Stock Market Timings: ಏಪ್ರಿಲ್ 18ರಿಂದ ಬದಲಾಗಲಿದೆ ಆರ್​ಬಿಐ ನಿಯಂತ್ರಿಸುವ ಎಲ್ಲ ಮಾರುಕಟ್ಟೆಗಳ ವಹಿವಾಟಿನ ಸಮಯ

| Updated By: Srinivas Mata

Updated on: Apr 18, 2022 | 11:36 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಿತ ಮಾರುಕಟ್ಟೆಗಳ ವಹಿವಾಟು ಸಮಯ ಏಪ್ರಿಲ್ 18ರ ಸೋಮವಾರದಿಂದ ಬದಲಾವಣೆ ಆಗಲಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Stock Market Timings: ಏಪ್ರಿಲ್ 18ರಿಂದ ಬದಲಾಗಲಿದೆ ಆರ್​ಬಿಐ ನಿಯಂತ್ರಿಸುವ ಎಲ್ಲ ಮಾರುಕಟ್ಟೆಗಳ ವಹಿವಾಟಿನ ಸಮಯ
ಸಾಂದರ್ಭಿಕ ಚಿತ್ರ
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಹಣದ ಮಾರುಕಟ್ಟೆಯೂ ಒಳಗೊಂಡಂತೆ ಆರ್​ಬಿಐ ನಿಯಂತ್ರಣಕ್ಕೆ ಬರುವ ಎಲ್ಲ ಮಾರುಕಟ್ಟೆಗಳಲ್ಲಿ ಕೊರೊನಾ ಸಾಂಕ್ರಾಮಿಕಕ್ಕೂ ಮುಂಚಿನ ವಹಿವಾಟಿನ ಸಮಯವನ್ನು ತರಲಾಗಿದೆ. ಆರ್‌ಬಿಐ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಇಂದಿನಿಂದ (ಏಪ್ರಿಲ್ 18, 2022) ಬೆಳಗ್ಗೆ 9 ಗಂಟೆಯಿಂದ ವಹಿವಾಟು ಆರಂಭವಾಗಲಿದೆ. ಸದ್ಯಕ್ಕೆ ಮಾರುಕಟ್ಟೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿವೆ. ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಆರ್‌ಬಿಐ, “ಜನರ ಸಂಚಾರ ಮತ್ತು ಕಚೇರಿಗಳ ಕಾರ್ಯನಿರ್ವಹಣೆ ಮೇಲಿನ ನಿರ್ಬಂಧಗಳನ್ನು ಗಣನೀಯವಾಗಿ ಸಡಿಲಿಸುವುದರೊಂದಿಗೆ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳ ಆರಂಭಿಕ ಸಮಯವನ್ನು ಅವುಗಳ ಪೂರ್ವ-ಸಾಂಕ್ರಾಮಿಕ ಸಮಯ 9ಕ್ಕೆ ಶುರು ಮಾಡಲು ನಿರ್ಧರಿಸಲಾಗಿದೆ,” ಎಂದು ತಿಳಿಸಿದೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಸ್ಥಳಾಂತರ ಮತ್ತು ಹೆಚ್ಚಿನ ಆರೋಗ್ಯದ ಅಪಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್‌ಬಿಐ ನಿಯಂತ್ರಿಸುವ ವಿವಿಧ ಮಾರುಕಟ್ಟೆಗಳ ವಹಿವಾಟಿನ ಸಮಯವನ್ನು ಏಪ್ರಿಲ್ 7, 2020ರಂದು ಬದಲಾಯಿಸಲಾಯಿತು.

ಈ ಮಾರುಕಟ್ಟೆಗಳನ್ನು ಆರ್‌ಬಿಐ ನಿಯಂತ್ರಿಸುತ್ತದೆ
ಕಾಲ್ / ನೋಟಿಸ್ / ಟರ್ಮ್ ಹಣ; ಸರ್ಕಾರಿ ಸೆಕ್ಯೂರಿಟಿಗಳಲ್ಲಿ ಮಾರುಕಟ್ಟೆ ರೆಪೋ; ಸರ್ಕಾರಿ ಸೆಕ್ಯೂರಿಟಿಗಳಲ್ಲಿ ತ್ರಿಪಕ್ಷೀಯ ರೆಪೊ; ಕಮರ್ಷಿಯಲ್ ಪೇಪರ್ ಮತ್ತು ಠೇವಣಿ ಪ್ರಮಾಣಪತ್ರಗಳು; ಕಾರ್ಪೊರೇಟ್ ಬಾಂಡ್‌ಗಳಲ್ಲಿ ರೆಪೊ; ಸರ್ಕಾರಿ ಸಾಲಪತ್ರಗಳು (ಕೇಂದ್ರ ಸರ್ಕಾರದ ಸಾಲ ಪತ್ರಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಟ್ರೆಷರಿ ಬಿಲ್​ಗಳು); ವಿದೇಶಿ ಕರೆನ್ಸಿ (FCY)/ಭಾರತೀಯ ರೂಪಾಯಿ (INR) ವಹಿವಾಟುಗಳು, ವಿದೇಶೀ ವಿನಿಮಯ ಉತ್ಪನ್ನಗಳು ಸೇರಿದಂತೆ ರೂಪಾಯಿ ಬಡ್ಡಿದರದ ಉತ್ಪನ್ನಗಳನ್ನು ನಿಯಂತ್ರಿಸುತ್ತದೆ.

ಪರಿಷ್ಕೃತ ಸಮಯ ಹೀಗಿದೆ
– ಕಾಲ್ / ನೋಟಿಸ್ / ಟರ್ಮ್ ಹಣ – ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ವರೆಗೆ

– ಸರ್ಕಾರಿ ಸಾಲಪತ್ರಗಳಲ್ಲಿ ಮಾರುಕಟ್ಟೆ ರೆಪೋ – ಬೆಳಗ್ಗೆ 9ರಿಂದ ಮಧ್ಯಾಹ್ನ 2.30 ರವರೆಗೆ

– ಸರ್ಕಾರಿ ಸಾಲಪತ್ರಗಳಲ್ಲಿ ಟ್ರೈ-ಪಾರ್ಟಿ ರೆಪೋ – ಬೆಳಗ್ಗೆ 9ರಿಂದ ಮಧ್ಯಾಹ್ನ 3 ರವರೆಗೆ

– ಕಮರ್ಷಿಯಲ್ ಪೇಪರ್ ಮತ್ತು ಠೇವಣಿ ಪ್ರಮಾಣಪತ್ರಗಳು – ಬೆಳಗ್ಗೆ 9ರಿಂದ ಮಧ್ಯಾಹ್ನ 3.30

– ಕಾರ್ಪೊರೇಟ್ ಬಾಂಡ್‌ಗಳಲ್ಲಿ ರೆಪೋ – ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ವರೆಗೆ

– ಸರ್ಕಾರಿ ಸಾಲಪತ್ರಗಳು (ಕೇಂದ್ರ ಸರ್ಕಾರದ ಸೆಕ್ಯೂರಿಟಿಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಟೆಷರಿ ಬಿಲ್‌ಗಳು) – ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ವರೆಗೆ

– ವಿದೇಶಿ ಕರೆನ್ಸಿ (FCY)/ಭಾರತೀಯ ರೂಪಾಯಿ (INR) ವಿದೇಶೀ ವಿನಿಮಯ ಉತ್ಪನ್ನಗಳು ಸೇರಿದಂತೆ ವ್ಯಾಪಾರಗಳು – ಬೆಳಗ್ಗೆ 9ರಿಂದ ಮಧ್ಯಾಹ್ನ 3.30 ರವರೆಗೆ

– ರೂಪಾಯಿ ಬಡ್ಡಿ ದರದ ಉತ್ಪನ್ನಗಳು – ಬೆಳಗ್ಗೆ 9ರಿಂದ ಮಧ್ಯಾಹ್ನ 3.30 ರವರೆಗೆ

ಇದನ್ನೂ ಓದಿ: ಕೊವಿಡ್ ಸಂಬಂಧಿತ ಲಿಕ್ವಿಡಿಟಿ ಕ್ರಮಗಳೆಲ್ಲವೂ ಕೊನೆ ದಿನಾಂಕದೊಂದಿಗೆ ಬಂದವು: ಆರ್‌ಬಿಐ ಗವರ್ನರ್ ದಾಸ್