White Paper: ಯುಪಿಐ ಮತ್ತು ಎನ್​ಡಿಎ ಅವಧಿಯಲ್ಲಿನ ಆರ್ಥಿಕ ನಿರ್ವಹಣೆ ಕುರಿತು ಕೇಂದ್ರದಿಂದ ಇಂದು ಶ್ವೇತಪತ್ರ

NDA vs UPA: ಯುಪಿಎ ಸರ್ಕಾರ ಮತ್ತು ಎನ್​ಡಿಎ ಸರ್ಕಾರಗಳ ಅಧಿಕಾರಾವಧಿಯಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು ಎಂದು ಹೋಲಿಸಿ ಸರ್ಕಾರ ಶ್ವೇತ ಪತ್ರ ಮಂಡಿಸುವ ಸಾಧ್ಯತೆ ಇದೆ. ಫೆ. 1ರಂದು ಬಜೆಟ್ ಮಂಡಿಸುವ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತ ಪತ್ರ ಹೊರಡಿಸುವ ನಿರ್ಧಾರ ಘೋಷಿಸಿದ್ದರು. ಯುಪಿಎ ಸರ್ಕಾರ ನಿರ್ಗಮಿಸುವಾಗ ಆರ್ಥಿಕತೆ ದುಸ್ಥಿತಿಯಲ್ಲಿತ್ತು. ಎನ್​ಡಿಎ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆ ಚೇತರಿಸಿಕೊಂಡಿದೆ ಎಂದು ಬಿಜೆಪಿ ನಾಯಕ ಜಯಂತ್ ಸಿನ್ಹಾ ಹೇಳಿದ್ದಾರೆ.

White Paper: ಯುಪಿಐ ಮತ್ತು ಎನ್​ಡಿಎ ಅವಧಿಯಲ್ಲಿನ ಆರ್ಥಿಕ ನಿರ್ವಹಣೆ ಕುರಿತು ಕೇಂದ್ರದಿಂದ ಇಂದು ಶ್ವೇತಪತ್ರ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 08, 2024 | 10:58 AM

ನವದೆಹಲಿ, ಫೆ. 8: ತೆರಿಗೆ ಹಂಚಿಕೆ ಕುರಿತು ಎನ್​ಡಿಎ ಮತ್ತು ಯುಪಿಎ ಮೈತ್ರಿಕೂಟಗಳ ಮಧ್ಯೆ ಏಟು ಎದಿರೇಟು ನಡೆಯುತ್ತಿರುವಂತೆಯೇ ಸರ್ಕಾರ ಎರಡೂ ಮೈತ್ರಿಕೂಟಗಳ ಅಧಿಕಾರಾವಧಿಯಲ್ಲಿನ ಸಾಧನೆಗಳನ್ನು ಜನರ ಮುಂದಿಡಲು ಹೊರಟಿದೆ. 2004ರಿಂದ 2014ರವರೆಗೆ 10 ವರ್ಷ ಯುಪಿಎ ಆಡಳಿತ ಇತ್ತು. 2014ರಿಂದ 2024, ಇಲ್ಲಿವರೆಗೆ 10 ವರ್ಷ ಎನ್​ಡಿಎ ಆಡಳಿತ ಇದೆ. ಈ ಎರಡೂ ಆಡಳಿತದಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು, ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸಿ ಸರ್ಕಾರ ಶ್ವೇತಪತ್ರ ಹೊರಡಿಸುತ್ತಿದೆ. ವರದಿ ಪ್ರಕಾರ ಲೋಕಸಭೆಯಲ್ಲಿ ಇಂದೇ (ಫೆ. 8, ಗುರುವಾರ) ಈ ಶ್ವೇತಪತ್ರ ಮಂಡನೆ ಆಗುವ ಸಾಧ್ಯತೆ ಇದೆ.

ಎನ್​ಡಿಎ ಸರ್ಕಾರ ಸರಿಯಾಗಿ ಆಡಳಿತ ನಿರ್ವಹಣೆ ಮಾಡುತ್ತಿಲ್ಲ. ದೇಶದ ಸಾಲ ಹೆಚ್ಚಾಗಿದೇ ಹೊರತು ಅಭಿವೃದ್ಧಿ ಆಗಿಲ್ಲ ಎಂಬುದು ವಿಪಕ್ಷಗಳ ಪ್ರಮುಖ ಆಕ್ಷೇಪ. ಈ ಹಿನ್ನೆಲೆಯಲ್ಲಿ ಸರ್ಕಾರ ವೈಟ್ ಪೇಪರ್ ಮಂಡಿಸಲು ಅಣಿಯಾಗಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ವೇಳೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತ ಪತ್ರ ಮಂಡಿಸಲು ಸರ್ಕಾರ ನಿರ್ಧರಿಸಿರುವುದನ್ನು ತಿಳಿಸಿದ್ದರು.

ಇದನ್ನೂ ಓದಿ: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್​ಬಿಐ ಘೋಷಣೆ

ಯುಪಿಎ ನಿರ್ಗಮಿಸುವಾಗ ಜಿಡಿಪಿ ದರ ಶೇ. 5ರಷ್ಟಿತ್ತಾ?

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗು ಬಿಜೆಪಿ ಸಂಸದ ಜಯಂತ್ ಸಿನ್ಹಾ ನಿನ್ನೆ ಬುಧವಾರ ಮಾತನಾಡುತ್ತಾ, ಯುಪಿಎ ಸರ್ಕಾರ ಅಧಿಕಾರದಿಂದ ನಿರ್ಗಮಿಸುವಾಗ ಆರ್ಥಿಕ ದುಸ್ಥಿತಿ ಹೇಗಿತ್ತು ಎನ್ನುವುದನ್ನು ಬಣ್ಣಿಸಿ, ಶ್ವೇತಪತ್ರದಲ್ಲಿ ಇವೆಲ್ಲಾ ಸಂಗತಿಗಳನ್ನು ಬೆಳಕಿಗೆ ತರಲಾಗುವುದು ಎಂದಿದ್ದರು.

‘ಯುಪಿಎ ಸರ್ಕಾರ ಹೋಗುವಾಗ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 5ಕ್ಕೆ ಇಳಿದಿತ್ತು. ಹಣದುಬ್ಬರ ಶೇ. 10ಕ್ಕೆ ಏರಿತ್ತು. ಬ್ಯಾಂಕುಗಳ ಎನ್​ಪಿಎ ಅಥವಾ ಅನುತ್ಪಾದಕ ಆಸ್ತಿ ಶೇ. 10ಕ್ಕೆ ಹೆಚ್ಚಾಗಿತ್ತು. ಬ್ಯಾಲನ್ಸ್ ಆಫ್ ಪೇಮೆಂಟ್ ವಿಚಾರದಲ್ಲಿ ಬಿಕ್ಕಟ್ಟು ಎದುರಾಗಿತ್ತು.

ಇದನ್ನೂ ಓದಿ: ಚೀನಾದಲ್ಲಿ ತಯಾರಿಸಿದ್ದೆಂದು ಮೂಗು ಮುರಿಯುವ ಕೊರಿಯನ್ನರು; ಜನವರಿಯಲ್ಲಿ ಒಂದೇ ಟೆಸ್ಲಾ ಕಾರು ಮಾರಾಟ

‘ಅಂಥ ದುಸ್ಥಿತಿಯಲ್ಲಿದ್ದ ಆರ್ಥಿಕತೆಗೆ ಸಕಾರಾತ್ಮಕ ಪರಿವರ್ತನೆ ಹೇಗೆ ತರಲಾಯಿತು ಎಂಬುದನ್ನು ಜನರಿಗೆ ತಿಳಿಸಬೇಕಾಗುತ್ತದೆ. ಪ್ರತಿಯೊಂದು ವಲಯದಲ್ಲೂ ದೋಷಗಳಿದ್ದವು. ಇವತ್ತು ಆರ್ಥಿಕತೆ ಬೆಳಗುತ್ತಿದ್ದು, ವೇಗವಾಗಿ ಧಾವಿಸುತ್ತಿದೆ ಎಂದರೆ ಕಳೆದ 10 ವರ್ಷದಲ್ಲಿ ನಾವು ಮಾಡಿದ ಕೆಲಸ ಮತ್ತು ಜಾರಿಗೆ ತಂದ ನೀತಿಗಳೇ ಕಾರಣ,’ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:42 am, Thu, 8 February 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ