RBI MPC Meet: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್​ಬಿಐ ಘೋಷಣೆ

Shaktikanta Das Press Meet: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಿದೆ. ಫೆಬ್ರುವರಿ 6ರಿಂದ ಆರಂಭವಾದ ಎಂಪಿಸಿ ಸಭೆಯಲ್ಲಿ ರೆಪೋ ದರ ಇತ್ಯಾದಿ ಪ್ರಮುಖ ವಿಚಾರಗಳನ್ನು ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ. ಬಡ್ಡಿದರದ ಯಥಾಸ್ಥಿತಿ ಉಳಿಸುವ ನಿರ್ಧಾರವನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದಾರೆ.

RBI MPC Meet: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್​ಬಿಐ ಘೋಷಣೆ
ಶಕ್ತಿಕಾಂತ ದಾಸ್
Follow us
|

Updated on:Feb 08, 2024 | 10:40 AM

ನವದೆಹಲಿ, ಜನವರಿ 8: ನಿರೀಕ್ಷೆಯಂತೆ ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ಮಾನಿಟರಿ ಪಾಲಿಸಿ ಕಮಿಟಿ ಸಭೆಯ (RBI MPC Meet) ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ತಿಳಿಸಿದ್ದಾರೆ. ಎಂಪಿಸಿ ಸಭೆ ಆರಂಭವಾಗುವ ಮುನ್ನ ಬಹಳಷ್ಟು ಆರ್ಥಿಕ ತಜ್ಞರು ಆರ್​ಬಿಐನಿಂದ ಬಡ್ಡಿದರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದರು. ರಾಯ್ಟರ್ಸ್ ಪೋಲ್​ನಲ್ಲಿ ಪಾಲ್ಗೊಂಡಿದ್ದ 41 ಆರ್ಥಿಕ ತಜ್ಞರ ಒಮ್ಮತದ ಅನಿಸಿಕೆ ಇದೇ ಆಗಿತ್ತು. ಎಸ್​ಬಿಐ ರಿಸರ್ಚ್​ನ ಆರ್ಥಿಕ ತಜ್ಞರು ಕೂಡ ಇದನ್ನೇ ಹೇಳಿದ್ದರು.

ಏನಿದು ರೆಪೋ ರೇಟ್?

ರೆಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ಆರ್​ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ಈ ದರದಲ್ಲಿ ವ್ಯತ್ಯಯವಾದರೆ ಬ್ಯಾಂಕುಗಳೂ ಕೂಡ ತಮ್ಮ ಗ್ರಾಹಕರ ಸಾಲ ಅಥವಾ ಠೇವಣಿಗೆ ಬಡ್ಡಿದರ ಪರಿಷ್ಕರಿಸಬಹುದು. ಹೀಗಾಗಿ, ಆರ್​ಬಿಐನ ರೆಪೋ ದರ ದೇಶದ ಹಣಕಾಸು ಕ್ಷೇತ್ರದ ಮೇಲೆ ಹಾಗೂ ಆ ಮೂಲಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ-ಪ್ಯೂಮಾ 8 ವರ್ಷದ ಒಡನಾಟ ಅಂತ್ಯ; ಎಜಿಲಿಟಾಸ್​ಗೆ ಇನ್ನು ವಿರಾಟ್ ಬಲ

ಹಣದುಬ್ಬರ ಇಳಿಕೆಯ ಸಮಾಧಾನ

ಹಣದುಬ್ಬರ ಇಳಿಕೆಯಾಗಿರಬಹುದು ಎಂದು ಆರ್​ಬಿಐ ಇದೇ ವೇಳೆ ಸಿಹಿ ಸುದ್ದಿ ನೀಡಿದೆ. 2022-23ರ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟಿದ್ದ ಹಣದುಬ್ಬರವು 2023-24ರಲ್ಲಿ ಏಪ್ರಿಲ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಶೇ. 5.5ಕ್ಕೆ ಇಳಿಕೆ ಆಗಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 2023-24ರ ಇಡೀ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.4ರಷ್ಟಿರಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ.

ಇನ್ನು, 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬ ಶೇ. 4.5ಕ್ಕೆ ಇಳಿಯಬಹುದು ಎನ್ನುವ ಶುಭ ವಾರ್ತೆಯನ್ನು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ. ಮುಂದಿನ ಹಣಕಾಸು ವರ್ಷದ ಮೊದಲ ನಾಲ್ಕು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 5, 4, 4.6 ಮತ್ತು 4.7ರಷ್ಟು ಹಣದುಬ್ಬರ ಇರಬಹುದು ಎಂದಿದ್ದಾರೆ ಅವರು.

ಇದೇ ವೇಳೆ 2024-24ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎನ್ನುವ ಅಂದಾಜಿಗೆ ಆರ್​ಬಿಐ ಬಂದಿದೆ. ಈ ವರ್ಷ ನಾಲ್ಕು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 7.2, ಶೇ. 6.8, ಶೇ. 7 ಮತ್ತು ಶೇ. 6.9ರಷ್ಟು ಜಿಡಿಪಿ ಬೆಳೆಯಬಹುದು ಎಂದು ಎಂಪಿಸಿ ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: ಎಲ್​ಐಸಿಯಿಂದ ಇಂಡೆಕ್ಸ್ ಪ್ಲಸ್ ಹೊಸ ಪಾಲಿಸಿ; ಷೇರುಪೇಟೆ ಬೆಳವಣಿಗೆಯ ಲಾಭ ಪಡೆಯಿರಿ

ಆರ್​ಬಿಐನ ಎಂಪಿಸಿಯಲ್ಲಿ ಇರುವ ಸದಸ್ಯರು

ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಆರ್​ಬಿಐ ಗವರ್ನರ್ ಸೇರಿದಂತೆ ಆರು ಮಂದಿ ಸದಸ್ಯರಿದ್ದಾರೆ. ಗವರ್ನರ್ ಶಕ್ತಿಕಾಂತ್ ದಾಸ್ ಅಲ್ಲದೇ, ರಾಜೀವ್ ರಂಜನ್, ಮೈಕೇಲ್ ದೇಬಬ್ರತಾ ಪಾತ್ರ, ಶಶಾಂಕ್ ಭಿಡೆ, ಆಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ ಅವರು ಈ ಸಮಿತಿ ಸದಸ್ಯರಾಗಿದ್ದಾರೆ. ಇವರಲ್ಲಿ ದಾಸ್, ರಂಜನ್ ಮತ್ತು ಮೈಕೇಲ್ ಅವರು ಆರ್​ಬಿಐ ಅಧಿಕಾರಿಗಳಾಗಿದ್ದರೆ, ಇನ್ನುಳಿದ ಮೂವರು ಸ್ವತಂತ್ರ ಸದಸ್ಯರು. ಈ ಸಮಿತಿ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:14 am, Thu, 8 February 24

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ