Richest Person in the World: ಮತ್ತೆ 100 ಬಿಲಿಯನ್ ಡಾಲರ್ ಗುಂಪಿಗೆ ಬಂದ ಗೌತಮ್ ಅದಾನಿ; ವಿಶ್ವ ಶ್ರೀಮಂತರ ಸ್ಥಾನಪಲ್ಲಟವಾಗಿದೆಯಾ?

Gautam Adani Returns To 100 Billion Dollar Club: ಗೌತಮ್ ಅದಾನಿ ಎರಡು ವರ್ಷದ ಬಳಿಕ 100 ಬಿಲಿಯನ್ ಡಾಲರ್ ಶ್ರೀಮಂತರ ಗುಂಪಿಗೆ ಮರಳಿದ್ದಾರೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಡುವಿನ ಶ್ರೀಮಂತಿಕೆ ಅಂತರ ಬಹಳ ಕಿರಿದಾಗಿದೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಇಲಾನ್ ಮಸ್ಕ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಜೆಫ್ ಬೇಜೋಸ್ ಎರಡನೇ ಸ್ಥಾನ ಪಡೆದಿದ್ದಾರೆ.

Richest Person in the World: ಮತ್ತೆ 100 ಬಿಲಿಯನ್ ಡಾಲರ್ ಗುಂಪಿಗೆ ಬಂದ ಗೌತಮ್ ಅದಾನಿ; ವಿಶ್ವ ಶ್ರೀಮಂತರ ಸ್ಥಾನಪಲ್ಲಟವಾಗಿದೆಯಾ?
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2024 | 3:16 PM

ನವದೆಹಲಿ, ಫೆಬ್ರುವರಿ 8: ಒಂದು ಕಾಲದಲ್ಲಿ ವಿಶ್ವದ ಎರಡನೇ ಅತಿ ಶ್ರೀಮಂತ ಎನಿಸಲು ಕ್ಷಣಗಣನೆಯಲ್ಲಿದ್ದ ಗೌತಮ್ ಅದಾನಿ (Gautam Adani) 2022ರ ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ವರದಿ ಪರಿಣಾಮವಾಗಿ 30ಕ್ಕೂ ಹೆಚ್ಚು ಸ್ಥಾನಗಳಾಚೆ ತಳ್ಳಲ್ಪಟ್ಟಿದ್ದರು. ಅಂಬಾನಿಯನ್ನೂ ಮೀರಿಸಿ ಭಾರತದ ನಂಬರ್ ಒನ್ ಶ್ರೀಮಂತನೆಂಬ ಪಟ್ಟವನ್ನೂ ಕಳೆದುಕೊಂಡಿದ್ದರು. ಇತ್ತೀಚಿನ ಕೆಲ ದಿನಗಳಿಂದ ಅದಾನಿ ಮಿಂಚತೊಡಗಿದ್ದಾರೆ. ಅದಾನಿ ಗ್ರೂಪ್ ಕಂಪನಿಗಳ ಸ್ಟಾಕ್​ಗಳು ಮೇಲೇರತೊಡಗಿವೆ. ಪರಿಣಾಮವಾಗಿ ಗೌತಮ್ ಅದಾನಿ ಸಂಪತ್ತು (Wealth) ಅದ್ವಿತೀಯವಾಗಿ ಏರತೊಡಗಿದೆ. ಬ್ಲೂಮ್​ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪಟ್ಟಿಯಲ್ಲಿ ಅವರು 100 ಬಿಲಿಯನ್ ಡಾಲರ್ ಗುಂಪಿಗೆ ಸೇರಿದ್ದಾರೆ. ವಿಶ್ವ ಶ್ರೀಮಂತರಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಅಂಬಾನಿಗಿಂತ ಒಂದು ಸ್ಥಾನವಷ್ಟೇ ಹಿಂದಿದ್ದಾರೆ.

ಬ್ಲೂಮ್​ಬರ್ಗ್ ಇಂಡೆಕ್ಸ್ ಪ್ರಕಾರ ಗೌತಮ್ ಅದಾನಿ ಸಂಪತ್ತು 101 ಬಿಲಿಯನ್ ಡಾಲರ್ ಇದೆ. ಅಂದರೆ ಸುಮಾರು 84,000 ಕೋಟಿ ರೂ ಆಸ್ತಿ ಒಡೆಯರಾಗಿದ್ದಾರೆ. ಮುಕೇಶ್ ಅಂಬಾನಿ ಸಂಪತ್ತು 108 ಬಿಲಿಯನ್ ಡಾಲರ್ ಇದೆ. ಹಿಂಡನ್ಬರ್ಗ್ ವರದಿ ಬರುವ ಮುನ್ನ ಅದಾನಿ ಹೊಂದಿದ್ದ ಸಂಪತ್ತಿಗೂ ಈಗ ಇರುವ ಸಂಪತ್ತಿಗೂ 60-70 ಬಿಲಿಯನ್ ಡಾಲರ್​ನಷ್ಟು ವ್ಯತ್ಯಾಸ ಇದೆ. ಅವರ ಕಂಪನಿಗಳ ಷೇರುಬೆಲೆ ಎರಡು ವರ್ಷದ ಹಿಂದಿನ ಉಚ್ಛ ಮಟ್ಟಕ್ಕೆ ಮರಳಿದಲ್ಲಿ ಗೌತಮ್ ಅದಾನಿ ಟಾಪ್-5 ಪಟ್ಟಿಗೆ ಲಗ್ಗೆ ಇಡುವುದರಲ್ಲಿ ಸಂದೇಹ ಇಲ್ಲ.

ಈ ಶ್ರೀಮಂತರ ಪಟ್ಟಿಯಲ್ಲಿ ಇಲಾನ್ ಮಸ್ಕ್ ಮತ್ತೆ ನಂಬರ್ ಒನ್ ಪಟ್ಟ ಪಡೆದಿದ್ದಾರೆ. ಬರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಿಕ್ಕಿ ಜೆಫ್ ಬೇಜೋಸ್ ಎರಡನೇ ಸ್ಥಾನ ಪಡೆದಿದ್ದಾರೆ. ಟಾಪ್-100 ಪಟ್ಟಿಯಲ್ಲಿ ಭಾರತದ ಒಂಬತ್ತು ಮಂದಿ ಇರುವುದು ವಿಶೇಷ.

ಇದನ್ನೂ ಓದಿ: ವಿರಾಟ್ ಕೊಹ್ಲಿ-ಪ್ಯೂಮಾ 8 ವರ್ಷದ ಒಡನಾಟ ಅಂತ್ಯ; ಎಜಿಲಿಟಾಸ್​ಗೆ ಇನ್ನು ವಿರಾಟ್ ಬಲ

ಬ್ಲೂಮ್​ಬರ್ಗ್ ಟಾಪ್ 10 ಶ್ರೀಮಂತರು

  1. ಇಲಾನ್ ಮಸ್ಕ್: 205 ಬಿಲಿಯನ್ ಡಾಲರ್
  2. ಜೆಫ್ ಬೇಜೋಸ್: 196 ಬಿಲಿಯನ್ ಡಾಲರ್
  3. ಬರ್ನಾರ್ಡ್ ಆರ್ನಾಲ್ಟ್: 186 ಬಿಲಿಯನ್ ಡಾಲರ್
  4. ಮಾರ್ಜ್ ಜುಕರ್ಬರ್ಗ್: 169 ಬಿಲಿಯನ್ ಡಾಲರ್
  5. ಬಿಲ್ ಗೇಟ್ಸ್: 146 ಬಿಲಿಯನ್ ಡಾಲರ್
  6. ಸ್ಟೀವ್ ಬಾಲ್ಮರ್: 143 ಬಿಲಿಯನ್ ಡಾಲರ್
  7. ವಾರನ್ ಬಫೆಟ್: 132 ಬಿಲಿಯನ್ ಡಾಲರ್
  8. ಲ್ಯಾರಿ ಪೇಜ್: 131 ಬಿಲಿಯನ್ ಡಾಲರ್
  9. ಲ್ಯಾರಿ ಎಲಿಸನ್: 131 ಬಿಲಿಯನ್ ಡಾಲರ್
  10. ಸೆರ್ಗೀ ಬ್ರಿನ್: 125 ಬಿಲಿಯನ್ ಡಾಲರ್

ಬ್ಲೂಮ್​ಬರ್ಗ್ ಟಾಪ್ 100 ಪಟ್ಟಿಯಲ್ಲಿರುವ ಭಾರತೀಯರು

  1. ಮುಕೇಶ್ ಅಂಬಾನಿ, 11ನೇ ಸ್ಥಾನ (108 ಬಿಲಿಯನ್ ಡಾಲರ್)
  2. ಗೌತಮ್ ಅದಾನಿ, 12ನೇ ಸ್ಥಾನ (101 ಬಿಲಿಯನ್ ಡಾಲರ್)
  3. ಶಾಪೂರ್ ಮಿಸ್ಟ್ರಿ, 35ನೇ ಸ್ಥಾನ (38 ಬಿಲಿಯನ್ ಡಾಲರ್)
  4. ಶಿವ್ ನಾದರ್, 36ನೇ ಸ್ಥಾನ (37 ಬಿಲಿಯನ್ ಡಾಲರ್)
  5. ಸಾವಿತ್ರಿ ಜಿಂದಾಲ್, 53ನೇ ಸ್ಥಾನ (28 ಬಿಲಿಯನ್ ಡಾಲರ್)
  6. ಅಜೀಮ್ ಪ್ರೇಮ್​ಜಿ, 59ನೇ ಸ್ಥಾನ (27 ಬಿಲಿಯನ್ ಡಾಲರ್
  7. ದಿಲೀಪ್ ಶಾಂಘವಿ, 68ನೇ ಸ್ಥಾನ (24ನೇ ಸ್ಥಾನ)
  8. ಲಕ್ಷ್ಮೀ ಮಿಟ್ಟಲ್, 92ನೇ ಸ್ಥಾನ (20 ಬಿಲಿಯನ್ ಡಾಲರ್)
  9. ಸೈರಸ್ ಪೂನಾವಾಲ, 93ನೇ ಸ್ಥಾನ (20 ಬಿಲಿಯನ್ ಡಾಲರ್)

ಇದನ್ನೂ ಓದಿ: ಸತ್ಯ ನಾದೆಲ್ಲಾ ಸಿಇಒ ಆದ 10 ವರ್ಷದಲ್ಲಿ 11 ಪಟ್ಟು ಬೆಳೆದಿರುವ ಮೈಕ್ರೋಸಾಫ್ಟ್ ಷೇರು; ಭಾರತಕ್ಕೆ ಎಐ ನೆರವು ನೀಡಲು ಸಿಇಒ ಅಪೇಕ್ಷೆ

ಫೋರ್ಬ್ಸ್ ಪಟ್ಟಿಯಲ್ಲಿ ವ್ಯತ್ಯಾಸ

ಇನ್ನು, ಫೋರ್ಬ್ಸ್​ನ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಆರ್ನಾಲ್ಟ್ ಮೊದಲ ಸ್ಥಾನದಲ್ಲಿದ್ದಾರೆ. ಇಲಾನ್ ಮಸ್ಕ್ ಮತ್ತು ಜೆಫ್ ಬೇಜೋಸ್ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್​ಬರ್ಗ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಫೋರ್ಬ್ಸ್ ಪಟ್ಟಿಯಲ್ಲೂ ಅದೇ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಆದರೆ, ಹಿರಿಯಣ್ಣ ವಿನೋದ್ ಅದಾನಿ ಅವರ ಷೇರುಸಂಪತ್ತು ಸೇರಿಸಿದರೆ ಅದಾನಿ ಕುಟುಂಬದ ಷೇರುಸಂಪತ್ತು ಮುಕೇಸ್ ಅಂಬಾನಿಗೆ ಸಮೀಪ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ