ಜನವರಿಯಲ್ಲಿ ಹೊಸ ವರ್ಷಾಚರಣೆಯಿಂದ ಗಣರಾಜ್ಯೋತ್ಸವವರೆಗೂ 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

2026 January total 16 days holidays as per RBI calendar: 2026ರ ಜನವರಿ ತಿಂಗಳಲ್ಲಿ ಹೊಸ ವರ್ಷಾಚರಣೆ, ಗಣರಾಜ್ಯೋತ್ಸವ, ಮಕರ ಸಂಕ್ರಾಂತಿ ಇತ್ಯಾದಿ ವಿವಿಧ ವಿಶೇಷ ದಿನಗಳಿಗೆ. ಆರ್​ಬಿಐ ಬಿಡುಗಡೆ ಮಾಡಿದ ಕ್ಯಾಲೆಂಡರ್ ಪ್ರಕಾರ ಜನವರಿಯಲ್ಲಿ ಒಟ್ಟು 16 ರಜಾದಿನಗಳಿವೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳು, ಪ್ರಾದೇಶಿಕ ರಜೆಗಳೂ ಒಳಗೊಂಡಿವೆ.

ಜನವರಿಯಲ್ಲಿ ಹೊಸ ವರ್ಷಾಚರಣೆಯಿಂದ ಗಣರಾಜ್ಯೋತ್ಸವವರೆಗೂ 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜೆ

Updated on: Dec 30, 2025 | 4:28 PM

ನವದೆಹಲಿ, ಡಿಸೆಂಬರ್ 30: ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಕೆಲ ಹಬ್ಬ, ಹರಿದಿನಗಳು, ವಿಶೇಷ ದಿನಗಳಿವೆ. ಹೊಸ ವರ್ಷಾಚರಣೆ, ವಿವೇಕಾನಂದ ಜಯಂತಿ, ಮಕರ ಸಂಕ್ರಾಂತಿ, ಗಣರಾಜ್ಯೋತ್ಸವ ಹೀಗೆ ಸಾಲು ಸಾಲು ರಜೆಗಳಿವೆ. ತಮಿಳುನಾಡಿನಲ್ಲಿ ಜನವರಿ 15ರಿಂದ 18ರವರೆಗೆ ಸತತ ನಾಲ್ಕು ದಿನಗಳು ಬ್ಯಾಂಕ್ ಬಂದ್ ಆಗಿರುತ್ತದೆ. ಆರ್​ಬಿಐ (RBI) ಪ್ರಕಟಿಸಿದ ರಜಾ ದಿನಗಳ ಕ್ಯಾಲಂಡರ್​ನಲ್ಲಿ ವಿವಿಧ ಪ್ರಾದೇಶೀಕ ರಜೆಗಳನ್ನೂ ಒಳಗೊಳ್ಳಲಾಗಿದೆ. ಮಕರ ಸಂಕ್ರಾಂತಿಗೆ ದಕ್ಷಿಣದ ರಾಜ್ಯಗಳಲ್ಲಿ ರಜೆ ಇದ್ದರೆ ಉತ್ತರ ಭಾರತದಲ್ಲಿ ಬ್ಯಾಂಕ್​ಗಳು ತೆರೆದಿರುತ್ತವೆ.

ಜನವರಿಯಲ್ಲಿ ಇರುವ 16 ದಿನಗಳ ರಜೆಯಲ್ಲಿ ಆರು ಶನಿವಾರ ಮತ್ತು ಭಾನುವಾರದ ರಜೆಗಳೂ ಒಳಗೊಂಡಿವೆ. ಜನವರಿ 26ರಂದು ಗಣರಾಜ್ಯೋತ್ಸವ ಅಂಗವಾಗಿ ಸಾರ್ವತ್ರಿಕ ರಜೆ ಇರುತ್ತದೆ. ಉಳಿದ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

2026ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳಿವು

  • ಜನವರಿ 1, ಗುರುವಾರ: ಹೊಸ ವರ್ಷಾಚರಣೆ (ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ರಜೆ)
  • ಜನವರಿ 2, ಶುಕ್ರವಾರ: ಹೊಸ ವರ್ಷಾಚರಣೆ, ಮನ್ನಂ ಜಯಂತಿ (ಕೇರಳ ಹಾಗೂ ಮಿಝೋರಾಮ್ ರಾಜ್ಯಗಳಲ್ಲಿ ರಜೆ)
  • ಜನವರಿ 3, ಶನಿವಾರ: ಹಜ್ರತ್ ಅಲಿ ಜಯಂತಿ (ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಮಿಝೋರಾಮ್ ರಾಜ್ಯಗಳಲ್ಲಿ ರಜೆ)
  • ಜನವರಿ 4: ಭಾನುವಾರದ ರಜೆ
  • ಜನವರಿ 10: ಎರಡನೇ ಶನಿವಾರದ ರಜೆ
  • ಜನವರಿ 11: ಭಾನುವಾರದ ರಜೆ
  • ಜನವರಿ 12, ಸೋಮವಾರ: ಸ್ವಾಮಿ ವಿವೇಕಾನಂದ ಜಯಂತಿ (ಉತ್ತರಪ್ರದೇಶದಲ್ಲಿ ರಜೆ)
  • ಜನವರಿ 14, ಬುಧವಾರ: ಮಕರ ಸಂಕ್ರಾಂತಿ / ಬಿಹು ಮಾಘ (ಗುಜರಾತ್, ಒಡಿಶಾ, ಅಸ್ಸಾಂ, ಅರುಣಾಚಲ ರಾಜ್ಯಗಳಲ್ಲಿ ರಜೆ)
  • ಜನವರಿ 15, ಗುರುವಾರ: ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ, ಪೊಂಗಲ್, ಮಾಘೆ ಸಂಕ್ರಾಂತಿ (ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಸಿಕ್ಕಿಂ ರಾಜ್ಯಗಳಲ್ಲಿ ರಜೆ)
  • ಜನವರಿ 16, ಶುಕ್ರವಾರ: ತಿರುವಳ್ಳುವರ್ ದಿನ (ತಮಿಳುನಾಡಿನಲ್ಲಿ ರಜೆ)
  • ಜನವರಿ 17, ಶನಿವಾರ: ಉಳವರ್ ತಿರುನಾಳ್ (ತಮಿಳುನಾಡಿನಲ್ಲಿ ರಜೆ)
  • ಜನವರಿ 18: ಭಾನುವಾರದ ರಜೆ
  • ಜನವರಿ 23, ಶುಕ್ರವಾರ: ನೇತಾಜಿ ಸುಭಾಷ್ ಚಂದ್ರ ಬೋಸ್, ಸರಸ್ವತಿ ಪೂಜೆ, ವೀರ ಸುರೇಂದ್ರಸಾಯಿ ಜಯಂತಿ (ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಜೆ)
  • ಜನವರಿ 24: ನಾಲ್ಕನೇ ಶನಿವಾರದ ರಜೆ
  • ಜನವರಿ 25: ಭಾನುವಾರದ ರಜೆ
  • ಜನವರಿ 26, ಸೋಮವಾರ: ಗಣರಾಜ್ಯೋತ್ಸವ (ಎಲ್ಲೆಡೆ ರಜೆ)

ಇದನ್ನೂ ಓದಿ: ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ

ಕರ್ನಾಟಕದಲ್ಲಿ 2026 ಜನವರಿಯಲ್ಲಿ ಬ್ಯಾಂಕ್ ರಜೆಗಳು

ಕರ್ನಾಟಕದಲ್ಲಿ ಜನವರಿಯಲ್ಲಿ ಬ್ಯಾಂಕುಗಳಿಗೆ ರಜೆ ಇರುವುದು ಎಂಟು ದಿನಗಳು ಮಾತ್ರ. ಇದರಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳಿವೆ. ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವಕ್ಕೆ ರಜೆ ಇರುತ್ತದೆ. ಉಳಿದಂತೆ ಆ ತಿಂಗಳು 23 ದಿನಗಳು ಬ್ಯಾಂಕುಗಳು ಬಾಗಿಲು ತೆರೆದಿರುತ್ತವೆ. ಈ ಎಂಟು ರಜಾ ದಿನಗಳ ಪಟ್ಟಿ ಇಲ್ಲಿದೆ:

  • ಜನವರಿ 4: ಭಾನುವಾರದ ರಜೆ
  • ಜನವರಿ 10: ಎರಡನೇ ಶನಿವಾರದ ರಜೆ
  • ಜನವರಿ 11: ಭಾನುವಾರದ ರಜೆ
  • ಜನವರಿ 15, ಗುರುವಾರ: ಮಕರ ಸಂಕ್ರಾಂತಿ
  • ಜನವರಿ 18: ಭಾನುವಾರದ ರಜೆ
  • ಜನವರಿ 24: ನಾಲ್ಕನೇ ಶನಿವಾರದ ರಜೆ
  • ಜನವರಿ 25: ಭಾನುವಾರದ ರಜೆ
  • ಜನವರಿ 26, ಸೋಮವಾರ: ಗಣರಾಜ್ಯೋತ್ಸವ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ