Blockchain Technology: ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ

ಬ್ಲಾಕ್​ಚೈನ್​ ತಂತ್ರಜ್ಞಾನದ ಬಗ್ಗೆ ಬಹಳ ನಂಬಿಕೆ ಇರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಶುಕ್ರವಾರ ಹೇಳಿದ್ದಾರೆ.

Blockchain Technology: ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)

ಬ್ಲಾಕ್‌ಚೈನ್ ತಂತ್ರಜ್ಞಾನದ ಪ್ರಯೋಜನಗಳನ್ನು ಎದುರು ನೋಡುತ್ತಿದ್ದೇನೆ ಮತ್ತು ಭಾರತವು ಶೀಘ್ರದಲ್ಲೇ ವಿಶ್ವದ ಅತ್ಯಂತ ಸುಧಾರಿತ ಡಿಜಿಟಲ್ ಮೂಲಸೌಕರ್ಯಗಳಲ್ಲಿ ಒಂದನ್ನು ಹೊಂದುವ ನಿರೀಕ್ಷೆಯಿದೆ ಎಂದು ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರು ಹೇಳಿದರು – ಇದು ಸಮಾಜದಾದ್ಯಂತ ಸಮಾನವಾದ ಸಮೃದ್ಧಿಯನ್ನು ಉಂಟುಮಾಡುವ ಸಾಧನವಾಗಿದೆ ಎಂಬ ಅಭಿಪ್ರಾಯಪಟ್ಟರು. “ಬ್ಲಾಕ್‌ಚೈನ್ ನಾನು ನಂಬಿರುವ ತಂತ್ರಜ್ಞಾನವಾಗಿದೆ ಮತ್ತು ಇದು ಕ್ರಿಪ್ಟೋಗಿಂತ ಭಿನ್ನವಾಗಿದೆ” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಅಂಬಾನಿ ಶುಕ್ರವಾರ ಭಾರತದ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮತ್ತು ಬ್ಲೂಮ್‌ಬರ್ಗ್ ಆಯೋಜಿಸಿದ್ದ ಫೋರಂನಲ್ಲಿ ಹೇಳಿದರು. ಡಿಜಿಟಲ್ ತಂತ್ರಜ್ಞಾನಗಳು ಹಣಕಾಸು ಸೇವೆಗಳಿಂದ ಉತ್ಪಾದನೆ, ಕೃಷಿಯಿಂದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಕ್ಷೇತ್ರಗಳನ್ನು ಮರುಶೋಧಿಸುತ್ತದೆ, ಅವುಗಳನ್ನು ಹೆಚ್ಚು ಕೈಗೆಟುಕುವ ಮತ್ತು ಎಲ್ಲ ಭಾರತೀಯರಿಗೆ ಹೆಚ್ಚು ಸುಲಭವಾಗಿಸುತ್ತದೆ ಎಂದು ಅವರು ಹೇಳಿದರು.

“ಡಿಜಿಟಲ್ ತಂತ್ರಜ್ಞಾನ ಅದು ಎಲ್ಲರನ್ನೂ ಸಮಾನರನ್ನಾಗಿ ಮಾಡುವ ಸಾಧನ, ಮಹಾನ್ ಪ್ರಜಾಪ್ರಭುತ್ವವಾದಿ ಎಂಬುದಾಗಿ ನಾನು ನಂಬುತ್ತೇನೆ,” ಎಂದು ಅವರು ಹೇಳಿದರು. ಡೇಟಾ ಹೊಸ ತೈಲ. ಆದರೆ ಪ್ರಮುಖ ವ್ಯತ್ಯಾಸವನ್ನು ಹೊಂದಿದೆ. “ಹೊಸ ತೈಲ ಅಂದರೆ ಡೇಟಾ, ಎಲ್ಲೆಡೆ ಮತ್ತು ಎಲ್ಲರೂ ಉತ್ಪಾದಿಸಬಹುದು ಮತ್ತು ಸೇವಿಸಬಹುದು. ಇದು ಕ್ಷೇತ್ರಗಳು, ಭೌಗೋಳಿಕತೆಗಳು ಮತ್ತು ಆರ್ಥಿಕ ವರ್ಗಗಳಾದ್ಯಂತ ಸಮಾನವಾಗಿ ಮೌಲ್ಯವನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ,” ಎಂದರು.

ಅಂಬಾನಿಯವರ ನಾಯಕತ್ವದಲ್ಲಿ 210 ಶತಕೋಟಿ ಡಾಲರ್ ಮೌಲ್ಯದ ರೀಟೇಲ್​ನಿಂದ-ಸಂಸ್ಕರಿಸುವ ಸಂಘಟಿತ ಸಂಸ್ಥೆಯ ತನಕ ನಡೆಯುತ್ತಿದೆ. ಇದೀಗ ತಂತ್ರಜ್ಞಾನದ ದೊಡ್ಡ ಸಂಸ್ಥೆ ಬೆಳೆಸಲು ಮತ್ತು ಅದರ ಫಾಸಿಲ್ ಇಂಧನ ಆಧಾರಿತ ವ್ಯವಹಾರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಆಕಾಂಕ್ಷೆ ಹೊಂದಿರುವುದರಿಂದ ಡಿಜಿಟಲ್ ಸೇವೆಗಳ ಕಡೆಗೆ ತಿರುಗುತ್ತಿದೆ. ಗೂಗಲ್ ಮತ್ತು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಸೇರಿದಂತೆ ಜಾಗತಿಕ ಸಂಸ್ಥೆಗಳಿಗೆ ಷೇರು ಮಾರಾಟದ ಮೂಲಕ ರಿಲಯನ್ಸ್‌ನ ಡಿಜಿಟಲ್ ಘಟಕವು ಕಳೆದ ವರ್ಷ 27 ಬಿಲಿಯನ್ ಡಾಲರ್ ಸಂಗ್ರಹಿಸಿದೆ.

ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಗೆ ಉತ್ತೇಜನ ನೀಡುವ ಎರಡು ವಿಷಯಗಳನ್ನು ಉದ್ಯಮಿ ಗಮನ ಸೆಳೆದಿದ್ದಾರೆ: ಯುವ ಜನರ ಬೃಹತ್ ಜನಸಂಖ್ಯೆ ಮತ್ತು ಎಲ್ಲ ಭಾರತೀಯ ನಗರಗಳು ಹಾಗೂ ಬಹುತೇಕ 600,000 ಹಳ್ಳಿಗಳಲ್ಲಿ ಡಿಜಿಟಲ್ ಪೈಪ್‌ಲೈನ್‌ನ ಆಳವಾದ ಪಾರಮ್ಯ ಹೊಂದಿರುವ ಬಗ್ಗೆ ತಿಳಿಸಿದ್ದಾರೆ. ಡಿಜಿಟಲ್ ಸೇವೆಗಳ ಮೂಲಕ ಫಿನ್‌ಟೆಕ್, ಶಿಕ್ಷಣ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ ಮತ್ತು ಉದ್ಯಮದಲ್ಲಿ ಭಾರತವು ಉತ್ತಮ ಪ್ರಗತಿ ಸಾಧಿಸಲಿದೆ ಎಂದು ಅಂಬಾನಿ ಹೇಳಿದರು.

ಇದನ್ನೂ ಓದಿ: Blockchain ETF: ಏನಿದು ಬ್ಲಾಕ್​ಚೈನ್ ಇಟಿಎಫ್​? ಇದು ಹೇಗೆ ಬಿಟ್​ಕಾಯಿನ್ ಇಟಿಎಫ್​ಗಿಂತ ಭಿನ್ನ?

Click on your DTH Provider to Add TV9 Kannada