ಹೊಸ 100 ರೂ ಮತ್ತು 200 ರೂ ಬ್ಯಾಂಕ್ ನೋಟುಗಳ ಬಿಡುಗಡೆ; ಹೀಗಿವೆ ಈ ನೋಟುಗಳು

New ₹100 and ₹200 banknotes: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ 100 ರೂ ಮತ್ತು 200 ರೂ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿದೆ. ಎರಡೂ ನೋಟುಗಳು ಗಾತ್ರ ಮತ್ತು ಬಣ್ಣದಲ್ಲಿ ಬದಲಾವಣೆ ಕಂಡಿವೆ. ಹಳೆಯ ನೋಟುಗಳಿಗಿಂತ ಗಾತ್ರದಲ್ಲಿ ಚಿಕ್ಕದಿವೆ. ಹೊಸ ಸೆಕ್ಯೂರಿಟಿ ಫೀಚರ್​​ಗಳನ್ನು ಸೇರಿಸಲಾಗಿದೆ.

ಹೊಸ 100 ರೂ ಮತ್ತು 200 ರೂ ಬ್ಯಾಂಕ್ ನೋಟುಗಳ ಬಿಡುಗಡೆ; ಹೀಗಿವೆ ಈ ನೋಟುಗಳು
ಹೊಸ 100 ರೂ ನೋಟು

Updated on: Apr 07, 2025 | 3:02 PM

ನವದೆಹಲಿ, ಏಪ್ರಿಲ್ 7: ಭಾರತೀಯ ರಿಸರ್ವ್ ಬ್ಯಾಂಕ್ ಮೊನ್ನೆಯಷ್ಟೇ ಹೊಸ 10 ರೂ ಮತ್ತು 500 ರೂ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಹಾಗೆಯೇ, ಹೊಸ 100 ರೂ ಮತ್ತು 200 ರೂ ನೋಟುಗಳನ್ನು ಅದು ಬಿಡುಗಡೆ ಮಾಡಿದೆ. ಆರ್​​ಬಿಐ (RBI new bank notes) ಹೊಸ ನೋಟುಗಳನ್ನು ಮುದ್ರಿಸಲು ಬೇರೆ ಬೇರೆ ಕಾರಣಗಳಿರುತ್ತವೆ. ಒಂದು ನೋಟು ಹಳೆಯದಾದಾಗ ಹಾಳಾಗುತ್ತವಾದ್ದರಿಂದ ನಿಗದಿತ ವರ್ಷಗಳವರೆಗೆ ಮಾತ್ರ ಅವುಗಳನ್ನು ಚಲಾವಣೆಯಲ್ಲಿ ಇರಿಸಲಾಗುತ್ತದೆ. ಆ ಬಳಿಕ ಹೊಸ ನೋಟುಗಳನ್ನು ಮುದ್ರಿಸಲಾಗುತ್ತದೆ. ಮತ್ತೂ ಕೆಲ ಬಾರಿ, ನಕಲಿ ನೋಟುಗಳು ಹೆಚ್ಚಾದಾಗ ಅಥವಾ ಹೊಸ ಸೆಕ್ಯೂರಿಟಿ ಫೀಚರ್​​ಗಳನ್ನು ಅಳವಡಿಸಬೇಕೆಂದಾಗ ಸಂಪೂರ್ಣ ಹೊಸ ವಿನ್ಯಾಸ ಇರುವ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈಗ ಆರ್​​ಬಿಐ 100 ರೂ ಮತ್ತು 200 ರೂ ನೋಟುಗಳನ್ನು ಹೊಸ ವಿನ್ಯಾಸದೊಂದಿಗೆ ಮುದ್ರಿಸಿದೆ.

100 ರೂ ಮುಖಬೆಲೆಯ ನೋಟಿನಲ್ಲಿ ಏನು ಬದಲಾವಣೆ?

ಹಳೆಯ 100 ರೂ ನೋಟು 73 x 157 ಎಂಎಂ ಅಳತೆಯದ್ದಿದೆ. ಹೊಸ ನೋಟು 66 x 142 ಎಂಎಂ ಅಳತೆಯದ್ದಾಗಿದೆ. ಅಂದರೆ ಹಳೆಯ ನೋಟಿಗಿಂತ ಹೊಸ 100 ರೂ ನೋಟು ಗಾತ್ರದಲ್ಲಿ ಚಿಕ್ಕದಾಗಿದೆ.

RBI releases new Rs 100 and Rs 200 notes, know about new size, colour, pic and other changes in new bank notes

ಹೊಸ 100 ರೂ ನೋಟು

ಮಹಾತ್ಮ ಗಾಂಧಿಯ ಹೊಸ ಚಿತ್ರವು ನೋಟಿನಲ್ಲಿದೆ. ಲೇಟೆಂಟ್ ಇಮೇಜ್, ಪುಟ್ಟ ಅಕ್ಷರ ಇತ್ಯಾದಿ ಸೆಕ್ಯೂರಿಟಿ ಫೀಚರ್​​ಗಳಿವೆ. ಸ್ಪರ್ಶಕ್ಕೆ ಗೊತ್ತಾಗುವ ಗೆರೆಗಳು ಇದ್ದು ಇದರಿಂದ ಅಂಧರು ನೋಟನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಳೆಯ ನೋಟಿನಲ್ಲಿ ಈ ಫೀಚರ್ ಇರಲಿಲ್ಲ.

ಇದನ್ನೂ ಓದಿ
ಆರ್​ಬಿಐನಿಂದ 10 ರೂ, 500 ರೂ ಹೊಸ ನೋಟುಗಳು?
ಏಪ್ರಿಲ್​​ನಲ್ಲಿ ಬ್ಯಾಂಕುಗಳಿಗೆ 15 ರಜಾ ದಿನಗಳು
ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?

ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್​​ಚೇಂಜ್ ಫೀಸ್ ಹೆಚ್ಚಳ

ಹಾಗೆಯೇ, ಹಳೆಯ 100 ರೂ ನೋಟಿನ ಬಣ್ಣವು ನೀಲಿ ಮತ್ತು ಹಸಿರು ಮಿಶ್ರಿತವಾಗಿದ್ದರೆ, ಹೊಸ ನೋಟಿನ ಬಣ್ಣ ಲ್ಯಾವೆಂಡರ್ (ದಟ್ಟ ನೀಲಿ) ಆಗಿದೆ.

200 ರೂ ಹೊಸ ನೋಟಿನ ವಿಶೇಷತೆ ಏನು?

200 ರೂ ಹೊಸ ನೋಟಿನ ಗಾತ್ರ 66 x 146 ಎಂಎಂ ಇದೆ. ಹಳೆಯ ನೋಟಿನ ಗಾತ್ರ 73 x 157 ಎಂಎಂನಷ್ಟಿದೆ. ಇದರ ಬಣ್ಣ ಹಳದಿ ಮತ್ತು ಕಿತ್ತಳೆ ಮಿಶ್ರಿತವಾಗಿದೆ. ಆದರೆ, ಹೊಸ ನೋಟಿನ ಬಣ್ಣ ದಟ್ಟ ಹಳದಿಯದ್ದಾಗಿದೆ.

ಹೊಸ 200 ರೂ ನೋಟು

ಹೊಸ 200 ರೂ ನೋಟಿನಲ್ಲಿ ಬಣ್ಣ ಬದಲಾಗುವ ಥ್ರೆಡ್ ಹಾಗೂ ಹೊಸ ರೀತಿಯ ವಾಟರ್​​ಮಾರ್ಕ್ ಇದೆ. ಅಂಧರಿಗೆ ಸ್ಪರ್ಶದಿಂದ ಹೊತ್ತಾಗುವ ಗೆರೆಗಳಿರುತ್ತವೆ.

ಇದನ್ನೂ ಓದಿ: ಆರ್​​ಬಿಐನಿಂದ ಸದ್ಯದಲ್ಲೇ ಹೊಸ 10 ರೂ ಮತ್ತು 500 ರೂ ನೋಟುಗಳ ಬಿಡುಗಡೆ; ಏನಿವುಗಳ ವಿಶೇಷತೆ?

ಹೊಸ 100 ರೂ ನೋಟುಗಳಲ್ಲಿರುವ ಎಲ್ಲಾ ಫೀಚರ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: paisaboltahai.rbi.org.in/rupees-one-hundred.aspx

ಹೊಸ 200 ರೂ ನೋಟುಗಳಲ್ಲಿರುವ ಎಲ್ಲಾ ಫೀಚರ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: paisaboltahai.rbi.org.in/rupees-two-hundred.aspx

ಈ ಹೊಸ ನೋಟುಗಳಲ್ಲಿರುವ ಫೀಚರ್​​ಗಳ ಬಗ್ಗೆ ಜನರು ಮತ್ತು ವ್ಯಾಪಾರಿಗಳು ತಿಳಿದಿರುವುದು ಉತ್ತಮ. ನಕಲಿ ನೋಟುಗಳನ್ನು ಪತ್ತೆ ಮಾಡಲು ಸಾಧ್ಯ. ಹಾಗೆಯೇ, ಈ ಹೊಸ ನೋಟುಗಳಲ್ಲಿರುವ ಫೀಚರ್​​ಗಳನ್ನು ನಕಲಿ ಮಾಡುವುದು ಕಷ್ಟಕರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Mon, 7 April 25