ಸಚಿನ್ ತೆಂಡೂಲ್ಕರ್ ಬೆಂಬಲಿತ ಕಂಪನಿಯಿಂದ ಸೆಮಿಕಂಡಕ್ಟರ್ ಫ್ಯಾಕ್ಟರಿ ಸ್ಥಾಪನೆಗೆ 5,000 ಕೋಟಿ ರೂ ಹೂಡಿಕೆ

|

Updated on: Mar 27, 2024 | 2:19 PM

Sachin Tendulkar backed RRP Electronics Investing In Semiconductor Facility: ಮಹಾರಾಷ್ಟ್ರ ಮೂಲದ ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ನವಿ ಮುಂಬೈನಲ್ಲಿ 25,000 ಚದರಡಿ ವಿಸ್ತೀರ್ಣ ಪ್ರದೇಶದಲ್ಲಿ ಬೃಹತ್ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿದೆ. ಮುಂದಿನ ಐದು ವರ್ಷದಲ್ಲಿ ಈ ಘಟಕದ ಮೇಲೆ ಸಂಸ್ಥೆ 5,000 ಕೋಟಿ ರೂ ಹೂಡಿಕೆ ಮಾಡಲಿದೆ. ಇದು ಆರಂಭಿಕ ಹಂತದ ಹೂಡಿಕೆಯಾಗಲಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹೂಡಿಕೆ ಮಾಡುವ ನಿರೀಕ್ಷೆ ಇದೆ. ಸಚಿನ್ ತೆಂಡೂಲ್ಕರ್ ಈ ಆರ್​​ಆರ್​ಪಿ ಎಲೆಕ್ಟ್ರಾನಿಕ್ಸ್​ನ ಪ್ರಮುಖ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಬೆಂಬಲಿತ ಕಂಪನಿಯಿಂದ ಸೆಮಿಕಂಡಕ್ಟರ್ ಫ್ಯಾಕ್ಟರಿ ಸ್ಥಾಪನೆಗೆ 5,000 ಕೋಟಿ ರೂ ಹೂಡಿಕೆ
ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್
Follow us on

ಮುಂಬೈ, ಮಾರ್ಚ್ 27: ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ನವಿ ಮುಂಬೈನಲ್ಲಿ ಬೃಹತ್ ಸೆಮಿಕಂಡಕ್ಟರ್ ಘಟಕವನ್ನು (semiconductor manufacturing) ಸ್ಥಾಪಿಸುತ್ತಿದೆ. ಕಳೆದ ವಾರ (ಮಾರ್ಚ್ 23) 25,000 ಚದರಡಿ ವಿಸ್ತೀರ್ಣದಲ್ಲಿ ಸೆಮಿಕಂಡಕ್ಟರ್ ತಯಾರಕಾ ಘಟಕವನ್ನು ಅನಾವರಣಗೊಳಿಸಲಾಗಿತ್ತು. ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ರಾಜೇಂದ್ರ ಚೋದಾನಕರ್, ನ್ಯೂಕ್ಲಿಯಾರ್ ಸೈಂಟಿಸ್ಟ್ ಅನಿಲ್ ಕಾಕೋಡ್ಕರ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಚಿನ್ ತೆಂಡೂಲ್ಕರ್ ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್​ನ ಪ್ರಮುಖ ಹೂಡಿಕೆದಾರರಾಗಿದ್ದಾರೆ.

ನವಿ ಮುಂಬೈನಲ್ಲಿರುವ ಈ ಘಟಕವು ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಕಾರ್ಯಕ್ಕೆ ಬಳಕೆ ಆಗಲಿದೆ. ಮುಂಬರುವ ದಿನಗಳಲ್ಲಿ ಪರಿಪೂರ್ಣವಾದ ಆರ್ ಅಂಡ್ ಡಿ ಕೇಂದ್ರ, ಫ್ಯಾಬ್ ಫೌಂಡ್ರಿ, ಮಲ್ಟಿಲೈನ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಘಟಕ ಇತ್ಯಾದಿ ಸ್ಥಾಪಿಸುವ ಗುರಿ ಇಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟಾರೆ ಈ ಯೋಜನೆಗಳಿಗೆ ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್ 5,000 ಕೋಟಿ ರೂ ಹೂಡಿಕೆ ಮಾಡಲಿದೆ.

ಇದನ್ನೂ ಓದಿ: ಯಶಸ್ವಿ ಉದ್ಯಮಿ ಬಾಬಾ ಕಲ್ಯಾಣಿ ಆಸ್ತಿ ಪಾಲಿಗೆ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಕುಟುಂಬ ಸದಸ್ಯರು

‘ಮೊದಲ ಹಂತದಲ್ಲಿ ಮುಂದಿನ ಐದು ವರ್ಷದಲ್ಲಿ 5,000 ಕೋಟಿ ರೂ ಆರಂಭಿಕ ಹೂಡಿಕೆ ಮಾಡಲು ಸಂಸ್ಥೆ ಬದ್ಧವಾಗಿದೆ. ಎರಡನೇ ಹಂತದಲ್ಲೂ ಹೂಡಿಕೆಗೆ ಬದ್ಧವಾಗಿದೆ’ ಎಂದು ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್ ನವಿ ಮುಂಬೈನಲ್ಲಿ ಸ್ಥಾಪಿಸಲಿರುವುದು ಮಹಾರಾಷ್ಟ್ರದ ಮೊದಲ ಸೆಮಿಕಂಡಕ್ಟರ್ ಘಟಕವಾಗಲಿದೆ. ‘ನಾವು ಬಹಳ ಉತ್ತಮ ಕಾಲಘಟ್ಟದಲ್ಲಿ ಇದದೇವೆ. ಭವಿಷ್ಯದಲ್ಲಿ ಜಾಗತಿಕವಾಗಿ ಸಕಾರಾತ್ಮಕವಾಗಿ ಪ್ರಭಾವ ಬೀರುವಂತಹ ವಲಯಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ,’ ಎಂದು ರಾಜೇಂದ್ರ ಚೋದಾನಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೇಜಾನ್​ನಲ್ಲಿ ಮಾರಾಟ ವಂಚನೆ ತಡೆಯಲು 15,000 ಮಂದಿ ಪರಿಣಿತರ ನೇಮಕ; 10,000 ಕೋಟಿ ರೂ ವೆಚ್ಚ

ಎಸ್​ಆರ್​ಟಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್

ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್​ನಲ್ಲಿ ಹೂಡಿಕೆ ಮಾಡಿರುವ ಪ್ರಮುಖರಲ್ಲಿ ಸಚಿನ್ ತೆಂಡೂಲ್ಕರ್ ಒಬ್ಬರು. ಈ ಸಂಸ್ಥೆಯ ಕೈಂಕರ್ಯಗಳ ಭಾಗವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್, ಇದೊಂದಷ್ಟೇ ಅಲ್ಲ ಬೇರೆ ಕೆಲ ವ್ಯವಹಾರಗಳನ್ನು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾದುದು ಎಸ್​ಆರ್​ಟಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈ ಲಿ ಸಂಸ್ಥೆ. ಕ್ರೀಡೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳ ಮೂಲಕ ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಸಹಾಯವಾಗುತ್ತದೆ ಈ ಸಂಸ್ಥೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ