ಸಹಕಾರಿ ವಲಯದಲ್ಲಿ ಕೇಂದ್ರದಿಂದ ಕ್ರಾಂತಿಕಾರಿ ಹೆಜ್ಜೆ; ಎಲ್ಲಾ ರಾಜ್ಯಗಳ ರಿಜಿಸ್ಟ್ರಾರ್ ಮತ್ತು ಕೃಷಿ ಬ್ಯಾಂಕುಗಳ ಕಂಪ್ಯೂಟರೀಕರಣಕ್ಕೆ ನಿರ್ಧಾರ

Union Cooperation Minister Amit Shah: ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಕಂಪ್ಯೂಟೀಕರಣ ಯೋಜನೆ ರೀತಿಯಲ್ಲಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಎಆರ್​ಡಿಬಿಗಳ ಗಣಕೀಕೃತ ಕಾರ್ಯಕ್ಕೆ ಅನುಮೋದನೆ ಕೊಡಲಾಗಿದೆ. ಸೆಂಟ್ರಲ್ ರಿಜಿಸ್ಟ್ರಾರ್ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್ ಕಚೇರಿಗಳನ್ನು ನ್ಯಾಷನಲ್ ಯೂನಿಫೈಡ್ ಸಾಫ್ಟ್​ವೇರ್ ಮೂಲಕ ಕಂಪ್ಯೂಟರೀಕರಣಗೊಳಿಸಲಾಗುತ್ತದೆ. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸೆಂಟ್ರಲ್ ಪ್ರಾಜೆಕ್ಟ್ ಮಾನಿಟರಿಂಗ್ ಯೂನಿಟ್ ಅನ್ನು ಸ್ಥಾಪಿಸಲಾಗುತ್ತದೆ. ಇದರ ಅಂದಾಜು ವೆಚ್ಚ 225 ಕೋಟಿ ರೂ ಎಂದಿದೆ.

ಸಹಕಾರಿ ವಲಯದಲ್ಲಿ ಕೇಂದ್ರದಿಂದ ಕ್ರಾಂತಿಕಾರಿ ಹೆಜ್ಜೆ; ಎಲ್ಲಾ ರಾಜ್ಯಗಳ ರಿಜಿಸ್ಟ್ರಾರ್ ಮತ್ತು ಕೃಷಿ ಬ್ಯಾಂಕುಗಳ ಕಂಪ್ಯೂಟರೀಕರಣಕ್ಕೆ ನಿರ್ಧಾರ
ಅಮಿತ್ ಶಾ

Updated on: Oct 08, 2023 | 4:44 PM

ನವದೆಹಲಿ, ಅಕ್ಟೋಬರ್ 8: ದೇಶದ ಸಹಕಾರಿ ಕ್ಷೇತ್ರಕ್ಕೆ ಪುಷ್ಟಿ ಕೊಡುವ ನಿಟ್ಟಿನಲ್ಲಿ ಸರ್ಕಾರ (Union Ministry of Cooperation) ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ದೇಶದ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಿಜಿಸ್ಟ್ರಾರ್​ಗಳನ್ನು (registrars of cooperatives) ಸಂಪೂರ್ಣವಾಗಿ ಕಂಪ್ಯೂಟರೀಕರಿಸಲಾಗುತ್ತಿದೆ. 13 ರಾಜ್ಯಗಳಲ್ಲಿರುವ 1,851 ಕೃಷಿ ಮತ್ತು ಗ್ರಾಮೀಣಾಭವೃದ್ಧಿ ಬ್ಯಾಂಕ್​ಗಳನ್ನೂ (ಎಆರ್​ಡಿಬಿ) ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (Primary Agriculture Credit Societies) ಕಂಪ್ಯೂಟೀಕರಣ ಯೋಜನೆ ರೀತಿಯಲ್ಲಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಎಆರ್​ಡಿಬಿಗಳ ಗಣಕೀಕೃತ ಕಾರ್ಯಕ್ಕೆ ಅನುಮೋದನೆ ಕೊಡಲಾಗಿದೆ. ಸೆಂಟ್ರಲ್ ರಿಜಿಸ್ಟ್ರಾರ್ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್ ಕಚೇರಿಗಳನ್ನು ನ್ಯಾಷನಲ್ ಯೂನಿಫೈಡ್ ಸಾಫ್ಟ್​ವೇರ್ ಮೂಲಕ ಕಂಪ್ಯೂಟರೀಕರಣಗೊಳಿಸಲಾಗುತ್ತದೆ.

ಇದನ್ನೂ ಓದಿ: ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್

ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸೆಂಟ್ರಲ್ ಪ್ರಾಜೆಕ್ಟ್ ಮಾನಿಟರಿಂಗ್ ಯೂನಿಟ್ ಅನ್ನು ಸ್ಥಾಪಿಸಲಾಗುತ್ತದೆ. ಇದರ ಅಂದಾಜು ವೆಚ್ಚ 225 ಕೋಟಿ ರೂ ಎಂದಿದೆ.

ಕೇಂದ್ರ ಸಹಕಾರಿ ಸಚಿವರೂ ಆದ ಅಮಿತ್ ಶಾ ಕೈಗೊಂಡ ಈ ಕ್ರಮ ಯಶಸ್ವಿಯಾಗಿ ಜಾರಿಯಾದಲ್ಲಿ ಸಹಕಾರಿ ಇಲಾಖೆಗಳ ವಿವಿಧ ಸೇವೆಗಳು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತದೆ. ರಿಜಿಸ್ಟ್ರಾರ್ ಕಚೇರಿಗಳು ಮತ್ತು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಹೆಚ್ಚು ಕ್ಷಮತೆ ಮತ್ತು ಪಾರದರ್ಶಕತೆಯಿಂದ ಕೆಲಸ ಮಾಡಲು ಅನುವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ