RBI: ನಿರ್ದೇಶಕರಿಗೆ ಸಾಲ ಕೊಟ್ಟು ನಿಯಮ ಉಲ್ಲಂಘನೆ; ಟಿಡಿಸಿಸಿ ಬ್ಯಾಂಕ್​ಗೆ ದಂಡ ವಿಧಿಸಿದ ಆರ್​ಬಿಐ

|

Updated on: Dec 24, 2023 | 10:47 AM

TDCC Bank Fined by RBI: ತನ್ನ ಒಬ್ಬ ನಿರ್ದೇಶಕರಿಗೆ ಸಾಲ ಕೊಟ್ಟ ಕಾರಣಕ್ಕೆ ಥಾಣೆ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್​ಗೆ ಆರ್​ಬಿಐ 2 ಲಕ್ಷ ರೂ ದಂಡ ವಿಧಿಸಿದೆ. ಟಿಡಿಸಿಸಿ ಬ್ಯಾಂಕ್ 1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್​ನ ಸೆಕ್ಷನ್ 20 ಮತ್ತು 56ರ ನಿಯಮಗಳ ಉಲ್ಲಂಘನೆ ಮಾಡಿದೆ. ಟಿಡಿಸಿಸಿ ಬ್ಯಾಂಕ್​ನ ಹಣಕಾಸು ವಿವರವನ್ನು ನಬಾರ್ಡ್ ಪರಿಶೀಲನೆ ನಡೆಸಿದ ವೇಳೆ ಈ ಅಕ್ರಮ ಪತ್ತೆಯಾಗಿತ್ತು ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

RBI: ನಿರ್ದೇಶಕರಿಗೆ ಸಾಲ ಕೊಟ್ಟು ನಿಯಮ ಉಲ್ಲಂಘನೆ; ಟಿಡಿಸಿಸಿ ಬ್ಯಾಂಕ್​ಗೆ ದಂಡ ವಿಧಿಸಿದ ಆರ್​ಬಿಐ
ಆರ್​​ಬಿಐ
Follow us on

ನವದೆಹಲಿ, ಡಿಸೆಂಬರ್ 24: ಮಹಾರಾಷ್ಟ್ರ ಮೂಲದ ಟಿಡಿಸಿಸಿ ಸಹಕಾರಿ ಬ್ಯಾಂಕ್ (TDCC Bank) ಮೇಲೆ ಆರ್​​ಬಿಐ ಲಕ್ಷ ರೂ ದಂಡ ವಿಧಿಸಿದೆ. ಬ್ಯಾಂಕ್​ನ ಒಬ್ಬ ನಿರ್ದೇಶಕರಿಗೆ ಸಾಲ ಕೊಟ್ಟಿದ್ದಕ್ಕೆ ಥಾಣೆ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಈ ಕ್ರಮ ಜರುಗಿಸಲಾಗಿದೆ. ಶುಕ್ರವಾರ (ಡಿ. 22) ಆರ್​ಬಿಐ ಈ ವಿಚಾರವನ್ನು ಬಹಿರಂಗಪಡಿಸಿದೆ. ಬ್ಯಾಂಕ್​ನ ಯಾವುದೇ ನಿರ್ದೇಶಕರಿಗೂ ಸಾಲ ಕೊಡುವಂತಿಲ್ಲ ಎಂಬುದು ಆರ್​ಬಿಐ ನಿಗದಿ ಮಾಡಿರುವ ನಿಯಮ.

ಟಿಡಿಸಿಸಿ ಬ್ಯಾಂಕ್ 1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆಯ ಸೆಕ್ಷನ್ 20 ಮತ್ತು 56ರ ನಿಯಮಗಳ ಉಲ್ಲಂಘನೆ ಮಾಡಿದೆ. ಅದಕ್ಕೆ 2 ಲಕ್ಷ ರೂ ದಂಡ ಹಾಕಿರುವುದಾಗಿ ಆರ್​ಬಿಐನ ಆದೇಶದಲ್ಲಿ ತಿಳಿಸಲಾಗಿದೆ. ನವೆಂಬರ್ 28ರಂದು ಆರ್​ಬಿಐನ ಈ ಆದೇಶ ಹೊರಟಿದೆ. ಮೊನ್ನೆ ಆರ್​ಬಿಐನ ಮುಖ್ಯ ಜನರಲ್ ಮ್ಯಾನೇಜರ್ ಯೋಗೇಶ್ ದಯಾಳ್ ಈ ಸಂಗತಿಯನ್ನು ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Forex Rise: ಭಾರತದ ಫಾರೆಕ್ಸ್ ರಿಸರ್ವ್ಸ್ 616 ಬಿಲಿಯನ್ ಡಾಲರ್​ಗೆ ಏರಿಕೆ; ಕಳೆದ 20 ತಿಂಗಳ ಗರಿಷ್ಠ ಮಟ್ಟ

ಏನು ಆಗಿತ್ತು ಈ ಘಟನೆ?

2022ರ ಮಾರ್ಚ್ 31ರಂದು ಟಿಡಿಸಿಸಿ ಬ್ಯಾಂಕ್ ಹೊಂದಿದ್ದ ಹಣಕಾಸು ಸ್ಥಿತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಪರಿಶೀಲನೆ ನಡೆಸಿತ್ತು. ಇದರ ವರದಿ ಹಾಗೂ ಇತರ ಅಂಶಗಳನ್ನು ಗಮನಿಸಿದಾಗ ಟಿಡಿಸಿಸಿ ಬ್ಯಾಂಕ್ ತನ್ನ ಒಬ್ಬ ನಿರ್ದೇಶಕರಿಗೆ ಸಾಲ ಮಂಜೂರಾತಿ ಮಾಡಿರುವುದು ಬೆಳಕಿಗೆ ಬಂದಿತ್ತು.

ಸಾಲ ಕೊಟ್ಟಿರುವ ವಿಚಾರ ಗೊತ್ತಾದ ಬಳಿಕ ಟಿಡಿಸಿಸಿ ಬ್ಯಾಂಕ್​ಗೆ ಆರ್​ಬಿಐ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದಕ್ಕೆ ಬ್ಯಾಂಕ್ ಕೊಟ್ಟಿರುವ ಉತ್ತರ, ಹಾಗು ವ್ಯಕ್ತಿಗತ ವಿಚಾರಣೆ ವೇಳೆ ಮೌಖಿಕವಾಗಿ ತಿಳಿಸಿರುವ ವಿಚಾರವು ಸಹಕಾರಿ ಬ್ಯಾಂಕ್​ನಿಂದ ನಿಯಮ ಉಲ್ಲಂಘನೆ ಆಗಿರುವುದನ್ನು ಖಚಿತಪಡಿಸಿದೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Sun, 24 December 23