AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ಪೇಟಿಎಂ ವಿರುದ್ಧ ಕ್ರಮ; ಮುಂದಿನ ವಾರ ಎಲ್ಲದಕ್ಕೂ ಉತ್ತರ ಕೊಡಲಾಗುವುದು: ಆರ್​ಬಿಐ ಗವರ್ನರ್

Paytm Issue: ಪೇಟಿಎಂ ಬಗ್ಗೆ ಇರುವ ಎಲ್ಲಾ ಸಂದೇಹ ಮತ್ತು ಗೊಂದಲಗಳಿಗೆ ಮುಂದಿನ ವಾರ ಉತ್ತರ ಕೊಡಲಾಗುವುದು ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ. ಪೇಟಿಎಂ ಮೇಲೆ ಏಕಾಏಕಿ ಕ್ರಮ ಕೈಗೊಂಡಿಲ್ಲ. ತಿಂಗಳ ಹಿಂದಿನಿಂದಲೇ ಅದರ ಜೊತೆ ಮಾತುಕತೆ ನಡೆಸುತ್ತಲೇ ಬರಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ. ನಿರ್ಬಂಧ ಇರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆಯೇ ಹೊರತು ಪೇಟಿಎಂ ಆ್ಯಪ್​ಗಲ್ಲ ಎಂದು ಡೆಪ್ಯುಟಿ ಗವರ್ನರ್ ಹೇಳಿದ್ದಾರೆ.

RBI: ಪೇಟಿಎಂ ವಿರುದ್ಧ ಕ್ರಮ; ಮುಂದಿನ ವಾರ ಎಲ್ಲದಕ್ಕೂ ಉತ್ತರ ಕೊಡಲಾಗುವುದು: ಆರ್​ಬಿಐ ಗವರ್ನರ್
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2024 | 2:06 PM

Share

ನವದೆಹಲಿ, ಫೆಬ್ರುವರಿ 8: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಪತ್ರಿಕಾಗೋಷ್ಠಿ ಬಳಿಕ ಮಾಧ್ಯಮಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಅದರಲ್ಲಿ ಪೇಟಿಎಂ ವಿಚಾರ ಪ್ರಸ್ತಾಪವಾಯಿತು. ಆರ್​ಬಿಐ ತೆಗೆದುಕೊಂಡ ಕ್ರಮ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಫಿನ್​ಟೆಕ್ ಕಂಪನಿಯನ್ನು ಆರ್​ಬಿಐ ಟಾರ್ಗೆಟ್ ಮಾಡಿದೆಯಾ ಎನ್ನುವಂತನಿಸಿದೆ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದರು. ಅದಕ್ಕೆ ಸ್ಪಂದಿಸಿದ ಆರ್​​ಬಿಐ ಗವರ್ನರ್, ಪರಿಸ್ಥಿತಿಯ ಗಂಭೀರತೆಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆರ್​ಬಿಐನ ಯಾವುದೇ ಕ್ರಮದ ಹಿಂದೆ ಗ್ರಾಹಕರ ಹಿತ ರಕ್ಷಣೆ ಮತ್ತು ವ್ಯವಸ್ಥೆ ಬಲಪಡಿಸುವ ಉದ್ದೇಶ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ಮುಂದಿನ ವಾರ ಪೇಟಿಎಂ ವಿಚಾರವಾಗಿ ಎಲ್ಲಾ ಸಂದೇಹಗಳಿಗೆ ಉತ್ತರ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

‘ಸತತವಾಗಿ ನಿಯಮಗಳ ಉಲ್ಲಂಘನೆಗಳನ್ನು ಮಾಡಿದ್ದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಹಲವು ತಿಂಗಳು, ಕೆಲವೊಮ್ಮೆ ವರ್ಷಗಳ ಕಾಲ ಹಿಂದಿನಿಂದಲೂ ದ್ವಿಪಕ್ಷೀಯವಾಗಿ ಮಾತನಾಡಿ, ದೋಷಗಳನ್ನು ಎತ್ತಿ ತೋರಿಸಿದ್ದೂ ಅಲ್ಲದೇ ಸರಿಪಡಿಸಿಕೊಳ್ಳಲು ಕಾಲಾವಕಾಶವನ್ನೂ ಪೇಟಿಎಂಗೆ ಕೊಟ್ಟಿದ್ದೇವೆ. ಒಂದು ನಿಯಂತ್ರಕ ಸಂಸ್ಥೆಯಾಗಿ ನಮಗೆ ಗ್ರಾಹಕರ ರಕ್ಷಣೆಯ ಜವಾಬ್ದಾರಿ ಮುಖ್ಯವಾಗಿರುತ್ತದೆ,’ ಎಂದು ಆರ್​ಬಿಐನ ಡೆಪ್ಯುಟಿ ಗವರ್ನರ್ ಜೆ ಸ್ವಾಮಿನಾಥನ್ ಮಾಧ್ಯಮ ಸಂವಾದದ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕ್ರಿಯಿಸಿ, ಸಮಸ್ಯೆ ಇರುವುದು ಒಂದು ನಿರ್ದಿಷ್ಟ ಸಂಸ್ಥೆಯ ಬಗ್ಗೆ ಹೊರತು ಇಡೀ ವ್ಯವಸ್ಥೆಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಪೇಟಿಎಂ ವಿಚಾರದ ಬಗ್ಗೆ ನೇರವಾಗಿ ಒಂದು ವಿಚಾರ ಮುಂದಿಡುತ್ತೇನೆ. ಇಡೀ ವ್ಯವಸ್ಥೆ ಬಗ್ಗೆ ನಮಗೆ ಯಾವುದೇ ಕಳವಳ ಇಲ್ಲ. ಒಂದು ನಿರ್ದಿಷ್ಟ ಸಂಸ್ಥೆಯ ಬಗ್ಗೆ ಮಾತ್ರವೇ ಸಮಸ್ಯೆ ಇರುವುದು,’ ಎಂಬುದು ಅವರ ವಾದ.

ಆರ್​ಬಿಐನ ನಿಯಮಗಳು ಅಸಮರ್ಪಕವಾಗಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎನ್ನುವಂತಹ ಅಭಿಪ್ರಾಯಗಳನ್ನು ಈ ವೇಳೆ ಆರ್​ಬಿಐ ಗವರ್ನರ್ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ರೆಪೋ ದರಲ್ಲಿ ಬದಲಾವಣೆ ಇಲ್ಲ: ಬಡ್ಡಿದರ ಶೇ. 6.5ರಲ್ಲಿ ಮುಂದುವರಿಕೆ: ಆರ್​ಬಿಐ ಘೋಷಣೆ

‘ನಿಯಮಗಳು ಜಾರಿಯಲ್ಲಿದ್ದವು. ಇದು ಆ ಸಮಸ್ಯೆ ಅಲ್ಲ. ವಿವಿಧ ನಿಯಮಗಳ ಉಲ್ಲಂಘನೆ ಆಗಿರುವುದು ಸಮಸ್ಯೆ. ಈ ವಿವರವನ್ನು ನಿರ್ದಿಷ್ಟವಾಗಿ ಹೇಳಲು ಬಯಸುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

ಆರ್​ಬಿಐ ಕ್ರಮ ಕೈಗೊಂಡಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧವೇ ಹೊರತು ಪೇಟಿಎಂ ಆ್ಯಪ್ ಮೇಲಲ್ಲ. ಪೇಟಿಎಂ ಆ್ಯಪ್ ಮೇಲೆ ಇದು ಯಾವ ಪರಿಣಾಮ ಬೀರದು ಎಂದು ಈ ವೇಳೆ ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ