Virat Kohli: ವಿರಾಟ್ ಕೊಹ್ಲಿ-ಪ್ಯೂಮಾ 8 ವರ್ಷದ ಒಡನಾಟ ಅಂತ್ಯ; ಎಜಿಲಿಟಾಸ್​ಗೆ ಇನ್ನು ವಿರಾಟ್ ಬಲ

Puma vs Agilitas Sports: ವಿರಾಟ್ ಕೊಹ್ಲಿ ಮತ್ತು ಪ್ಯೂಮಾ ನಡುವಿನ ಎಂಟು ವರ್ಷದ ಒಪ್ಪಂದ ಅಂತ್ಯಗೊಂಡಿದೆ. ವಿರಾಟ್ ಕೊಹ್ಲಿ ಇದೀಗ ಪ್ಯೂಮಾ ಬದಲು ಎಜಿಲಿಟಾಸ್ ಸ್ಪೋರ್ಟ್ಸ್​ಗೆ ಬ್ರ್ಯಾಂಡ್ ಅಂಬಾಸಡರ್ ಆಗಲಿದ್ದಾರೆ. ಎಜಿಲಿಟಾಸ್ ಸ್ಪೋರ್ಟ್ಸ್​ನ ಸಂಸ್ಥಾಪರಾದ ಅಭಿಷೇಕ್ ಗಂಗೂಲಿ ಅವರು ಪ್ಯೂಮಾದ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.

Virat Kohli: ವಿರಾಟ್ ಕೊಹ್ಲಿ-ಪ್ಯೂಮಾ 8 ವರ್ಷದ ಒಡನಾಟ ಅಂತ್ಯ; ಎಜಿಲಿಟಾಸ್​ಗೆ ಇನ್ನು ವಿರಾಟ್ ಬಲ
ವಿರಾಟ್ ಕೊಹ್ಲಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2024 | 6:43 PM

ನವದೆಹಲಿ, ಫೆಬ್ರುವರಿ 7: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಅಜಿಲಿಟಾಸ್ ಸ್ಪೋರ್ಟ್ಸ್ (Agilitas Sports) ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಡರ್ ಆಗಲಿದ್ದಾರೆ ಎನ್ನುವ ಸುದ್ದಿ ಸಿಎನ್​ಬಿಸಿ ಟಿವಿ18ನಲ್ಲಿ ವರದಿಯಾಗಿದೆ. ಹಾಗೆಯೇ, ಪ್ಯೂಮಾ ಜೊತೆ ಎಂಟು ವರ್ಷದಿಂದ ಇದ್ದ ಒಪ್ಪಂದದಿಂದ ವಿರಾಟ್ ಕೊಹ್ಲಿ ಹಿಂದಕ್ಕೆ ಸರಿದಿದ್ದಾರೆ. ಜಗದ್ವಿಖ್ಯಾತ ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಆದ ಪ್ಯೂಮಾ ಜೊತೆ ವಿರಾಟ್​ ಕೊಹ್ಲಿ ನಂಟು 2017ರಲ್ಲಿ ಆರಂಭವಾಗಿತ್ತು. ಎಂಟು ವರ್ಷ ಕಾಲ ಅವರು ಬ್ರ್ಯಾಂಡ್ ಅಂಬಾಸಡರ್ ಆಗಲು 110 ಕೋಟಿ ರೂ ಮೊತ್ತದ ಡೀಲ್ ಆಗಿತ್ತು. ಈಗ ಒಪ್ಪಂದದ ಅವಧಿ ಬಹುತೇಕ ಮುಗಿದಿದೆ.

ಕುತೂಹಲವೆಂದರೆ ವಿರಾಟ್ ಕೊಹ್ಲಿ ಬ್ರ್ಯಾಂಡ್ ಅಂಬಾಸಡರ್ ಆಗಲಿರುವ ಎಜಿಲಿಟಾಸ್ ಸ್ಪೋರ್ಟ್ಸ್ ಸಂಸ್ಥೆಯ ಸಂಸ್ಥಾಪಕರು ಪ್ಯೂಮಾದ ಮಾಜಿ ಅಧಿಕಾರಿಯೂ ಹೌದು. ವಿರಾಟ್ ಕೊಹ್ಲಿ ಪ್ಯೂಮಾ ಜೊತೆ ಒಪ್ಪಂದ ಮಾಡಿಕೊಂಡಾಗ ಪ್ಯೂಮಾ ಇಂಡಿಯಾದಲ್ಲಿ ಅಭಿಷೇಕ್ ಗಂಗೂಲಿ ಎಂಡಿಯಾಗಿದ್ದರು. ಅವರೇ ಎಜಿಲಿಟಾಸ್ ಸ್ಪೋರ್ಟ್ಸ್ ಕಂಪನಿಯನ್ನು ಸ್ಥಾಪಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ 2 ಶತಕ ಬಾರಿಸುವಷ್ಟರಲ್ಲಿ, 8 ಸೆಂಚುರಿ ಸಿಡಿಸಿದ ಕೇನ್

2023ರ ಮೇ ತಿಂಗಳಲ್ಲಿ ಅಭಿಷೇಕ್ ಗಂಗೂಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ. ಒಂದು ವರ್ಷದ ಒಳಗಾಗಿ ಸಾಕಷ್ಟು ಪ್ರಗತಿ ಕಂಡಿದೆ ಇವರ ಕಂಪನಿ. ಇತ್ತೀಚೆಗಷ್ಟೇ ನೆಕ್ಸಸ್ ವೆಂಚರ್ ಎಂಬ ಕಂಪನಿಯಿಂದ 100 ಕೋಟಿ ರೂ ಫಂಡಿಂಗ್ ಕೂಡ ಪಡೆದಿದೆ.

ವಿರಾಟ್ ಕೊಹ್ಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್​ಗೆ ಬ್ರ್ಯಾಂಡ್ ಅಂಬಾಸಡರ್ ಆಗಿರುವುದು ಮಾತ್ರವಲ್ಲ, ಕಂಪನಿಯಲ್ಲಿ ಪಾಲುದಾರರೂ ಹೌದು. ಇದೇ ಕಾರಣಕ್ಕೆ ಅವರು ಪ್ಯೂಮಾ ಜೊತೆಗಿನ ಡೀಲ್ ಅನ್ನು ಕೈಬಿಟ್ಟು ಎಜಿಲಿಟಾಸ್​ಗೆ ಬಂದಿರಬಹುದು.

ಇದನ್ನೂ ಓದಿ: ಸತ್ಯ ನಾದೆಲ್ಲಾ ಸಿಇಒ ಆದ 10 ವರ್ಷದಲ್ಲಿ 11 ಪಟ್ಟು ಬೆಳೆದಿರುವ ಮೈಕ್ರೋಸಾಫ್ಟ್ ಷೇರು; ಭಾರತಕ್ಕೆ ಎಐ ನೆರವು ನೀಡಲು ಸಿಇಒ ಅಪೇಕ್ಷೆ

ಎಜಿಲಿಟಾಸ್ ಸ್ಪೋರ್ಟ್ಸ್ ಕಳೆದ ಒಂದು ವರ್ಷದಿಂದ ಕೆಲ ಕಂಪನಿಗಳನ್ನು ಖರೀದಿ ಮಾಡಿದೆ. ಅಡಿಡಾಸ್, ರೀಬೋಕ್ ಮೊದಲಾದ ಬ್ರ್ಯಾಂಡ್​​ಗಳಿಗೆ ಶೂಗಳನ್ನು ತಯಾರಿಸಿಕೊಡುವ ಮೋಚಿಕೋ ಶೂಸ್ ಪ್ರೈ ಲಿ ಎಂಬ ಕಂಪನಿಯನ್ನು ಸೆಪ್ಟೆಂಬರ್​ನಲ್ಲಿ ಖರೀದಿ ಮಾಡಲಾಗಿತ್ತು. ಈಗ ಇನ್ನಷ್ಟು ಫಂಡಿಂಗ್ ಸಿಕ್ಕಿರುವುದರಿಂದ ಇನ್ನಷ್ಟು ಕಂಪನಿಗಳನ್ನು ಖರೀದಿಸಬಹುದು. ಹಾಗೆಯೇ, ಶೂ, ಶರ್ಟ್ ಇತ್ಯಾದಿ ಉತ್ಪನ್ನಗಳ ತಯಾರಿಕೆಯ ಸಾಮರ್ಥ್ಯ ಹೆಚ್ಚಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ