RBI: ನಾಳೆಯಿಂದ ಆರ್​ಬಿಐನ ಎಂಪಿಸಿ ಸಭೆ; ಶೇ. 6.5ರ ರೆಪೋ ದರ ಮುಂದುವರಿಯುವ ಸಾಧ್ಯತೆ

Focus on Repo Rate: ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಫೆ. 6ರಂದು ಆರಂಭವಾಗುತ್ತದೆ. ಫೆ. 8ರಂದು ಸಭೆ ನಿರ್ಧಾರ ಪ್ರಕಟವಾಗಲಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಶೇ. 6.5ರ ರೆಪೋ ದರ ಮುಂದುವರಿಸಲು ನಿರ್ಧರಿಸಬಹುದು ಎನ್ನಲಾಗಿದೆ. ಶಕ್ತಿಕಾಂತ ದಾಸ್, ರಾಜೀವ್ ರಂಜನ್, ಮೈಕೇಲ್ ದೇಬಬ್ರತಾ ಪಾತ್ರ ಸೇರಿದಂತೆ ಆರು ಜನರು ಎಂಪಿಸಿ ಸಮಿತಿಯ ಸದಸ್ಯರಾಗಿದ್ದಾರೆ.

RBI: ನಾಳೆಯಿಂದ ಆರ್​ಬಿಐನ ಎಂಪಿಸಿ ಸಭೆ; ಶೇ. 6.5ರ ರೆಪೋ ದರ ಮುಂದುವರಿಯುವ ಸಾಧ್ಯತೆ
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2024 | 10:23 AM

ನವದೆಹಲಿ, ಫೆ. 5: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ ದ್ವೈಸಿಕ ವಾಗಿ (RBI MPC Meet) ನಡೆಸುವ ಸಭೆ ನಾಳೆ (ಫೆ. 6) ಆರಂಭವಾಗಲಿದೆ. ನಾಳೆ ಆರಂಭವಾಗಿ ಎರಡು ದಿನ ಸಭೆ ನಡೆಯುತ್ತದೆ. ಬಳಿಕ ಫೆಬ್ರುವರಿ 8ರಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ತಜ್ಞರ ಪ್ರಕಾರ ಈ ಬಾರಿಯೂ ಬಡ್ಡಿದರದಲ್ಲಿ (repo rate) ವ್ಯತ್ಯಯ ಆಗುವ ಸಾಧ್ಯತೆ ಇಲ್ಲ. ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಅಭಿಮತ ಸಂಗ್ರಹದಲ್ಲೂ ಇದೇ ಅನಿಸಿಕೆ ವ್ಯಕ್ತವಾಗಿದೆ. ಸದ್ಯ ಬಡ್ಡಿದರ ಅಥವಾ ರೆಪೋ ದರ ಶೇ. 6.5ರಷ್ಟಿದೆ. ಅದೇ ದರ ಮುಂದುವರಿಯಬಹುದು ಎನ್ನಲಾಗಿದೆ.

ಆರ್​ಬಿಐ ರೆಪೋ ದರ ಪರಿಷ್ಕರಿಸಿ ಸರಿಯಾಗಿ ಒಂದು ವರ್ಷ ಆಯಿತು. 2023ರ ಫೆಬ್ರುವರಿಯಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ ಶೇ. 6.25ರಷ್ಟಿದ್ದ ರೆಪೋ ದರವನ್ನು ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅದಾದ ಬಳಕ ಸತತವಾಗಿ ದರದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಹಣದುಬ್ಬರ ದರವೇ ಕಿಂಗ್​ಪಿನ್

ಆರ್​ಬಿಐ ರೆಪೋ ದರ ಪರಿಷ್ಕರಣೆಗೆ ಬಹುತೇಕ ಹಣದುಬ್ಬರ ದರವೇ ಆಧಾರವಾಗಿರುತ್ತದೆ. ಆರ್ಥಿಕತೆಯ ಓಟವನ್ನು ಇನ್ನಷ್ಟು ಸರಾಗಗೊಳಿಸಲು ಬಡ್ಡಿದರ ಕಡಿಮೆ ಮಾಡುವ ಅವಶ್ಯಕತೆ ಇದೆ. ಆದರೆ, ಹಣದುಬ್ಬರ ಈ ಕ್ರಮಕ್ಕೆ ಅಡ್ಡಿಯಾಗುತ್ತಾ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿದೆ. ಜನವರಿಯಲ್ಲೂ ಹೆಚ್ಚು ವ್ಯತ್ಯಯವಾಗುವುದು ಅನುಮಾನ. ಹೀಗಾಗಿ, ರೆಪೊ ದರವನ್ನು ಶೇ. 6.5ರ ದರದಲ್ಲೇ ಮುಂದುವರಿಸುವುದು ಆರ್​ಬಿಐಗೆ ಅನಿವಾರ್ಯ ಆಗಬಹುದು.

ಇದನ್ನೂ ಓದಿ: ಕೇಂದ್ರದಿಂದ ಅತಿಹೆಚ್ಚು ತೆರಿಗೆ ಪಾಲು ಪಡೆಯುವ ರಾಜ್ಯಗಳ್ಯಾವುವು? ಕರ್ನಾಟಕದ ಪಾಲೆಷ್ಟು? ಇಲ್ಲಿದೆ ತೆರಿಗೆ ಹಂಚಿಕೆ ಸೂತ್ರ ಇತ್ಯಾದಿ ಮಾಹಿತಿ

ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಆರು ಸದಸ್ಯರು

ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯಲ್ಲಿ ಆರು ಸದಸ್ಯರಿದ್ದಾರೆ. ಇದರಲ್ಲಿ ಮೂವರು ಆರ್​ಬಿಐಗೆ ಸೇರಿದವರೇ ಆಗಿದ್ದರೆ, ಇತರ ಮೂವರು ಹೊರಗಿನವರಾಗಿದ್ದಾರೆ. ಈ ಸಮಿತಿ ಸದಸ್ಯರ ಪಟ್ಟಿ ಇಂತಿದೆ:

  1. ಶಕ್ತಿಕಾಂತ ದಾಸ್
  2. ರಾಜೀವ್ ರಂಜನ್
  3. ಮೈಕೇಲ್ ದೇಬಬ್ರತಾ ಪಾತ್ರ
  4. ಶಶಾಂಕ ಭಿಡೆ
  5. ಅಶಿಮಾ ಗೋಯಲ್
  6. ಜಯಂತ್ ಆರ್ ವರ್ಮಾ

ಶಕ್ತಿಕಾಂತ ದಾಸ್ ಆರ್​ಬಿಐನ ಗವರ್ನರ್ ಆಗಿದ್ದಾರೆ. ರಾಜೀವ್ ರಂಜನ್ ಆರ್​ಬಿಐನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರೆ ಮೈಕೇಲ್ ದೇಬಬ್ರತಾ ಪಾಲ್ ಉಪಗವರ್ನರ್ ಆಗಿದ್ದಾರೆ.

ಇದನ್ನೂ ಓದಿ: ಖಾಸಗಿ ಬಂಡವಾಳ ವೆಚ್ಚ ಬರದಿದ್ದರೂ ಇದೇ ಆರ್ಥಿಕ ವೇಗ ಉಳಿಯಲು ಸಾಧ್ಯ: ಟಿವಿ ಸೋಮನಾಥನ್

ಉಳಿದ ಮೂವರಾದ ಶಶಾಂಕ್ ಭಿಡೆ, ಆಶಿಮಾ ಗೋಯಲ್ ಮತ್ತು ಜಯಂತ್ ವರ್ಮಾ ಸ್ವತಂತ್ರ ಸದಸ್ಯರು. ಈ ಮೂವರನ್ನು ಸರ್ಕಾರ 2020ರಲ್ಲಿ ಸಮಿತಿಗೆ ನೇಮಕ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್