8ನೇ ವೇತನ ಆಯೋಗ; ಜನವರಿ 1ರಿಂದ ಯಾರಿಗೆಲ್ಲ ಸಂಬಳ ಹೆಚ್ಚಾಗಲಿದೆ?
ಕೇಂದ್ರ ಸರ್ಕಾರದ 8ನೇ ವೇತನ ಆಯೋಗ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದರೆ, ಸರ್ಕಾರ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಹಾಗಾದರೆ, 2026ರಲ್ಲಿ ಯಾರಿಗೆ ವೇತನ ಹೆಚ್ಚಳವಾಗಲಿದೆ, ಇದರಿಂದ ಯಾರಿಗೆಲ್ಲ ಪ್ರಯೋಜನವಾಗಲಿದೆ? ಎಷ್ಟು ಸಂಬಳ ಹೆಚ್ಚಾಗಲಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ನವದೆಹಲಿ, ಡಿಸೆಂಬರ್ 30: ಇನ್ನೇನು ಹೊಸ ವರ್ಷದ (New Year 2026) ಆರಂಭಕ್ಕೆ ಒಂದೇ ದಿನ ಉಳಿದಿದೆ. 2026ರ ಆರಂಭದೊಂದಿಗೆ 8ನೇ ವೇತನ ಆಯೋಗವು (8th Pay Commission) ಜನವರಿ 1ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಹೀಗಾಗಿ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಸಿಪಿಸಿ, 7ನೇ ವೇತನ ಆಯೋಗದ ಸಿಂಧುತ್ವವು ಡಿಸೆಂಬರ್ 31ರಂದು ಮುಕ್ತಾಯಗೊಳ್ಳುತ್ತದೆ. ಜನವರಿ 1ರಿಂದ 8ನೇ ವೇತನ ಆಯೋಗದ ಇನ್ನೂ ಘೋಷಿಸದ ನಿಬಂಧನೆಗಳು ಜಾರಿಗೆ ಬರುತ್ತವೆ.
ಈ ವರ್ಷದ ಜನವರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 8ನೇ ವೇತನ ಆಯೋಗವನ್ನು ಘೋಷಿಸಿತು. ಅದಾದ ತಿಂಗಳುಗಳ ನಂತರ ಸಿಪಿಸಿಯ ಸದಸ್ಯರನ್ನು ಘೋಷಿಸಲಾಯಿತು. ಈಗ ನಡೆಯುತ್ತಿರುವ 8ನೇ ವೇತನ ಆಯೋಗದ ಬಗ್ಗೆ ದೊಡ್ಡ ಚರ್ಚೆಗಳು ವೇತನ ಹೆಚ್ಚಳ ಮತ್ತು ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿವೆ. ಫಿಟ್‌ಮೆಂಟ್ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಯನ್ನು ನಿರ್ಧರಿಸಲಾಗುತ್ತದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್‌ಮೆಂಟ್ ಅಂಶವು 2.57 ಆಗಿದೆ.
8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದರೆ, ಮೂಲಗಳ ಪ್ರಕಾರ ಹೊಸ ವರ್ಷದಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ. 8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸಿಪಿಸಿಯ ಸದಸ್ಯರು ಫಿಟ್‌ಮೆಂಟ್ ಅಂಶವನ್ನು ಸೂಚಿಸುತ್ತಾರೆ. ಇದು ಸಿಪಿಸಿ ಹೊಸ ಮೂಲ ವೇತನವನ್ನು ಲೆಕ್ಕಾಚಾರ ಮಾಡಲು ಬಳಸುವ ಗುಣಕವಾಗಿದೆ. ಫಿಟ್‌ಮೆಂಟ್ ಅಂಶವನ್ನು ನಿರ್ಧರಿಸಲು 8ನೇ ವೇತನ ಆಯೋಗವು ಹಣದುಬ್ಬರ ಸೇರಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: SBI PO Salary: 8ನೇ ವೇತನ ಆಯೋಗದ ಪ್ರಕಾರ ಎಷ್ಟಾಗಲಿದೆ SBI ನ ಪಿಓಗಳ ಸಂಬಳ?
8ನೇ ವೇತನ ಆಯೋಗ ಜಾರಿಗೆ ಬಂದ ನಂತರ ಎಲ್ಲಾ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಮೂಲ ವೇತನವು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಅವರ ವೇತನ ಮಟ್ಟವನ್ನು ಅವಲಂಬಿಸಿ ಇದು ಉದ್ಯೋಗಿಯಿಂದ ಉದ್ಯೋಗಿಗೆ ಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದರಂತೆ, ಕ್ಯಾಬಿನೆಟ್ ಕಾರ್ಯದರ್ಶಿಯಂತಹ ಉನ್ನತ ಅಧಿಕಾರಿಗಳನ್ನು ಒಳಗೊಂಡ 18ನೇ ಹಂತದ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಜಾರಿಯಿಂದ ಅತಿ ಹೆಚ್ಚು ವೇತನ ಹೆಚ್ಚಳವಾಗಲಿದೆ.
ಎಕ್ಸ್ನಲ್ಲಿ 8ನೇ ವೇತನ ಆಯೋಗದ ಜಾರಿಯಿಂದ ಆಗುವ ಸಂಬಳದ ಹೆಚ್ಚಳದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದು ಜಾರಿಯಾದ ಬಳಿಕ ಪೊಲೀಸ್ ಕಾನ್ಸ್ಟೆಬಲ್ಗೂ ಸಾಫ್ಟ್ವೇರ್ ಇಂಜಿನಿಯರ್ ಸಮವಾಗಿ ಸಂಬಳ ಸಿಗಲಿದೆ ಎನ್ನಲಾಗಿದೆ.
8ನೇ ವೇತನ ಆಯೋಗದ ಅಧಿಕೃತ ಘೋಷಣೆಯ ನಂತರವೇ ನೌಕರರಿಗೆ ವೇತನ ದೊರೆಯುತ್ತದೆಯಾದರೂ, ಜನವರಿಯಿಂದ ಬಾಕಿ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. 8ನೇ ವೇತನ ಆಯೋಗದ ನಿಬಂಧನೆಗಳನ್ನು ಘೋಷಿಸಿದ ನಂತರ ಅವುಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; 8ನೇ ವೇತನ ಆಯೋಗ ಜಾರಿಯಾದರೆ ಶೇ. 34ರಷ್ಟು ಸಂಬಳ ಹೆಚ್ಚಳ?
ಸಿಪಿಸಿ ಸದಸ್ಯರು ಸೂಚಿಸುವ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ 8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಈ ಫಿಟ್‌ಮೆಂಟ್ ಅಂಶವನ್ನು 2.15ನಲ್ಲಿ ಇರಿಸಿದರೆ ಅವರ ಮೂಲ ವೇತನ ಎಷ್ಟು ಹೆಚ್ಚಾಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
ಹಂತ 1 – ಪ್ರಸ್ತುತ ಸಂಬಳ: 18,000 ರೂ.; ಹೆಚ್ಚಿದ ಸಂಬಳ: 38,700 ರೂ.
ಹಂತ 5 – ಪ್ರಸ್ತುತ ಸಂಬಳ: 29,200 ರೂ.; ಹೆಚ್ಚಿದ ಸಂಬಳ: 62,780 ರೂ.
ಹಂತ 10 – ಪ್ರಸ್ತುತ ಸಂಬಳ: 56,100 ರೂ.; ಹೆಚ್ಚಿದ ಸಂಬಳ: 1,20,615 ರೂ.
ಹಂತ 15 – ಪ್ರಸ್ತುತ ಸಂಬಳ: 1,82,200 ರೂ.; ಹೆಚ್ಚಿದ ಸಂಬಳ: 3,91,730 ರೂ.
ಹಂತ 18 – ಪ್ರಸ್ತುತ ಸಂಬಳ: 2,50,000 ರೂ.; ಹೆಚ್ಚಿದ ಸಂಬಳ: 5,37,500 ರೂ.
ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತರ ವೇತನ ರಚನೆ, ಪಿಂಚಣಿಗಳು ಮತ್ತು ಭತ್ಯೆಗಳನ್ನು ಪರಿಶೀಲಿಸುತ್ತದೆ ಮತ್ತು ಪರಿಷ್ಕರಿಸುತ್ತದೆ. 8ನೇ ವೇತನ ಆಯೋಗದ ಜಾರಿಯಿಂದ ಕ್ಯಾಬಿನೆಟ್ ಕಾರ್ಯದರ್ಶಿಯಂತಹ ಉನ್ನತ ಅಧಿಕಾರಿಗಳನ್ನು ಒಳಗೊಂಡಂತೆ ಹಂತ 18ರ ಸರ್ಕಾರಿ ನೌಕರರು ಅತಿಯಾದ ವೇತನದ ಹೆಚ್ಚಳವನ್ನು ಪಡೆಯಲಿದ್ದಾರೆ. ಹಾಗಂತ ಇದು ಅಧಿಕೃತ ಘೋಷಣೆಯಲ್ಲ. ಇದೊಂದು ಅಂದಾಜಿನ ಲೆಕ್ಕಾಚಾರವಷ್ಟೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




