Share Market: ಆರ್​ಬಿಐ ಬಡ್ಡಿದರ ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆ ಅಲುಗಾಡುತ್ತಿರುವುದು ಯಾಕೆ? ಇಲ್ಲಿದೆ ಕಾರಣ

Repo Rate Effect on Stocks: ಆರ್​ಬಿಐ ಇವತ್ತು ರೆಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದ ಬೆನ್ನಲ್ಲೇ ಬಿಎಸ್​ಇ ಮತ್ತು ಎನ್​ಎಸ್​ಇ ಸೂಚ್ಯಂಕಗಳು ಕಳೆಗುಂದಿವೆ. ಎಸ್​ಬಿಐ, ಬಿಒಬಿ ಹೊರತುಪಡಿಸಿ ಬಹುತೇಕ ಬ್ಯಾಂಕಿಂಗ್ ಸ್ಟಾಕ್​ಗಳು ಇವತ್ತು ಬೆಲೆ ಇಳಿಕೆ ಕಂಡಿರುವುದು ಗಮನಾರ್ಹ. ಕಳೆದ ಒಂದು ವರ್ಷದಿಂದ ರೆಪೋ ದರ ಒಂದೇ ಮಟ್ಟದಲ್ಲಿ ಇರುವುದರಿಂದ ಬ್ಯಾಂಕುಗಳಿಗೆ ನಿವ್ವಳ ಬಡ್ಡಿ ಅಂತರ ಕಡಿಮೆ ಆಗುತ್ತದೆ.

Share Market: ಆರ್​ಬಿಐ ಬಡ್ಡಿದರ ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆ ಅಲುಗಾಡುತ್ತಿರುವುದು ಯಾಕೆ? ಇಲ್ಲಿದೆ ಕಾರಣ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 08, 2024 | 12:39 PM

ನವದೆಹಲಿ, ಫೆಬ್ರುವರಿ 8: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ (RBI Governor Shaktikanta Das Pressmeet) ಪ್ರಕಟಿಸುತ್ತಿರುವಂತೆಯೇ ಷೇರು ಮಾರುಕಟ್ಟೆಯಲ್ಲಿ ತುಸು ಅಲುಗಾಟ ಶುರುವಾಗಿತ್ತು. ರೆಪೋ ದರ (Repo Rate) ಮೊದಲಾದ ಪ್ರಮುಖ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವುದು ವಿವಿಧ ಷೇರುಗಳಿಗೆ ಹಿನ್ನಡೆ ತಂದಿದಂತೆ ತೋರಿದೆ. ಹಲವು ಪ್ರಮುಖ ಸೂಚ್ಯಂಕಗಳು ಇಳಿಕೆ ಕಂಡಿವೆ. ಅದರಲ್ಲೂ ಬ್ಯಾಂಕಿಂಗ್ ಸೂಚ್ಯಂಕವಾದ ನಿಫ್ಟಿ ಬ್ಯಾಂಕ್ ಶೇ. 0.71ರಷ್ಟು ಕುಸಿತ ಕಂಡಿದೆ. ಎಸ್​ಬಿಐ, ಬ್ಯಾಂಕ್ ಆಫ್ ಬರೋಡಾ ಬಿಟ್ಟರೆ ಉಳಿದ ಬಹುತೇಕ ಪ್ರಮುಖ ಬ್ಯಾಂಕುಗಳ ಷೇರುಬೆಲೆ ಕಡಿಮೆ ಆಗಿದೆ.

ಬ್ಯಾಂಕ್ ಸ್ಟಾಕ್​ಗಳು ಒಳಗೊಂಡಿರುವ ಸೂಚ್ಯಂಕಗಳೆಲ್ಲವೂ ಇವತ್ತು ಕಡಿಮೆ ಆಗಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಬಿಎಸ್​ಇ ಬ್ಯಾಂಕೆಕ್ಸ್ ಶೇ. 0.81ರಷ್ಟು ಕಡಿಮೆ ಆಗಿದೆ. ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಇಂಡೆಕ್ಸ್ ಹೊರತುಪಡಿಸಿ ಉಳಿದೆಲ್ಲಾ ಬಿಎಸ್​ಇ ಸೂಚ್ಯಂಕಗಳು ಕಳೆಗುಂದಿವೆ. ಸೆನ್ಸೆಕ್ಸ್ ಕೂಡ ಇಳಿಮುಖವಾಗಿದೆ.

ಇದನ್ನೂ ಓದಿ: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್​ಬಿಐ ಘೋಷಣೆ

ಬ್ಯಾಂಕ್ ಸ್ಟಾಕ್​ಗಳು ಯಾಕೆ ಬೆಲೆ ಇಳಿಕೆ ಕಂಡಿವೆ?

ಎನ್​ಎಸ್​ಇ ಮತ್ತು ಬಿಎಸ್​ಇಯ ಹಲವು ಸೂಚ್ಯಂಕಗಳು ಕಡಿಮೆಯಾಗಲು ಹೆಚ್ಚಾಗಿ ಬ್ಯಾಂಕ್ ಸ್ಟಾಕ್​ಗಳ ಇಳಿಮುಖ ಕಾರಣವೆಂಬುದು ಮೇಲ್ನೋಟಕ್ಕೆ ತೋರುತ್ತಿದೆ. ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧರಿಸಿದ್ದು ಈ ಬೆಳವಣಿಗೆಗೆ ಕಾರಣವಿದ್ದಿರಬಹುದು. ಕಳೆದ ಒಂದು ವರ್ಷದಿಂದಲೂ ಬಡ್ಡಿದರ ಶೇ. 6.5ರಲ್ಲೇ ಇದೆ. ಬ್ಯಾಂಕುಗಳಿಗೆ ಬಡ್ಡಿದರ ಕಡಿಮೆ ಆದಷ್ಟೂ ಬಡ್ಡಿಲಾಭದ ಅಂತರ (ನೆಟ್ ಇಂಟರೆಸ್ಟ್ ಇನ್ಕಮ್) ಕಡಿಮೆ ಆಗುತ್ತಾ ಹೋಗುತ್ತದೆ. ಇದು ಒಂದು ಕಾರಣ ಇರಬಹುದು.

ಇದನ್ನೂ ಓದಿ: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

ರೆಪೋ ದರ ಹಾಗೇ ಮುಂದುವರಿಸಿರುವುದರಿಂದ ವಾಹನ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಆಗಸ್ಟ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆರ್​ಬಿಐ ರೆಪೋ ದರ ಕಡಿತಗೊಳಿಸುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕುಗಳು ಹೆಚ್ಚು ಸಾಲ ವಿತರಣೆ ಮಾಡಲು ಸಾಧ್ಯವಾಗಬಹುದು. ಲಾಭದ ಅಂತರ ಕಡಿಮೆ ಆದರೂ ಬ್ಯಾಂಕುಗಳಿಗೆ ಆದಾಯ ಸೃಷ್ಟಿ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಈಗ ರೆಪೋ ದರದಿಂದ ಬ್ಯಾಂಕಿಂಗ್ ಷೇರುಗಳಿಗೆ ಹಿನ್ನಡೆಯಾಗಿರುವುದು ತಾತ್ಕಾಲಿಕ ಮಾತ್ರ ಎಂಬುದು ತಜ್ಞರ ಅನಿಸಿಕೆ. ಮತ್ತೆ ಈ ಸ್ಟಾಕುಗಳು ಏರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Thu, 8 February 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ