RBI: ಇಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ; ರೆಪೋ ದರ ಬಗ್ಗೆ ಎಲ್ಲರ ಚಿತ್ತ

RBI Governor Shaktikanta Das Press Conference: ಭಾರತೀಯ ರಿಸರ್ವ್ ಬ್ಯಾಂಕ್​ನ ಗವರ್ನರ್ ಶಕ್ತಿಕಾಂತ ದಾಸ್ ಇಂದು ಎಂಪಿಸಿ ಸಭೆಯ ಬಳಿಕ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ರೆಪೋ ದರ ಸೇರಿದಂತೆ ಪ್ರಮುಖ ದರಗಳನ್ನು ಘೋಷಿಸಲಿದ್ದಾರೆ. ಹಾಗೆಯೇ, ಹಣದುಬ್ಬರ, ಜಿಡಿಪಿ ಇತ್ಯಾದಿ ಬಗ್ಗೆ ಆರ್​ಬಿಐ ಮಾಡಿರುವ ಅಂದಾಜುಗಳನ್ನು ಅವರು ಬಹಿರಂಗಪಡಿಸಲಿದ್ದಾರೆ.

RBI: ಇಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ; ರೆಪೋ ದರ ಬಗ್ಗೆ ಎಲ್ಲರ ಚಿತ್ತ
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2024 | 5:59 AM

ನವದೆಹಲಿ, ಫೆಬ್ರುವರಿ 8: ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ (RBI Monetary Policy Committee) ಮೂರು ದಿನಗಳ ಸಭೆ ಇಂದು ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ (ಫೆ. 8) ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಭೆಯ ನಿರ್ಧಾರ ಮತ್ತು ಚರ್ಚಿತ ಸಂಗತಿಗಳನ್ನು ಬಹಿರಂಗಪಡಿಸಲಿದ್ದಾರೆ. ಫೆಬ್ರುವರಿ 6ರಂದು ಆರಂಭಗೊಂಡ ಎಂಪಿಸಿ ಸಭೆಯಲ್ಲಿ ರೆಪೋ (repo rate) ಸೇರಿದಂತೆ ವಿವಿಧ ದರಗಳನ್ನು ಎಷ್ಟು ಇಡಬೇಕು ಎಂಬಿತ್ಯಾದಿ ವಿಚಾರಗಳ ಚರ್ಚೆಯಾಗಿದೆ. ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತದೆ. ಸುದ್ದಿಗೋಷ್ಠಿ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಕೆಲ ವರದಿಗಳ ಪ್ರಕಾರ, ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಬ್ಲೂಮ್​ಬರ್ಗ್ ನಡೆಸಿದ ಸಮೀಕ್ಷೆಯಲ್ಲಿ 41 ಆರ್ಥಿಕ ತಜ್ಞರು ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇವರೆಲ್ಲರ ಪ್ರಕಾರ ರೆಪೊ ದರದಲ್ಲಿ ಈ ಬಾರಿಯೂ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಗೋಲ್ಡ್​ಮ್ಯಾನ್ ಸ್ಯಾಕ್ಸ್,, ಬಾರ್ಕ್​ಲೇಸ್, ಎಸ್​ಬಿಐ ರಿಸರ್ಚ್ ಮೊದಲಾದ ಸಂಸ್ಥೆಗಳ ಆರ್ಥಿಕ ತಜ್ಞರು ಇದೇ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್​ನಲ್ಲಿ ಬಡ್ಡಿದರ ಕಡಿಮೆಗೊಳ್ಳುವ ನಿರೀಕ್ಷೆ; ಆರ್​ಬಿಐನ ಎಂಪಿಸಿ ಸಭೆ ಇವತ್ತಿಂದ; ಫೆ. 8ಕ್ಕೆ ನಿರ್ಧಾರ ಪ್ರಕಟ

ಹಣದುಬ್ಬರ ನಿಯಂತ್ರಣವೇ ಈ ಸವಾಲಿನದ್ದು…

ಆರ್​ಬಿಐ ಮುಂದಿರುವ ಪ್ರಮುಖ ಗುರಿ ಹಣದುಬ್ಬರ ಹೆಚ್ಚಳವನ್ನು ತಹಬದಿಗೆ ತಂದು, ಆರ್ಥಿಕತೆಗೆ ಹೆಚ್ಚು ಪುಷ್ಟಿ ಕೊಡುವುದು. ನವೆಂಬರ್​ನಲ್ಲಿ ಶೇ. 5.55ರಷ್ಟಿದ್ದ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 5.69ಕ್ಕೆ ಏರಿದೆ. ಆಹಾರ ಹಣದುಬ್ಬರ ದರ ಶೇ. 8ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ.

ಆರ್​ಬಿಐ ಹಣದುಬ್ಬರ ಏರಿಕೆ ದರವನ್ನು ಶೇ. 4ಕ್ಕೆ ಇಳಿಸುವ ಗುರಿ ಹೊಂದಿದೆ. ಹೆಚ್ಚುವರಿ ಸೇ. 2ರ ತಾಳಿಕೆ ಮಿತಿ ನಿಗದಿ ಮಾಡಿದೆ. ಅಂದರೆ ಹಣದುಬ್ಬರವು ಶೇ. 2ರಿಂದ 6ರ ಮಿತಿಯೊಳಗೆ ಇರಬೇಕು ಎಂಬುದು ರಿಸರ್ವ್ ಬ್ಯಾಂಕ್​ನ ಗುರಿ. ಈ ವರ್ಷ ಹಾಗೂ ಮುಂದಿನ ವರ್ಷ ಹಣದುಬ್ಬರ ಎಷ್ಟಾಗಬಹುದು ಎಂದು ಎಂಪಿಸಿ ಸಭೆಯಲ್ಲಿ ಚರ್ಚಿಸಿ ಒಂದು ಅಭಿಪ್ರಾಯಕ್ಕೆ ಬಂದಿರುವ ಸಾಧ್ಯತೆ ಇದೆ.

ಇದನ್ನೂ ಓದಿ: 2023-24 ಆರ್ಥಿಕ ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ 1 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರಂತೆ!

ಹಾಗೆಯೇ, ಜಿಡಿಪಿ ಬೆಳವಣಿಗೆ ಎಷ್ಟಾಗಬಹುದು ಎಂದೂ ಶಕ್ತಿಕಾಂತ ದಾಸ್ ತಿಳಿಸಲಿದ್ದಾರೆ. ಪ್ರತೀ ಎಂಪಿಸಿ ಸಭೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಬಗ್ಗೆ ಆರ್​ಬಿಐನ ಅಂದಾಜು ಇದ್ದೇ ಇರುತ್ತದೆ. ಹಣದುಬ್ಬರ ತಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮಟ್ಟದಲ್ಲಿ ಏರುತ್ತಿದೆ ಎನಿಸಿದಲ್ಲಿ ಆರ್​ಬಿಐ ರೆಪೋ ದರ ಹೆಚ್ಚಳಕ್ಕೆ ಕೈ ಹಾಕಬಹುದು. ಹಣದುಬ್ಬರ ಕಡಿಮೆ ಆಗಬಹುದು ಎಂದು ಅನಿಸಿದಲ್ಲಿ ಈ ಬಾರಿಯೋ ಅಥವಾ ಮುಂದಿನ ಬಾರಿಯೊ ಬಡ್ಡಿದರ ಕಡಿತಕ್ಕೆ ಆಲೋಚಿಸಬಹುದು. ಅಂಥದ್ದೇನಾದರೂ ಸಾಧ್ಯತೆ ಇದ್ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಸುಳಿವು ನೀಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್