Mukesh Ambani: ಭಾರತದಲ್ಲಿ ಈವರೆಗಿನ ಅತ್ಯಂತ ದುಬಾರಿ ಕಾರು ಖರೀದಿಸಿದ ಮುಕೇಶ್ ಅಂಬಾನಿ

| Updated By: Srinivas Mata

Updated on: Feb 04, 2022 | 9:46 PM

ಭಾರತದಲ್ಲೇ ಪರಮ ದುಬಾರಿ ಎನಿಸುವಂಥ ವಿಲಾಸಿ ಕಾರನ್ನು ಮುಕೇಶ್​ ಅಂಬಾನಿಗಾಗಿ ರಿಲಯನ್ಸ್​ನಿಂದ ಖರೀದಿಸಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Mukesh Ambani: ಭಾರತದಲ್ಲಿ ಈವರೆಗಿನ ಅತ್ಯಂತ ದುಬಾರಿ ಕಾರು ಖರೀದಿಸಿದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
Follow us on

ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ, ಭಾರತದ ಅತಿ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ಅವರು ಪರಮ ದುಬಾರಿ ರೋಲ್ಸ್​ ರಾಯ್ಸ್​ ಹ್ಯಾಚ್​ಬ್ಯಾಕ್ ಕಾರು 13.14 ಕೋಟಿ ರೂಪಾಯಿಯದು ಖರೀದಿಸಿದ್ದಾರೆ. ಆರ್​ಟಿಒ ಅಧಿಕಾರಿಗಳ ಮಾತನ್ನು ನಂಬುವುದಾದರೆ, ಈ ವರೆಗೆ ದೇಶದಲ್ಲಿ ಖರೀದಿ ಆಗಿರುವ ಅತ್ಯಂತ ದುಬಾರಿ ಕಾರು. ಈ ಕಾರು ರೋಲ್ಸ್ ರಾಯ್ಸ್ ಕಲಿನನ್ ಪೆಟ್ರೋಲ್ ಮಾಡೆಲ್. ಇದನ್ನು ರಿಲಯನ್ಸ್​ನಿಂದ ದಕ್ಷಿಣ ಮುಂಬೈನ ಟಾರ್ಡಿಯೊ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನವರಿ 31, 2022ರಂದು ನೋಂದಣಿ ಆಗಿದೆ, ಎಂದು ಈ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ಹೇಳಿದ್ದಾರೆ.

2018ರಲ್ಲಿ ಈ ಕಾರು ಮೊದಲ ಬಾರಿಗೆ ಬಿಡುಗಡೆ ಆದಾಗ 6.95 ಕೋಟಿ ರೂಪಾಯಿ ಇತ್ತು. ವಾಹನ ಕೈಗಾರಿಕೆ ತಜ್ಞರು ಹೇಳುವಂತೆ, ಗ್ರಾಹಕರಿಗೆ ಬೇಕಾದಂತೆ ಮಾರ್ಪಾಡು ಮಾಡಿಸಿರುವುದರಿಂದ ಬೆಲೆ ಹೆಚ್ಚಾಗಿದೆ. ಕಂಪೆನಿಯು “ಟಸ್ಕನ್ ಸನ್” ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 12 ಸಿಲಿಂಡರ್​ನ ಈ ಕಾರು 2,500 ಕೇಜಿ ತೂಕದ್ದಾಗಿದೆ. 564 ಬಿಎಚ್​ಪಿ ಪವರ್ ಉತ್ಪಾದಿಸುತ್ತದೆ. ಇದರ ಜತೆಗೆ ವಿಶೇಷ ನಂಬರ್​ ಪ್ಲೇಟ್​ ಹೊಂದಿದೆ, ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ. ಒಂದು ಸಲದ ತೆರಿಗೆ 20 ಲಕ್ಷ ತೆರಿಗೆಯನ್ನು ಪಾವತಿಸಲಾಗಿದೆ, ನೋಂದಣಿ ಜನವರಿ 30, 2037ರ ತನಕ ಸಿಂಧುತ್ವ ಹೊಂದಿದೆ. 40 ಸಾವಿರ ರೂಪಾಯಿ ರಸ್ತೆ ಸುರಕ್ಷತಾ ತೆರಿಗೆ ಪಾವತಿಸಲಾಗಿದೆ.

ಇದು ಭಾರತದಲ್ಲಿ ಖರೀದಿಸಿದ ಅತ್ಯಂತ ದುಬಾರಿ ಕಾರು ಆಗಿರಬಹುದು ಎಂದು ಆರ್‌ಟಿಒ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಿಲಯನ್ಸ್​ನಿಂದ ತನ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಹೊಸ ಕಾರಿಗೆ ವಿಐಪಿ ಸಂಖ್ಯೆ ಪಡೆಯಲು 12 ಲಕ್ಷ ರೂಪಾಯಿ ಪಾವತಿಸಿದೆ. ಸಂಖ್ಯೆಯು “0001” ಎಂದು ಕೊನೆಗೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ವಿಐಪಿ ಸಂಖ್ಯೆಗೆ ರೂ. 4 ಲಕ್ಷ ವೆಚ್ಚವಾಗುತ್ತದೆ, ಆದರೆ ಪ್ರಸ್ತುತ ಸರಣಿಯಲ್ಲಿ ಆಯ್ಕೆ ಮಾಡಿದ ಸಂಖ್ಯೆಯನ್ನು ಈಗಾಗಲೇ ತೆಗೆದುಕೊಳ್ಳಲಾಗಿರುವುದರಿಂದ ಹೊಸ ಸರಣಿಯನ್ನು ಪ್ರಾರಂಭಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸಾರಿಗೆ ಆಯುಕ್ತರಿಂದ ಲಿಖಿತ ಅನುಮತಿಯೊಂದಿಗೆ ಆರ್​ಟಿಒ ಕಚೇರಿಗಳು ನೋಂದಣಿ ಗುರುತು 0001 ಅನ್ನು ನಿಯೋಜಿಸಲು ಹೊಸ ಸರಣಿ ಪ್ರಾರಂಭಿಸಬಹುದು. ಇದಕ್ಕಾಗಿ ಅರ್ಜಿದಾರರು ಸಾಮಾನ್ಯ ಸಂಖ್ಯೆಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ರೋಲ್ಸ್ ರಾಯ್ಸ್ ಕಲಿನನ್ ಅನ್ನು 2018ನೇ ಇಸವಿಯಲ್ಲಿ ಭಾರತದಲ್ಲಿ ಹ್ಯಾಚ್‌ಬ್ಯಾಕ್ ಆಗಿ ಪ್ರಾರಂಭಿಸಲಾಯಿತು. ಇದು ಸುಸಜ್ಜಿತ ಮತ್ತು ಒರಟು ರಸ್ತೆಗಳಲ್ಲಿ ಸುಲಭವಾಗಿ ಸಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಅಂಬಾನಿ/ರಿಲಯನ್ಸ್ ಗ್ಯಾರೇಜ್‌ನಲ್ಲಿ ಮೂರನೇ ಕಲಿನನ್ ಮಾದರಿಯಾಗಿದೆ.

ಇತರ ಕೆಲವು ಕೈಗಾರಿಕೋದ್ಯಮಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸಹ ಅದೇ ಮಾದರಿಯನ್ನು ಚಾಲನೆ ಮಾಡುತ್ತಾರೆ. ಬ್ರಿಟಿಷ್ ತಯಾರಕರ ವೆಬ್‌ಸೈಟ್‌ನ ಪ್ರಕಾರ, ರೋಲ್ಸ್ ರಾಯ್ಸ್ ಸ್ಟೇಬಲ್‌ನಿಂದ ಕಲಿನನ್ ಮೊದಲ ಆಲ್-ಟೆರೈನ್ SUV ಆಗಿದೆ. ರಿಲಯನ್ಸ್ ತನ್ನ ಗ್ಯಾರೇಜ್‌ನಲ್ಲಿ ಹಲವಾರು ಉನ್ನತ-ಮಟ್ಟದ ಐಷಾರಾಮಿ ಕಾರುಗಳನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ, ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿಗಾಗಿ ಅತ್ಯಾಧುನಿಕ ಶಸ್ತ್ರಸಜ್ಜಿತ ವಾಹನಗಳಲ್ಲಿ ಒಂದನ್ನು ಖರೀದಿಸಿತ್ತು. ಕಂಪೆನಿಯು ಅಂಬಾನಿ ಕುಟುಂಬದ ಭದ್ರತೆಗಾಗಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗೆ ಗ್ಲೋಸ್ಟರ್ ಮಾದರಿಯ ಇತ್ತೀಚಿನ ಉನ್ನತ-ಮಟ್ಟದ ಮೋರಿಸ್ ಗ್ಯಾರೇಜ್ ಕಾರುಗಳನ್ನು ಸಹ ನೀಡಿದೆ.

ಇದನ್ನೂ ಓದಿ: Blockchain Technology: ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ