರ್​​ಬಿಐ

Updated on: Jul 02, 2025 | 11:03 AM

ನವದೆಹಲಿ, ಜುಲೈ 2: ಭಾರತೀಯ ರಿಸರ್ವ್ ಬ್ಯಾಂಕ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್​​ಗಳ (RBI executive director) ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಆರ್​​ಬಿಐನಲ್ಲೇ ಪ್ರಧಾನ ಮುಖ್ಯ ಜನರಲ್ ಮ್ಯಾನೇಜರ್ ಆಗಿದ್ದ ಕೇಶವನ್ ರಾಮಚಂದ್ರನ್ (Kesavan Ramachandran) ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಕೆ ರಾಮಚಂದ್ರನ್ ಅವರು ನಿನ್ನೆಯಿಂದ (ಜುಲೈ 1) ಅಧಿಕಾರ ಪಡೆದಿದ್ದಾರೆ. ಆರ್​​ಬಿಐನ ನಿಯಮಾವಳಿ ನೋಡಿಕೊಳ್ಳುವ ರೆಗ್ಯುಲೇಶನ್ ವಿಭಾಗದ ಜವಾಬ್ದಾರಿ ಅವರ ಮೇಲಿದೆ.

ಕೇಶವನ್ ರಾಮಚಂದ್ರನ್ ಅವರು ಮೂರು ದಶಕಗಳ ಅನುಭವ ಹೊಂದಿದ್ದಾರೆ. ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯಗಳಲ್ಲಿ ವಿವಿಧ ಉನ್ನತ ವ್ಯಾಸಂಗ ಮತ್ತು ಸರ್ಟಿಫಿಕೇಟ್​​ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: GST: ಜೂನ್​​ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್​​ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ

ಆರ್​​ಬಿಐ ಉನ್ನತ ಅಧಿಕಾರಿಗಳ ಪಟ್ಟಿ

ಆರ್​​ಬಿಐ ಗವರ್ನರ್: ಸಂಜಯ್ ಮಲ್ಹೋತ್ರಾ

ಡೆಪ್ಯುಟಿ ಗವರ್ನರ್​​ಗಳು: ಎಂ ರಾಜೇಶ್ವರ್ ರಾವ್, ಟಿ ರಬಿಶಂಕರ್, ಸ್ವಾಮಿನಾಥನ್ ಜಾನಕಿರಾಮನ್, ಪೂನಂ ಗುಪ್ತಾ

ಎಕ್ಸಿಕ್ಯೂಟಿವ್ ಡೈರೆಕ್ಟರ್​​ಗಳು: ಕೇಶವನ್ ರಾಮಚಂದ್ರನ್, ಎಸ್.ಸಿ. ಮುರ್ಮು, ವಿವೇಕ್ ದೀಪ್, ರೋಹಿತ್ ಜೈನ್, ರಾಧಾ ಶ್ಯಾಮ್ ರಾಥೋ, ಅಜಯ್ ಕುಮಾರ್, ಡಾ. ರಾಜೀವ್ ರಂಜನ್, ಪಿ ವಾಸುದೇವನ್, ಆರ್ ಲಕ್ಷ್ಮೀಕಾಂತ ರಾವ್, ಅರ್ನಬ್ ಕುಮಾರ್ ಚೌಧುರಿ, ಅವಿರಳ್ ಜೈನ್, ಡಾ. ಅಜಿತ್ ರತ್ನಾಕರ್ ಜೋಷಿ, ಇಂದ್ರಾನಿಲ್ ಭಟ್ಟಾಚಾರ್ಯ, ಸುಧಾ ಬಾಲಕೃಷ್ಣನ್

ಇಲ್ಲಿ ಪ್ರತಿಯೊಬ್ಬ ಕಾರ್ಯನಿರ್ವಾಹನ ನಿರ್ದೇಶಕರಿಗೆ ಪ್ರತ್ಯೇಕ ವಿಭಾಗದ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿರುತ್ತದೆ.

ಇದನ್ನೂ ಓದಿ: ಕೇಂದ್ರದಿಂದ RDI ಸ್ಕೀಮ್; ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರದಿಂದ ಭರ್ಜರಿ ಯೋಜನೆ

ಆರ್​ಬಿಐ ಹಣಕಾಸು ನೀತಿ ಸಮಿತಿ ಸದಸ್ಯರು

ಸಂಜಯ್ ಮಲ್ಹೋತ್ರಾ, ಪೂನಂ ಗುಪ್ತಾ, ಡಾ. ರಾಜೀವ್ ರಂಜನ್, ಪ್ರೊಫೆಸರ್ ರಾಮ್ ಸಿಂಗ್, ಡಾ. ಸೌಗತ ಭಟ್ಟಾಚಾರ್ಯ, ಡಾ. ನಾಗೇಶ್ ಕುಮಾರ್.

ಇಲ್ಲಿ ಕೊನೆಯ ಮೂವರಾಗಿರುವ ರಾಮ್ ಸಿಂಗ್, ಸೌಗತ ಮತ್ತು ನಾಗೇಶ್ ಕುಮಾರ್ ಅವರು ಸರ್ಕಾರದಿಂದ ನೇಮಕವಾಗಿರುವ ಬಾಹ್ಯ ಸದಸ್ಯರಾಗಿದ್ದಾರೆ. ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಿಂದ ಬಂದವರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ