UPI payment: ವ್ಯಾಪಾರಿಗಳಿಗೆ ಹೆಚ್ಚು ಯುಪಿಐ ವಹಿವಾಟು ಅವಕಾಶ? ಎನ್​​ಪಿಸಿಐಗೆ ನಿರ್ಧಾರದ ಅಧಿಕಾರ ಕೊಟ್ಟ ಆರ್​​ಬಿಐ

|

Updated on: Apr 09, 2025 | 12:54 PM

RBI MPC decision highlight: ಗ್ರಾಹಕರಿಂದ ವರ್ತಕರಿಗೆ ಮಾಡಲಾಗುವ ಯುಪಿಐ ಹಣ ಪಾವತಿ ಮಿತಿಯನ್ನು ಪರಿಷ್ಕರಿಸುವ ಅಧಿಕಾರವನ್ನು ಎನ್​​ಪಿಸಿಐಗೆ ನೀಡಲಾಗಿದೆ. ಆರ್​​ಬಿಐ ಎಂಪಿಸಿ ಸಭೆ ಬಳಿಕ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ, ವರ್ತಕರಿಗೆ ಗ್ರಾಹಕರಿಂದ ಆಗುವ ಯುಪಿಐ ವಹಿವಾಟು ಮಿತಿ 2 ಲಕ್ಷ ರೂ ಇದೆ. ಬ್ಯಾಂಕು ಹಾಗು ಇತರ ಭಾಗಿದಾರರೊಂದಿಗೆ ಸಮಾಲೋಚಿಸಿ ಎನ್​​ಪಿಸಿಐ ಈ ಮಿತಿ ಏರಿಸಬಹುದು.

UPI payment: ವ್ಯಾಪಾರಿಗಳಿಗೆ ಹೆಚ್ಚು ಯುಪಿಐ ವಹಿವಾಟು ಅವಕಾಶ? ಎನ್​​ಪಿಸಿಐಗೆ ನಿರ್ಧಾರದ ಅಧಿಕಾರ ಕೊಟ್ಟ ಆರ್​​ಬಿಐ
ಯುಪಿಐ ಪಾವತಿ
Follow us on

ನವದೆಹಲಿ, ಏಪ್ರಿಲ್ 9: ವ್ಯಾಪಾರಿಗಳಿಗೆ ಗ್ರಾಹಕರು ಯುಪಿಐ ಮೂಲಕ ಹಣ ಪಾವತಿಸಲು ಎಷ್ಟು ಮಿತಿ ಇರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಎನ್​​ಪಿಸಿಐಗೆ ನೀಡಲಾಗಿದೆ. ಆರ್​​ಬಿಐನ ಮಾನಿಟರಿ ಪಾಲಿಸಿ ಸಮಿತಿ ಸಭೆಯಲ್ಲಿ (RBI Monetary Policy Committee meeting) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವ್ಯಾಪಾರಿಗಳಿಗೆ ಗ್ರಾಹಕರಿಂದ ಯುಪಿಐ ಮೂಲಕ ಆಗುವ ಹಣ ವಹಿವಾಟು ಮಿತಿಯನ್ನು (Person to Merchant UPI transaction limit) ಎನ್​​ಪಿಸಿಐ ಪರಿಷ್ಕರಿಸಬಹುದು ಎಂದು ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸದ್ಯ, ಗ್ರಾಹಕರಿಂದ ವರ್ತಕರಿಗೆ ಹಣ ಪಾವತಿಗೆ ಎರಡು ಲಕ್ಷ ರೂ ಮಿತಿ ನಿಗದಿ ಮಾಡಲಾಗಿದೆ. ಈ ಮಿತಿಯನ್ನು ಬದಲಿಸಲು, ಅಂದರೆ ಏರಿಸಲೋ ಅಥವಾ ಇರಿಸಲೋ ನಿರ್ಧರಿಸುವ ಅಧಿಕಾರ ಎನ್​​ಪಿಸಿಐಗೆ ನೀಡಲಾಗಿದೆ. ಯುಪಿಐ ಅನ್ನು ಅಭಿವೃದ್ಧಿಪಡಿಸಿದ್ದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್​​ಪಿಸಿಐ). ಬ್ಯಾಂಕು ಹಾಗೂ ಯುಪಿಐ ಪಾವತಿ ವ್ಯವಸ್ಥೆಯಲ್ಲಿನ ಇತರ ಎಲ್ಲಾ ಭಾಗಿದಾರರೊಂದಿಗೆ ಸಮಾಲೋಚಿಸಿ, ಯುಪಿಐ ಟ್ರಾನ್ಸಾಕ್ಷನ್ ಮಿತಿಯನ್ನು ಎನ್​​ಪಿಸಿಐ ನಿರ್ಧರಿಸಬಹುದು ಎಂದು ಆರ್​​ಬಿಐ ಹೇಳಿದೆ.

ಇದನ್ನೂ ಓದಿ: ಆರ್​​ಬಿಐ ನಿಲುವಿನಲ್ಲಿ ಪರಿಷ್ಕರಣೆ; ನ್ಯೂಟ್ರಲ್​​ನಿಂದ Accommodativeಗೆ ಬದಲಾವಣೆ; ಜೂನ್​​ನಲ್ಲೂ ಬಡ್ಡಿ ದರ ಇಳಿಕೆಯಾಗುತ್ತಾ?

ಇದನ್ನೂ ಓದಿ
ಆರ್​​ಬಿಐ ನಿಲುವು ನ್ಯೂಟ್ರಲ್​​ನೀಂದ Accommodativeಗೆ ಬದಲಾವಣೆ
ಜಿಡಿಪಿ ಶೇ. 6.5, ಹಣದುಬ್ಬರ ಶೇ. 4: ಆರ್​​ಬಿಐ ಅಂದಾಜು
ಬಡ್ಡಿದರ ಶೇ. 6ಕ್ಕೆ ಇಳಿಸಿದ ಆರ್​​ಬಿಐ
ಯುಎಎನ್ ಆ್ಯಕ್ಟಿವೇಶನ್​​ಗೆ ಫೇಸ್ ಅಥೆಂಟಿಕೇಶನ್ ಫೀಚರ್

ಇಲ್ಲಿ ಗ್ರಾಹಕರಿಂದ ವ್ಯಾಪಾರಿಗೆ ಯುಪಿಐ ಮೂಲಕ ಮಾಡಲಾಗುವ ಹಣ ಪಾವತಿಯ ವಹಿವಾಟು ಮಿತಿ ಇದಾಗಿದೆ. ಸದ್ಯ ಇದು ಎರಡು ಲಕ್ಷ ರೂಗೆ ನಿಗದಿ ಮಾಡಲಾಗಿದೆ. ಬ್ಯಾಂಕ್ ಮತ್ತಿತರ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಎನ್​​ಪಿಸಿಐ ಈ ಮಿತಿಯನ್ನು ಹೆಚ್ಚಿಸಲು ಸ್ವತಂತ್ರವಾಗಿರುತ್ತದೆ.

ಇನ್ನು, ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಪಾವತಿ ಮಿತಿ ಒಂದು ಲಕ್ಷ ರೂ ಇದೆ. ಇದರಲ್ಲಿ ಸದ್ಯ ಯಾವ ಬದಲಾವಣೆ ಇರುವುದಿಲ್ಲ. ವರ್ತಕರಿಗೆ ಮಾಡಲಾಗುವ ಯುಪಿಐ ವಹಿವಾಟು ಮಿತಿ ಹೆಚ್ಚಳ ಸಾಧ್ಯತೆ ಸದ್ಯಕ್ಕೆ ಕಂಡುಬರುತ್ತಿದೆ.

ಇದನ್ನೂ ಓದಿ: ಬಡ್ಡಿದರ 25 ಅಂಕ ಇಳಿಸಿದ ಆರ್​​ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ

ಆರ್​​ಬಿಐನ ಈ ನಿರ್ಧಾರವನ್ನು ಹಣಕಾಸು ಕ್ಷೇತ್ರದವರು ಸ್ವಾಗತಿಸಿದ್ದಾರೆ. ವ್ಯಾಪಾರಿಗಳಿಗೆ ಹೆಚ್ಚಿನ ಮೊತ್ತದ ಹಣವನ್ನು ಯುಪಿಐ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ ಎಂದಾದಲ್ಲಿ ಅದರಿಂದ ರೀಟೇಲ್ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ಪ್ರವಾಸ, ಆರೋಗ್ಯ, ಶಿಕ್ಷಣ ಮತ್ತಿತರ ಸೆಕ್ಟರ್​​ಗಳಿಗೆ ಇದರಿಂದ ಅನುಕೂಲವಾಗಬಹುದು ಎಂದು ಮುಫಿನ್​​ಪೇ (MufinPay) ಸಂಸ್ಥೆಯ ಸಿಇಒ ಅಂಕುಶ್ ಜುಲ್ಕಾ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ