Sign In

By signing in or creating an account, you agree with Associated Broadcasting Company's Terms & Conditions and Privacy Policy.

RIL Q4 Results: ಆರ್​ಐಎಲ್ ಹಣಕಾಸು ವರದಿ ಬಿಡುಗಡೆ; ಜಿಯೋ ಆದಾಯ, ಲಾಭದಲ್ಲಿ ಅಲ್ಪ ಹೆಚ್ಚಳ; ನೋಡಿ ವಿವರ

Reliance Jio Shows Rise In Profit for Q4: 2023ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಸಂಸ್ಥೆ ಭರ್ಜರಿ ಆದಾಯ ಪಡೆದಿದೆ.

RIL Q4 Results: ಆರ್​ಐಎಲ್ ಹಣಕಾಸು ವರದಿ ಬಿಡುಗಡೆ; ಜಿಯೋ ಆದಾಯ, ಲಾಭದಲ್ಲಿ ಅಲ್ಪ ಹೆಚ್ಚಳ; ನೋಡಿ ವಿವರ
ಮುಕೇಶ್ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 21, 2023 | 6:29 PM

ಮುಂಬೈ: ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ (RIL- Reliance Industries Ltd) ಹಾಗೂ ರಿಲಾಯನ್ಸ್ ಗ್ರೂಪ್​ನ ವಿವಿಧ ಕಂಪನಿಗಳ ಕೊನೆಯ ತ್ರೈಮಾಸಿಕದ ಹಣಕಾಸು ವರದಿ (RIL Q4 Results) ಪ್ರಕಟವಾಗಿದೆ. 2023ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ರಿಲಾಯನ್ಸ್ ಜಿಯೋ ಇನ್ಫೋಕಾಮ್ (Jio Platforms) ಸಂಸ್ಥೆ ಭರ್ಜರಿ ಆದಾಯ ಪಡೆದಿದೆ. ರಿಲಾಯನ್ಸ್ ರೀಟೇಲ್ ಸಂಸ್ಥೆಯೂ ಕೂಡ ಉತ್ತಮ ಲಾಭವನ್ನು ತೋರಿಸಿದೆ. ಆದರೆ, ಹಿಂದಿನ ಅವಧಿಗೆ ಹೋಲಿಸಿದರೆ ಆದಾಯ ಮತ್ತು ಲಾಭದಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ ಎಂಬುದೂ ಗಮನಾರ್ಹ. ಆರ್​​ಐಎಲ್ ವರದಿ ಪ್ರಕಟವಾದ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್​ನ ಷೇರು ಬೆಲೆ ಏರಿಕೆ ಆಗತೊಡಗಿದೆ. ಕಳೆಗುಂದಿದ್ದ ಷೇರು ಮಾರುಕಟ್ಟೆಗಳಿಗೆ ರಿಲಾಯನ್ಸ್ ಹಣಕಾಸು ವರದಿ ಶುಕ್ರವಾರ ಒಂದಿಷ್ಟು ಆಶಯ ತುಂಬಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆಯ ಷೇರು ಬೆಲೆ ಶುಕ್ರವಾರ ಸಂಜೆಯ ವೇಳೆಗೆ 2,351 ರುಪಾಯಿಗೆ ಏರಿದೆ.

ರಿಲಾಯನ್ಸ್ ಜಿಯೋ ಆದಾಯ ಮತ್ತು ಲಾಭದಲ್ಲಿ ಹೆಚ್ಚಳ

2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ರಿಲಾಯನ್ಸ್ ಜಿಯೋ 23,394 ಕೋಟಿ ರೂ ಆದಾಯ ತೋರಿಸಿದೆ. ಹಿಂದಿನ ಕ್ವಾರ್ಟರ್​ನಲ್ಲಿ ಅದರ ಆದಾಯ 22,998 ಕೋಟಿ ರೂ ಇತ್ತು.

ಜಿಯೋದ ನಿವ್ವಳ ಲಾಭ ಆ ಕ್ವಾರ್ಟರ್​ನಲ್ಲಿ 4,716 ಕೋಟಿ ರೂ ಇದೆ. ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2022 ಅಕ್ಟೋಬರ್ಡಿಸೆಂಬರ್ ತ್ರೈಮಾಸಿಕದಲ್ಲಿ 4,638 ಕೋಟಿ ರೂ ಇತ್ತು. 2021-22ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಜಿಯೋ ನಿವ್ವಳ ಆದಾಯ 4,173 ಕೋಟಿ ರೂ ಇತ್ತು. ಒಟ್ಟಾರೆ ಜಿಯೋ ಆದಾಯ ಮತ್ತು ಲಾಭ ಎರಡರಲ್ಲೂ ಉತ್ತಮ ಪ್ರಗತಿಯಾಗಿದೆ.

ಇದನ್ನೂ ಓದಿBest Companies: ಅತ್ಯುತ್ತಮ ಕೆಲಸದ ವಾತಾವರಣ: ಟಿಸಿಎಸ್ ಪ್ರಥಮ; ಬೆಂಗಳೂರಲ್ಲೇ ಹೆಚ್ಚಿವೆ ಬೆಸ್ಟ್ ಕಂಪನಿಗಳು; ಲಿಂಕ್ಡ್​ಇನ್ ರಿಪೋರ್ಟ್

ಇನ್ನು, ಇಬಿಐಟಿಡಿಎಯಲ್ಲೂ ಜಿಯೋ ಭರ್ಜರಿ ಲಾಭ ತೋರಿಸಿದೆ. ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ ಜಿಯೋದ ಇಬಿಐಟಿಡಿಎ 12,210 ಕೋಟಿ ರೂ ಇದೆ. ಹಿಂದಿನ ಕ್ವಾರ್ಟರ್​ನಲ್ಲಿ ಇದು 12,009 ಕೋಟಿ ರೂ ಇತ್ತು.

ಇಬಿಐಟಿಡಿಎ ಎಂದರೆ ತೆರಿಗೆ ಹೇರಿಕೆ ಆಗದ ಮುಂಚಿನ ಲಾಭದ ಪ್ರಮಾಣ. ನಿವ್ವಳ ಲಾಭ ಎಂದರೆ ತೆರಿಗೆ ಇತ್ಯಾದಿ ಎಲ್ಲಾ ಕಡಿತವನ್ನೂ ಕಳೆದ ಬಳಿಕ ಉಳಿಯುವ ಲಾಭ. ಇಲ್ಲಿ ಜಿಯೋದ ಒಟ್ಟಾರೆ ಲಾಭ 12,210 ಕೋಟಿ ರೂ ಇದೆ. ನಿವ್ವಳ ಲಾಭ 4,716 ಕೋಟಿ ರೂ ಇದೆ. 7 ಕೋಟಿಗೂ ಹೆಚ್ಚು ಹಣವನ್ನು ಜಿಯೋ ತೆರಿಗೆ ಮತ್ತಿತರ ವೆಚ್ಚಕ್ಕೆ ಪಾವತಿಸಿದಂತಿದೆ.

ಆರ್​ಐಎಲ್ ಲಾಭ:

ಇನ್ನು, ರಿಲಾಯನ್ಸ್ ಇಂಡಸ್ಟ್ರೀಸ್​ನ ಪೆಟ್ರೋಕೆಮಿಕಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ ಈ ಬಾರಿ ಇಲ್ಲ ಎನ್ನಲಾಗುತ್ತಿದೆ. ಸರ್ಕಾರ ವಿಂಡ್​ಫಾಲ್ ಟ್ಯಾಕ್ಸ್ ಹೆಚ್ಚಿಸಿದ್ದರಿಂದ ಆರ್​ಐಎಲ್​ನ ನಿವ್ವಳ ಆದಾಯದಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. ತೆರಿಗೆ ಹೊರತುಪಡಿಸಿದ ಇಬಿಐಟಿಡಿಎಯಲ್ಲಿ ಶೇ. 20ರಷ್ಟು ಏರಿಕೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿSalary Hike: 18 ತಿಂಗಳಲ್ಲಿ ಮೂರನೇ ವೇತನ ಹೆಚ್ಚಳ: ಈ ಐಟಿ ಕಂಪನಿಯು ಇತರರಿಗೆ ಮಾದರಿಯಾಗುತ್ತಿದೆ

ರಿಲಾಯನ್ಸ್ ಕಂಪನಿಗಳು

ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆಯ ಅಡಿಯಲ್ಲಿ ಹಲವು ಕಂಪನಿಗಳಿವೆ. ರಿಲಾಯನ್ಸ್ ಜಿಯೋ ಪ್ಲಾಟ್​ಫಾರ್ಮ್ಸ್, ರಿಲಾಯನ್ಸ್ ರೀಟೇಲ್, ರಿಲಾಯನ್ಸ್ ಪೆಟ್ರೋಲಿಯಂ, ನೆಟ್ವರ್ಕ್18 ಗ್ರೂಪ್, ಅಲೋಕ್ ಇಂಡಸ್ಟ್ರೀಸ್, ರಿಲಾಯನ್ಸ್ ಫೌಂಡೇಶನ್, ಇಂಡಿಯಾವಿನ್ ಸ್ಪೋರ್ಟ್ಸ್, ರಿಲಾಯನ್ಸ್ ಗ್ಲೋಬಲ್ ಕಾರ್ಪೊರೆಟ್ ಸೆಕ್ಯೂರಿಟಿ ಸಂಸ್ಥೆಗಳು ಆರ್​ಐಎಲ್​ನ ಅಂಗ ಕಂಪನಿಗಳಾಗಿವೆ.

ಜಿಯೋ ಪ್ಲಾಟ್​ಫಾರ್ಮ್​ನ ವ್ಯವಹಾರಗಳನ್ನು ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ನೋಡಿಕೊಳ್ಳುತ್ತಿದ್ದಾರೆ. ರಿಲಾಯನ್ಸ್ ರೀಟೇಲ್ ಬ್ಯುಸಿನೆಸ್ ಅನ್ನು ಇಶಾ ಅಂಬಾನಿಯ ಜವಾಬ್ದಾರಿಗೆ ಕೊಡಲಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:23 pm, Fri, 21 April 23