ನವದೆಹಲಿ: ಅಮೆರಿಕನ್ ಡಾಲರ್ (US Dollar) ವಿರುದ್ಧ ರೂಪಾಯಿ ಮೌಲ್ಯ (Rupee Value) ಸಾರ್ವಕಾಲಿಕ ಕುಸಿತ ಕಂಡಿದೆ. ಬುಧವಾರದ ವಹಿವಾಟು ಮುಕ್ತಾಯದ ವೇಳೆಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 82.95ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ಸೆಷನ್ಗಳಲ್ಲಿ ತುಸು ಗಳಿಕೆ ಕಂಡುಬಂದಿದ್ದರೂ ಕೊನೆಯಲ್ಲಿ ಮೌಲ್ಯ ತೀವ್ರ ಕುಸಿತ ಕಂಡಿತು. ಪರಿಣಾಮವಾಗಿ ಹಣದುಬ್ಬರ (Inflation) ಇನ್ನಷ್ಟು ಏರಿಕೆ, ಕೇಂದ್ರೀಯ ಬ್ಯಾಂಕ್ಗಳಿಂದ (Central Banks) ರೆಪೊ ದರ (Repo Rate) ಹೆಚ್ಚಳ ಸೇರಿದಂತೆ ಇತರ ಕಠಿಣ ಕ್ರಮಗಳನ್ನು ನಿರೀಕ್ಷಿಸಲಾಗಿದೆ.
82.3062ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ ಹಿಂದೆಂದಿಗಿಂತಲೂ ಹೆಚ್ಚಿನ ಕುಸಿತ ದಾಖಲಿಸಿದೆ. 82.36ಕ್ಕೆ ಇಳಿಕೆಯಾಗಿದ್ದು ರೂಪಾಯಿ ಮೌಲ್ಯದ ಈ ಹಿಂದಿನ ಗರಿಷ್ಠ ಕುಸಿತವಾಗಿತ್ತು.
ಇದನ್ನೂ ಓದಿ: Crude oil Price: ಬೇಡಿಕೆ ಕುಸಿತ, ಕಚ್ಚಾ ತೈಲ ಬೆಲೆ ಇಳಿಕೆ
‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಾಲರ್ಗಳನ್ನು ಕರೆನ್ಸಿ ಫ್ಯೂಚರ್ಸ್ ಆಗಿ ಖರೀದಿಸುವ ಸಾಧ್ಯತೆಗಳೊಂದಿಗೆ ರೂಪಾಯಿ ಮೌಲ್ಯವನ್ನು 82.40ರಲ್ಲಿ ಕಾಯ್ದುಕೊಳ್ಳಬಹುದು ಎಂದು ಮಂಗಳವಾರ ನಿರೀಕ್ಷಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಭಾರತದ ಕರೆನ್ಸಿ ಮೌಲ್ಯ 83.50ರ ವರೆಗೂ ಕುಸಿಯುವ ಸಾಧ್ಯತೆ ಇದ್ದು, 83ರ ಮೌಲ್ಯ ಕಾಯ್ದುಕೊಳ್ಳುವ ಗುರಿ ಹಾಕಿಕೊಳ್ಳಬಹುದು’ ಎಂದು ಫಿನ್ರೆಕ್ಸ್ ಟ್ರಷರಿ ಅಡ್ವೈಸರ್ಸ್ ಮುಖ್ಯ ಖಜಾಂಚಿ ಅನಿಲ್ ಕುಮಾರ್ ಬನ್ಸಾಲಿ ಅಭಿಪ್ರಾಯಪಟ್ಟಿದ್ದಾರೆ.
ಡಾಲರ್ಗೆ ಬೇಡಿಕೆ ರೂಪಾಯಿ ಕುಸಿತಕ್ಕೆ ಕಾರಣ:
ಎರಡು ಸರ್ಕಾರಿ ಸ್ವಾಮ್ಯದ ಉದ್ಯಮಗಳು ಡಾಲರ್ಗೆ ಗಮನಾರ್ಹ ಬೇಡಿಕೆ ಇಟ್ಟಿದ್ದು ಕೂಡ ರೂಪಾಯಿ ಮೌಲ್ಯ ಸಾರ್ವಕಾಲಿಕ ಮಟ್ಟಕ್ಕೆ ಕುಸಿಯಲು ಕಾರಣ ಎಂದು ಎರಡು ಖಾಸಗಿ ಬ್ಯಾಂಕ್ಗಳ ಟ್ರೇಡರ್ಗಳು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ 82.36ರ ಮೌಲ್ಯ ಹೊಂದಿದ್ದ ರೂಪಾಯಿ 82ರ ಸನಿಹಕ್ಕೆ ಬರುವ ಆಶಾವಾದ ಮೂಡಿಸಿತ್ತು. ಆದರೆ, ಮತ್ತೆ ನಿರಾಸೆ ಮೂಡಿಸಿದೆ. ಮಂಗಳವಾರದ ವಹಿವಾಟಿನಲ್ಲೇ ರೂಪಾಯಿ ಕುಸಿಯುವ ಸುಳಿವು ಕಂಡುಬಂದಿತ್ತು ಎಂದು ಮುಂಬೈ ಮೂಲದ ಬ್ಯಾಂಕ್ನ ಟ್ರೇಡರ್ ಒಬ್ಬರು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತೈಲ ನಿಗಮಗಳಂಥ ಆಮದುದಾರರು ಡಾಲರ್ಗೆ ಬೇಡಿಕೆ ಇಟ್ಟಿದ್ದೇ ರೂಪಾಯಿ ಕುಸಿತಕ್ಕೆ ಕಾರಣ ಎಂದು ಇನ್ನೂ ಕೆಲವು ಮಂದಿ ಟ್ರೇಡರ್ಗಳು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ