ಜೀವ ಮತ್ತು ವೈದ್ಯಕೀಯ ವಿಮೆ ಮೇಲಿನ ಶೇ.18ರಷ್ಟು GST ತೆಗೆದುಹಾಕಿ, ವಿತ್ತ ಸಚಿವೆಗೆ ಗಡ್ಕರಿ ಪತ್ರ
ಜೀವ ಮತ್ತು ವೈದ್ಯಕೀಯ ವಿಮೆಗಳ ಮೇಲೆ ವಿಧಿಸಿರುವ ಶೇಕಾಡ 18ರಷ್ಟು ಜಿಎಸ್ಟಿ ತೆರಿಗೆಯನ್ನು ತೆಗೆದು ಹಾಕಬೇಕು ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಈ ಕುರಿತು ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಗಡ್ಕರಿ ಅವರು ನಿರ್ಮಾಲ ಸೀತಾರಾಮನ್ ಏನು ಮನವಿ ಮಾಡಿದ್ದಾರೆ. ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾರೆ.
ಜೀವ ಮತ್ತು ವೈದ್ಯಕೀಯ ವಿಮೆಗಳಿಗೆ ಪಾವತಿಸುವ ಪ್ರೀಮಿಯಂಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಹಿಂಪಡೆಯುವಂತೆ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಇದೀಗ ಈ ವಿಚಾರವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕ್ರಮವು ವಿಮಾದಾರರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಹಾಗೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ವಿಮಾ ಬಗ್ಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ನಾಗ್ಪುರ ಎಲ್‌ಐಸಿ ಒಕ್ಕೂಟದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿರುವ ಗಡ್ಕರಿ, ಜೀವ ವಿಮಾ ಪ್ರೀಮಿಯಂ ಮೇಲೆ ವಿಧಿಸುವ ಶೇಕಾಡ 18ರಷ್ಟು ಪರೋಕ್ಷ ತೆರಿಗೆಯು ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆಯನ್ನು ವಿಧಿಸುತ್ತದೆ ಎಂದು ಹೇಳಿದ್ದಾರೆ. ನಾಗ್ಪುರ ವಿಭಾಗೀಯ ಜೀವ ವಿಮಾ ನಿಗಮದ ನೌಕರರ ಸಂಘ, ನಾಗ್ಪುರ, ವಿಮಾ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಲಿಸುವಾಗ ಸಚಿವರು, ವಿಮಾ ನಿಗಮದ ನೌಕರರ ಸಮಸ್ಯೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಗಡ್ಕರಿ ಅವರ ಮುಂದೆ ವಿಮಾ ನಿಗಮದ ನೌಕರರು, ಜೀವನ ಮತ್ತು ವೈದ್ಯಕೀಯ ಮೇಲಿನ ಶೇಕಾಡ 18ರಷ್ಟು GSTಯನ್ನು ವಾಪಸ್ಸು ಪಡೆಯುಂತೆ ಒತ್ತಾಯಿಸಿದ್ದಾರೆ. ಜೀವ ವಿಮಾ ಪ್ರೀಮಿಯಂ ಮೇಲೆ GST ವಿಧಿಸುವ ಮೂಲಕ ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸದಂತೆ. ಅನಿಶ್ಚಿತತೆಯ ಅಪಾಯಕ್ಕೆ ಒಳಗಾಗುವ ವ್ಯಕ್ತಿಗೆ ತೆರಿಗೆಯನ್ನು ವಿಧಿಸಬಾರದು ಎಂದು ಒಕ್ಕೂಟ ಹೇಳಿದೆ.
ಜಿಎಸ್ಟಿ ವಿಧಿಸಿದ್ದರೆ ವಿಮಾ ಮಾಡಲು ಜನರು ಮುಂದೆ ಬರುವುದಿಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತದೆ. ಹಾಗಾಗಿ ವಿಮಾ ಮೇಲಿನ ತೆರಿಗೆಯನ್ನು ತೆಗೆದು ಹಾಕುವಂತೆ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಭಾರತದಲ್ಲಿ ವಿಮೆ ಮತ್ತು ಪಿಂಚಣಿ ನಿಧಿ ಆಸ್ತಿಗಳ GDP ಯ ಶೇಕಾಡ 19 ಮತ್ತು ಶೇಕಾಡ 5 ಮೇಲೆ ನಿಂತಿದೆ. ಭಾರತಕ್ಕೆ ಹೋಲಿಸಿದರೆ USA ನಲ್ಲಿ ಶೇಕಾಡ 52 ಮತ್ತು ಶೇಕಾಡ 122 ಮತ್ತು UK ನಲ್ಲಿ ಶೇಕಾಡ 112 ಮತ್ತು 80 ಇದೆ ಎಂದು ಹೇಳಿದ್ದಾರೆ.
ಗಡ್ಕರಿ ಪತ್ರದಲ್ಲಿ ಲೈಫ್ ಇನ್ಶೂರೆನ್ಸ್ ಮೂಲಕ ಉಳಿತಾಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ, ಆರೋಗ್ಯ ವಿಮಾ ಪ್ರೀಮಿಯಂಗೆ ಮರು-ಪರಿಚಯ ಮತ್ತು ಸಾರ್ವಜನಿಕ ವಲಯದ ಸಾಮಾನ್ಯ ವಿಮಾಗೆ ಜಿಎಸ್ಟಿ ಹಾಕುವ ಬಗ್ಗೆ ವಿಮಾ ಕಂಪನಿಗಳು ಕಳವಳ ವ್ಯಕ್ತಪಡಿಸಿದೆ. ಹಾಗೂ ಇದು ಹಿರಿಯ ನಾಗರಿಕರಿಗೆ ತೊಂದರೆಯನ್ನು ಉಂಟು ಮಾಡಬಹುದು. ಹಾಗಾಗಿ ಈ ದೃಷ್ಟಿಯಿಂದ ಜೀವನ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವ ಸಲಹೆಯನ್ನು ಗಡ್ಕರಿ ಅವರು ಪತ್ರದ ಮೂಲಕ ಹಣಕಾಸು ಸಚಿವರಿಗೆ ನೀಡಿದ್ದಾರೆ.
ಇದನ್ನೂ ಓದಿ: ಆಗಸ್ಟ್ 1ರಿಂದ ಹೊಸ ನಿಯಮ ಜಾರಿ, ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ
ವಿಮಾ ಮೇಲಿನ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಮರುಪರಿಶೀಲನೆ ಮಾಡುವ ಅಗತ್ಯ ಇದೆ ಎಂದು ಮಾಜಿ ರಾಜ್ಯ ಸಚಿವ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. ವಿಶೇಷವಾಗಿ ಆರೋಗ್ಯ ಮತ್ತು ಅವಧಿ ವಿಮೆ ಈ ಕ್ರಮವನ್ನು ತೆಗೆದುಕೊಳ್ಳಬೇಕಿದೆ. 40-50,000 ಕೋಟಿ ರೂ.ಗೆ ನಿಗದಿಪಡಿಸಲಾದ ವಿಮಾ ಉದ್ಯಮದ ಬಂಡವಾಳ ಅಗತ್ಯತೆಗಳನ್ನು ಪೂರೈಸಲು ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ‘ಆನ್-ಟ್ಯಾಪ್’ ಬಾಂಡ್‌ಗಳನ್ನು ನೀಡಬಹುದು ಎಂದು ಸಲಹೆ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ