AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಹಬ್ಬಕ್ಕೆ ರಿಲಾಯನ್ಸ್ ಜಿಯೋದಿಂದ ಬರಲಿದೆ ಏರ್​ಫೈಬರ್ ಸರ್ವಿಸ್; ಏನಿದರ ವಿಶೇಷತೆ

Jio Airfiber Service: ರಿಲಾಯನ್ಸ್ ಜಿಯೋದ ವಯರ್ಲೆಸ್ 5ಜಿ ಕನೆಕ್ಷನ್ ಆದ ಏರ್​ಫೈಬರ್ ಸರ್ವಿಸ್ ಗಣೇಶ ಹಬ್ಬವಾದ ಸೆಪ್ಟೆಂಬರ್ 19ರಂದು ಬಿಡುಗಡೆ ಆಗಲಿದೆ. ದೇಶಾದ್ಯಂತ ಇರುವ ಜಿಯೋ 5ಜಿ ನೆಟ್ವರ್ಕ್​ಗಳನ್ನು ಬಳಸಿ ವಯರ್ಲೆಸ್ ಇಂಟರ್ನೆಟ್ ಕನೆಕ್ಷನ್ ಅನ್ನು ಏರ್​ಫೈಬರ್ ಒದಗಿಸುತ್ತದೆ. ರಿಲಾಯನ್ಸ್ ವಾರ್ಷಿಕ ಮಹಾ ಸಭೆಯಲ್ಲಿ ಆರ್​ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ಈ ವಿಚಾರವನ್ನು ತಿಳಿಸಿದ್ದಾರೆ.

ಗಣೇಶ ಹಬ್ಬಕ್ಕೆ ರಿಲಾಯನ್ಸ್ ಜಿಯೋದಿಂದ ಬರಲಿದೆ ಏರ್​ಫೈಬರ್ ಸರ್ವಿಸ್; ಏನಿದರ ವಿಶೇಷತೆ
ಜಿಯೋದ ಏರ್​ಫೈಬರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2023 | 5:13 PM

Share

ಮುಂಬೈ, ಆಗಸ್ಟ್ 28: ರಿಲಾಯನ್ಸ್ ಜಿಯೋದ ಬಹುನಿರೀಕ್ಷೆಯ ಏರ್​ಫೈಬರ್ ಸರ್ವಿಸ್​ನ (Jio AirFiber) ಬಿಡುಗಡೆ ಸಮಯ ನಿಗದಿಯಾಗಿದೆ. ರಿಲಾಯನ್ಸ್​ನ 46ನೇ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಏರ್​ಫೈಬರ್ ಸರ್ವಿಸ್ ಅನ್ನು ಪ್ರಸ್ತಾಪಿಸಿದ್ದು, ಗಣೇಶ ಚತುರ್ಥಿ ಹಬ್ಬದ ದಿನವಾದ ಸೆಪ್ಟೆಂಬರ್ 19ರಂದು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಏರ್​ಫೈಬರ್ ಸೇವೆ ಮೂಲ ಜಿಯೋ ದಿನಕ್ಕೆ ಒಂದೂವರೆ ಲಕ್ಷ ಕನೆಕ್ಷನ್​ಗಳ ವೇಗದಲ್ಲಿ ಒಟ್ಟು 20 ಕೋಟಿಯಷ್ಟು ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ. ‘ಭಾರತದಾದ್ಯಂತ ಇರುವ 5ಜಿ ನೆಟ್ವರ್ಕ್ ಅನ್ನು ಜಿಯೋ ಏರ್​ಫೈಬರ್ ಬಳಸುತ್ತದೆ. ಇದರಿಂದ ದಿನಕ್ಕೆ 1.5 ಲಕ್ಷ ಕನೆಕ್ಷನ್ ಕೊಡಲು ಸಾಧ್ಯವಾಗುತ್ತದೆ,’ ಎಂದು ಮುಕೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ.

ರಿಲಾಯನ್ಸ್ ಜಿಯೋದ ಬ್ರಾಡ್​ಬ್ಯಾಂಡ್ ಸೇವೆಯಾದ ಜಿಯೋಫೈಬರ್ ಸೇವೆಯನ್ನು 1 ಕೋಟಿ ಗ್ರಾಹಕರು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಜಿಯೋ ಏರ್​ಫೈಬರ್ ಸೇವೆಯನ್ನು 20 ಕೋಟಿ ಗ್ರಾಹಕರಿಗೆ ತಲುಪಿಸುವ ಗುರಿ ಇದೆ ಎಂದು ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: ಜಿಯೋ ಭಾರತ್, ಏರ್​ಫೈಬರ್, ಸ್ಮಾರ್ಟ್ ಹೋಮ್, ಇನ್ಷೂರೆನ್ಸ್, ಅನಿಲ ಉತ್ಪಾದನೆ; ರಿಲಾಯನ್ಸ್ ಮಹಾಸಭೆಯ ಮುಖ್ಯಾಂಶಗಳು

ಏನಿದು ಜಿಯೋ ಏರ್​ಫೈಬರ್?

ಜಿಯೋದ ಏರ್​ಫೈಬರ್ ವಯರ್ ಕನೆಕ್ಷನ್ ಇಲ್ಲದೆಯೇ ಹೈ ಸ್ಪೀಡ್ ಇಂಟರ್ನೆಟ್ ಸರ್ವಿಸ್ ನೀಡುತ್ತದೆ. ಫೈಬರ್ ಅಥವಾ ಬ್ರಾಡ್​ಬ್ಯಾಂಡ್ ಮೂಲಕ ಸಿಗುವ ಇಂಟರ್ನೆಟ್​ ವೇಗ ಏರ್​ಫೈಬರ್ ಸರ್ವಿಸ್​ನಲ್ಲಿ ಸಿಗುತ್ತದೆ.

ಇದರ ಬಳಕೆದಾರರು ತಮ್ಮ ಮನೆ ಅಥವಾ ಕಚೇರಿಯಲ್ಲಿ ಟ್ರೂ 5ಜಿ ಬಳಸಿ ತಮ್ಮದೇ ಸ್ವಂತ ವೈಫೈ ಹಾಟ್​ಸ್ಪಾಟ್ ಹೊಂದಬಹುದು. ಗೀಗಾಬಿಟ್ ಸ್ಪೀಡ್​ನ ಇಂಟರ್ನೆಟ್ ಸ್ಪೀಡ್ ಸಿಗುತ್ತದೆ.

ಇದನ್ನೂ ಓದಿ: ರಿಲಾಯನ್ಸ್ ಮಂಡಳಿಗೆ ನೀತಾ ಅಂಬಾನಿ ರಾಜೀನಾಮೆ; ಮಂಡಳಿ ನಿರ್ದೇಶಕ ಸ್ಥಾನಕ್ಕೇರಿದ ಮೂವರು ಮಕ್ಕಳು

ಭಾರತದಲ್ಲಿ ಏರ್​ಫೈಬರ್ ಸರ್ವಿಸ್ ನೀಡುತ್ತಿರುವುದು ಜಿಯೋ ಮೊದಲಲ್ಲ. ಏರ್​ಟೆಲ್ ಸಂಸ್ಥೆ ಎಕ್ಸ್​ಟ್ರೀಮ್ ಏರ್​ಫೈಬರ್ ಸರ್ವಿಸ್ ಬಿಡುಗಡೆ ಮಾಡಿದೆ. ಇದೂ ಕೂಡ ಏರ್​ಟೆಲ್​ನ 5ಜಿ ಪ್ಲಸ್ ನೆಟ್​ವರ್ಕ್ ಬಳಸಿ ವಯರ್ಲೆಸ್ ಆಗಿ ವೇಗದ ಇಂಟರ್ನೆಟ್ ಒದಗಿಸುತ್ತದೆ.

ಇದೇ ವೇಳೆ ಜಿಯೋದ ಏರ್​ಫೈಬರ್ ಸೇವೆ ಬಿಡುಗಡೆ ದಿನಾಂಕ ಗೊತ್ತಾಗಿದೆಯಾದರೂ ಅದರ ಸಬ್​ಸ್ಕ್ರಿಪ್ಷನ್ ದರಗಳೆಷ್ಟು ಎಂಬುದು ಗೊತ್ತಾಗಿಲ್ಲ. ಹಿಂದೆ ಬಂದಿರುವ ವರದಿಗಳ ಪ್ರಕಾರ ಪ್ರಸ್ತುತ ಇರುವ ಮಾರುಕಟ್ಟೆ ಬೆಲೆಗಿಂತ ಶೇ. 20ರಷ್ಟು ಕಡಿಮೆ ದರದಲ್ಲಿ ಜಿಯೋ ಏರ್​ಫೈಬರ್ ಸೇವೆ ಸಿಗಲಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ