ಬ್ಯಾಂಕಲ್ಲಿ ಕ್ಲೇಮ್ ಆಗದ 67,000 ಕೋಟಿ ರೂ ಹಣ ಆರ್​ಬಿಐನ ಡಿಇಎ ಫಂಡ್​ಗೆ ವರ್ಗಾವಣೆ; ಗ್ರಾಹಕರಿಗೆ ಸಿಗಲ್ವಾ ಹಣ?

How to claim money from dormant accounts: ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಗ್ರಾಹಕರ ಡೆಪಾಸಿಟ್ ಹಣವನ್ನು ಆರ್​ಬಿಐನ ಡಿಇಎ ಫಂಡ್​ಗೆ ರವಾನೆ ಮಾಡಲಾಗುತ್ತದೆ. ಈ ರೀತಿ 2025ರ ಜೂನ್ 30ರವರೆಗೆ 67,000 ಕೋಟಿ ರೂ ಹಣ ವರ್ಗಾವಣೆ ಆಗಿದೆ ಎಂದು ಸರ್ಕಾರದ ದತ್ತಾಂಶ ಹೇಳುತ್ತಿದೆ. ಸರ್ಕಾರಿ ಬ್ಯಾಂಕುಗಳಿಂದಲೇ 58,000 ಕೋಟಿಗೂ ಅಧಿಕ ಮೊತ್ತ ಈ ಫಂಡ್​ಗೆ ವರ್ಗಾವಣೆ ಆಗಿದೆ.

ಬ್ಯಾಂಕಲ್ಲಿ ಕ್ಲೇಮ್ ಆಗದ 67,000 ಕೋಟಿ ರೂ ಹಣ ಆರ್​ಬಿಐನ ಡಿಇಎ ಫಂಡ್​ಗೆ ವರ್ಗಾವಣೆ; ಗ್ರಾಹಕರಿಗೆ ಸಿಗಲ್ವಾ ಹಣ?
ಆರ್​ಬಿಐ

Updated on: Jul 28, 2025 | 6:55 PM

ನವದೆಹಲಿ, ಜುಲೈ 28: ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ (Unclaimed deposit) ದೊಡ್ಡದಿದೆ. ಬೇರೆ ಬೇರೆ ಕಾರಣಗಳಿಗೆ ಗ್ರಾಹಕರು ಈ ಹಣವನ್ನು ಹಿಂಪಡೆದಿರುವುದಿಲ್ಲ. ಇವುಗಳಲ್ಲಿ 67,000 ಕೋಟಿ ರೂ ಮೊತ್ತದ ಡೆಪಾಸಿಟ್​​ಗಳನ್ನು ಆರ್​ಬಿಐನ ಡಿಇಎ ಫಂಡ್​ಗೆ (RBI‘s DEA fund) ರವಾನೆ ಮಾಡಲಾಗಿದೆ. ಇವತ್ತು ಸರ್ಕಾರವು ಸಂಸತ್ತಿಗೆ ನೀಡಿರುವ ಮಾಹಿತಿಯಿಂದ ಈ ಅಂಶ ಬೆಳಕಿಗೆ ಬಂದಿದೆ. ಈ ದತ್ತಾಂಶದ ಪ್ರಕಾರ ಜೂನ್ 30ರವರೆಗೆ ಭಾರತೀಯ ಬ್ಯಾಂಕುಗಳು 67,000 ಕೋಟಿ ರೂ ಮೊತ್ತದಷ್ಟಿರುವ ಅನ್​ಕ್ಲೇಮ್ಡ್ ಡೆಪಾಸಿಟ್​​ಗಳನ್ನು ಡಿಇಎ ಫಂಡ್​ಗೆ ಟ್ರಾನ್ಸ್​ಫರ್ ಮಾಡಿವೆಯಂತೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೇ ಬ್ಯಾಂಕು 19,329 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಿದೆ. ಎಸ್​ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳಿಂದ ಒಟ್ಟಾರೆ 58,330 ಕೋಟಿ ರೂ ರವಾನೆಯಾಗಿದೆ. ವರ್ಗಾವಣೆ ಆದ ಹಣದಲ್ಲಿ ಹೆಚ್ಚಿನವು ಸರ್ಕಾರಿ ಬ್ಯಾಂಕುಗಳಿಂದಲೇ ಹೋಗಿವೆ.

ಇದನ್ನೂ ಓದಿ: ಬೆಂಗಳೂರಿನ ಎದಿರಿಯಲ್​ಎಕ್ಸ್​ನಿಂದ ವಿಶ್ವದ ಮೊದಲ ಪೂರ್ಣ ರೀಯೂಸಬಲ್ ರಾಕೆಟ್; ಇಲಾನ್ ಮಸ್ಕ್​ಗೂ ಸಾಧ್ಯವಾಗದ ಕೆಲಸ… ಇದು ರಿಯಲ್

ಏನಿದು ಕ್ಲೇಮ್ ಆಗದ ಹಣ?

ಆರ್​ಬಿಐ ನಿಯಮಾವಳಿ ಪ್ರಕಾರ ಯಾವುದೇ ಬ್ಯಾಂಕಲ್ಲಿ ಹತ್ತು ವರ್ಷ ಕಾಲ ಆಪರೇಟ್ ಆಗದೇ ಉಳಿದಿರುವ ಅಕೌಂಟ್​ಗಳಲ್ಲಿನ ಠೇವಣಿಗಳನ್ನು ಅನ್​ಕ್ಲೇಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಆರ್​ಡಿ, ಎಫ್​ಡಿ, ಸೇವಿಂಗ್ಸ್ ಡೆಪಾಸಿಟ್, ಕ್ಯಾಷ್ ಕ್ರೆಡಿಟ್ ಅಕೌಂಟ್, ಲೋನ್ ಅಕೌಂಟ್ ಇತ್ಯಾದಿ ಸೇರಿವೆ.

ಏನಿದು ಆರ್​ಬಿಐ ಡಿಇಎ ಫಂಡ್?

ಡಿಇಎ ಎಂಬುದು ಡೆಪಾಸಿಟರ್ ಎಜುಕೇಶನ್ ಅಂಡ್ ಅವೇರ್ನೆಸ್ ಫಂಡ್. ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಗ್ರಾಹಕರು ಅಥವಾ ನಿರ್ದಿಷ್ಟ ನಾಮಿನಿಗಳು ಅಥವಾ ಅರ್ಹ ವಾರಸುದಾರರಿಗೆ ತಲುಪಿಸುವ ಗುರಿ ಆರ್​ಬಿಐನದ್ದು. ಇದಕ್ಕಾಗಿ ಕೇಂದ್ರೀಕೃತ ಪ್ಲಾಟ್​ಫಾರ್ಮ್​ವೊಂದನ್ನು ಮಾಡಲು ನಿರ್ಧರಿಸಿರುವ ಆರ್​ಬಿಐ ಡಿಇಎ ಎನ್ನುವ ಪ್ರತ್ಯೇಕ ಫಂಡ್ ಅನ್ನು ನಿರ್ಮಿಸಿದೆ. ಎಲ್ಲಾ ಬ್ಯಾಂಕುಗಳಲ್ಲಿ ಕ್ಲೇಮ್ ಆಗದ ಹಣವನ್ನು ಈ ಫಂಡ್​ಗೆ ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ

ಡಿಇಎ ಫಂಡ್​ನಲ್ಲಿರುವ ಹಣ ಏನಾಗುತ್ತದೆ?

ಆರ್​ಬಿಐನ ಡಿಇಎ ಫಂಡ್​ನಲ್ಲಿ ಇರುವ ಹಣ ಸುರಕ್ಷಿತವಾಗಿರುತ್ತದೆ. ಗ್ರಾಹಕರು ತಮ್ಮ ಹಣವನ್ನು ಕ್ಲೇಮ್ ಮಾಡಲು ಯಾವತ್ತಿಗೂ ಸಾಧ್ಯವಿರುತ್ತದೆ. ತಮ್ಮ ಅಕೌಂಟ್ ಇರುವ ಬ್ಯಾಂಕ್​ಗೆ ಹೋಗಿ ಅಲ್ಲಿ ಗ್ರಾಹಕರಾಗಲೀ, ನಾಮಿನಿಗಳಾಗಲೀ ಹಣ ಕ್ಲೇಮ್ ಮಾಡಬಹುದು. ಬ್ಯಾಂಕುಗಳು ತತ್​ಕ್ಷಣವೇ ಅಕೌಂಟ್ ಸೆಟಲ್ ಮಾಡಬೇಕು. ಇದರ ನಂತರ ಬ್ಯಾಂಕುಗಳು ಆರ್​ಬಿಐನ ಡಿಇಎ ಫಂಡ್​ನಿಂದ ಆ ಹಣವನ್ನು ಕ್ಲೇಮ್ ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ