Loan Fee: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

RBI Calls For Transparency: ಬ್ಯಾಂಕುಗಳು ಗ್ರಾಹಕರಿಗೆ ಸಾಲ ಕೊಡುವಾಗ ಬಡ್ಡಿದರದ ಜೊತೆಗೆ ಪ್ರೋಸಸಿಂಗ್ ಫೀ, ಡಾಕ್ಯುಮೆಂಟೇಶನ್ ಫೀ ಹಾಗೂ ಇತರ ಶುಲ್ಕಗಳನ್ನು ಹಾಕುತ್ತವೆ. ಗ್ರಾಹಕರಿಗೆ ಬಡ್ಡಿದರದ ಬಗ್ಗೆ ಮಾತ್ರ ಸ್ಪಷ್ಟತೆ ಇರುತ್ತದೆ. ಬೇರೆ ಶುಲ್ಕಗಳ ಅರಿವಿರುವುದಿಲ್ಲ. ಸಾಲ ನೀಡುವಾಗ ಕೀ ಫ್ಯಾಕ್ಟ್ಸ್ ಸ್ಟೇಟ್ಮೆಂಟ್​ನಲ್ಲಿ ಬಡ್ಡಿದರ ಜೊತೆಗೆ ಎಲ್ಲಾ ಶುಲ್ಕಗಳ ಮಾಹಿತಿ ನೀಡಬೇಕು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

Loan Fee: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ
ರಿಸರ್ವ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2024 | 11:53 AM

ನವದೆಹಲಿ, ಫೆಬ್ರುವರಿ 8: ಗ್ರಾಹಕರಿಗೆ ಸಾಲ ನೀಡುವಾಗ ಕೆಎಫ್​ಎಸ್ ಅಥವಾ ಕೀ ಫ್ಯಾಕ್ಟ್ಸ್ ಸ್ಟೇಟ್ಮೆಂಟ್​ನಲ್ಲಿ ಸ್ಪಷ್ಟತೆ ಒದಗಿಸಬೇಕು ಎಂದು ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ ನೀಡಿದೆ. ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಸಾಲದ ವಿಚಾರದಲ್ಲಿ ಗ್ರಾಹಕರೊಂದಿಗೆ ಬ್ಯಾಂಕಿನ ನೀತಿ ಪಾರದರ್ಶಕವಾಗಿರಬೇಕು ಎಂದು ತಿಳಿಸಿದ್ದಾರೆ. ಬ್ಯಾಂಕುಗಳು ಸಾಲ ನೀಡುವಾಗ ವಾರ್ಷಿಕ ಬಡ್ಡಿದರ ಜೊತೆಗೆ ಪ್ರೋಸಸಿಂಗ್ ಶುಲ್ಕ, ಡಾಕ್ಯುಮೆಂಟೇಶನ್ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸುತ್ತದೆ. ಗ್ರಾಹಕರಿಗೆ ಈ ಶುಲ್ಕಗಳ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಆರ್​ಬಿಐ ಬ್ಯಾಂಕುಗಳಿಗೆ ನೀಡಿರುವ ಸೂಚನೆ ಮಹತ್ವದ್ದಾಗಿದೆ.

ಬ್ಯಾಂಕ್ ಸಾಲದ ಪ್ರೋಸಸಿಂಗ್ ಶುಲ್ಕ, ಡಾಕ್ಯುಮೆಂಟೇಶನ್ ಶುಲ್ಕ ಮತ್ತಿತರ ಶುಲ್ಕಗಳನ್ನು ಬಡ್ಡಿದರಕ್ಕೇ ಸೇರಿಸಿದರೆ ಗ್ರಾಹಕರಿಗೆ ವಾಸ್ತವ ಬಡ್ಡಿದರ ಎಷ್ಟು ಎಂಬುದು ಸ್ಪಷ್ಟವಾಗುತ್ತದೆ. ಬ್ಯಾಂಕ್ ಬಡ್ಡಿದರದಲ್ಲಿ ಪಾರದರ್ಶಕತೆ ಸಿಗುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

‘ಒಂದು ಸಾಲಕ್ಕೆ ಬಡ್ಡಿ ಎಷ್ಟು ಎಂಬುದು ಗ್ರಾಹಕರಿಗೆ ಗೊತ್ತಿರುತ್ತದೆ. ಆದರೆ, ಬಡ್ಡಿ ಜೊತೆಗೆ ಬೇರೆ ಇತರ ಶುಲ್ಕಗಳೂ ಇರುತ್ತವೆ. ಅವನ್ನೂ ಗ್ರಾಹಕರು ಕಟ್ಟಬೇಕು. ಇದರಿಂದ ಗ್ರಾಹಕರಿಗೆ ಸ್ಪಷ್ಟತೆ ಸಿಗುವುದಿಲ್ಲ. ಆ ಶುಲ್ಕಗಳನ್ನು ಬಡ್ಡಿದರದೊಂದಿಗೆ ಸೇರಿಸಿದರೆ ಆಗ ಗ್ರಾಹಕರಿಗೆ ತಾವು ಎಷ್ಟು ಪಾವತಿಸಬೇಕು ಎಂಬ ವಸ್ತುಸ್ಥಿತಿ ಗೊತ್ತಾಗುತ್ತದೆ,’ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಇದನ್ನೂ ಓದಿ: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್​ಬಿಐ ಘೋಷಣೆ

ಗ್ರಾಹಕರಿಗೆ ಹೆಚ್ಚು ಪಾರದರ್ಶಕತೆ ತರುವ ಸಲುವಾಗಿ ಕೀ ಫ್ಯಾಕ್ಟ್ಸ್ ಸ್ಟೇಟ್​ಮೆಂಟ್​ನಲ್ಲಿ ಪ್ರೋಸಸಿಂಗ್ ಶುಲ್ಕ, ಡಾಕ್ಯುಮೆಂಟೇಶನ್ ಶುಲ್ಕ ಇತ್ಯಾದಿಯನ್ನು ಒಳಗೊಳ್ಳಬೇಕು ಎಂದು ಹೇಳಿದ ದಾಸ್, ಕೆಎಫ್​ಎಸ್ ಕ್ರಮವನ್ನು ಎಲ್ಲಾ ರೀಟೇಲ್ ಮತ್ತು ಎಂಎಸ್​ಎಂಇ ಸಾಲಗಳಿಗೆ ವಿಸ್ತರಿಸಲಾಗುವುದು ಎಂದಿದ್ದಾರೆ.

ಎಂಪಿಸಿ ಸಭೆಯ ಹೈಲೈಟ್ಸ್

ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಬಳಿಕ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ಸೇರಿದಂತೆ ಪ್ರಮುಖ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಸತತ ಆರು ಬಾರಿ, ಅಂದರೆ ಕಳೆದ ಒಂದು ವರ್ಷದಿಂದಲೂ ರೆಪೋ ದರ ಶೇ. 6.5ರಲ್ಲೇ ಇದೆ. ರಿವರ್ಸ್ ರಿಪೋ, ಎಂಎಸ್​ಎಫ್, ಎಸ್​ಡಿಎಫ್​ಆರ್ ಮೊದಲಾದವೂ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಇದನ್ನೂ ಓದಿ: ಯುಪಿಐ ಮತ್ತು ಎನ್​ಡಿಎ ಅವಧಿಯಲ್ಲಿನ ಆರ್ಥಿಕ ನಿರ್ವಹಣೆ ಕುರಿತು ಕೇಂದ್ರದಿಂದ ಇಂದು ಶ್ವೇತಪತ್ರ

ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ಗೃಹಸಾಲ ಪಡೆದವರಿಗೆ ಅನುಕೂಲವೇ ಇದೆ. ಕಳೆದ ಒಂದು ವರ್ಷದಿಂದಲೂ ಬಡ್ಡಿದರ ಕಡಿಮೆಯೇ ಇದೆ. ಹಣದುಬ್ಬರ ಇಳಿಕೆ ಆಗುವ ಸಾಧ್ಯತೆ ಇರುವುದರಿಂದ ಜೂನ್ ಅಥವಾ ಆಗಸ್ಟ್ ತಿಂಗಳಲ್ಲಿ ಆರ್​ಬಿಐ ರೆಪೋ ದರ ಇಳಿಕೆ ಮಾಡುವ ಸಾಧ್ಯತೆಯೂ ಇದೆ.

ಬಡ್ಡಿದರ ಕಡಿಮೆ ಆದರೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪುಷ್ಟಿ ಸಿಕ್ಕಂತಾಗುತ್ತದೆ. ಹೆಚ್ಚು ಜನರು ಗೃಹಸಾಲ ಪಡೆದು ಮನೆಗಳನ್ನು ಖರೀದಿಸಲು ಮುಂದಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ