ಮುಂಬೈ: ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ (Rupee Value) ಮಂಗಳವಾರ ತುಸು ವೃದ್ಧಿಯಾಗಿದ್ದು ಭರವಸೆ ಮೂಡಿಸಿದೆ. (US Dollar) ದೇಶೀಯ ಷೇರುಮಾರುಕಟ್ಟೆಯಲ್ಲಿ ಭರವಸೆಯ ವಹಿವಾಟು ದಾಲಾಗಿರುವುದು ರೂಪಾಯಿ ಮೌಲ್ಯ ವೃದ್ಧಿಗೆ ಪೂರಕವಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 82.71ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ, ಬೆಳಿಗ್ಗೆ 10 ಗಂಟೆ ವೇಳೆಗೆ 26 ಪೈಸೆ ವೃದ್ಧಿಯಾಗಿ 82.62 ರಲ್ಲಿ ವಹಿವಾಟು ನಡೆಸಿತು.
ಈ ಹಿಂದಿನ ವಹಿವಾಟಿನ ಅವಧಿಯಲ್ಲಿ ಶುಕ್ರವಾರ 9 ಪೈಸೆ ಕುಸಿತ ದಾಖಲಿಸಿ ಡಾಲರ್ ವಿರುದ್ಧ 82.88 ರಲ್ಲಿ ವಹಿವಾಟು ಮುಗಿಸಿತ್ತು. ಸೋಮವಾರ ದೀಪಾವಳಿ ಪ್ರಯುಕ್ತ ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯನಿರ್ವಹಿಸಿರಲಿಲ್ಲ.
ಕಳೆದ ಕೆಲವು ದಿನಗಳಿಂದ ಪ್ರಮುಖ ಆರು ಕರೆನ್ಸಿಗಳ ಎದುರು ವೃದ್ಧಿಯಾಗುತ್ತಾ ಸಾಗಿದ್ದ ಡಾಲರ್ ಮೌಲ್ಯ ಇಂದು ಶೇಕಡಾ 0.12ರಷ್ಟು ಕುಸಿದು 111.85ರಲ್ಲಿ ವಹಿವಾಟು ನಡೆಸಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಶೇಕಡಾ 0.28 ಏರಿಕೆಯಾಗಿ ಬ್ಯಾರೆಲ್ಗೆ 93.52 ಡಾಲರ್ ಆಗಿದೆ.
ಇದನ್ನೂ ಓದಿ: Share Market Predictions: ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ ರಜೆ, ತ್ರೈಮಾಸಿಕ ಫಲಿತಾಂಶ, ಮಾಸಾಂತ್ಯ…
ಕಳೆದ ಕೆಲವು ದಿನಗಳಿಂದ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಾ ಸಾಗಿತ್ತು. ಡಾಲರ್ ಮೌಲ್ಯ ವೃದ್ಧಿ, ಡಾಲರ್ಗೆ ಹೆಚ್ಚಿದ ಬೇಡಿಕೆ, ಹಣದುಬ್ಬರ ಏರಿಕೆ ಹಾಗೂ ಇತರ ಅನೇಕ ಕಾರಣಗಳು ರೂಪಾಯಿ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿವೆ.
ದೇಶೀಯ ಷೇರುಪೇಟೆಯಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಬಿಎಸ್ಇ ಸೆನ್ಸೆನ್ಸ್ 51.96 ಅಂಶ ಚೇತರಿಕೆಯಾಗಿ 59,883.62 ರಲ್ಲಿ ವಹಿವಾಟು ನಡೆಸಿದೆ. ನಿಫ್ಟಿ 23.80 ಅಂಶ ಹೆಚ್ಚಳವಾಗಿ 17,754.55 ರಲ್ಲಿ ವಹಿವಾಟು ನಡೆಸಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರವೂ ಷೇರುಗಳ ಮಾರಾಟ ಮಾಡಿದ್ದರು. ಅವರು ಸುಮಾರು 153.89 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಈ ಮಧ್ಯೆ, ದೀಪಾವಳಿಯ ಧನ್ತೇರಸ್ ಪ್ರಯುಕ್ತ ಸೋಮವಾರ ಸಂಜೆ ಷೇರುಪೇಟೆಯಲ್ಲಿ ನಡೆದ ಒಂದು ಗಂಟೆಯ ಮುಹೂರ್ತ ವಹಿವಾಟು ಆಶಾದಾಯಕವಾಗಿತ್ತು. ಬಿಎಸ್ಇ ಸೆನ್ಸೆಕ್ಸ್ 524.51 ಅಂಶ ಏರಿಕೆ ಕಂಡು 89,831.66ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇದರೊಂದಿಗೆ ಮುಹೂರ್ತ ವಹಿವಾಟಿನಲ್ಲಿ ಶೇಕಡಾ 0.88ರ ಗಳಿಕೆ ದಾಖಲಿಸಿತ್ತು. 2008ರ ನಂತರ ಮುಹೂರ್ತ ಟ್ರೇಡಿಂಗ್ ಅವಧಿಯಲ್ಲಿ ಸೆನ್ಸೆಕ್ಸ್ ಇಷ್ಟೊಂದು ಗಳಿಕೆ ಕಂಡಿರುವುದು ಇದೇ ಮೊದಲಾಗಿತ್ತು. ನಿಫ್ಟಿ ಸಹ ನಿಫ್ಟಿ 154.45 ಅಂಶ ಚೇತರಿಕೆ ಕಂಡು 17,730.75ರಲ್ಲಿ ವಹಿವಾಟು ಕೊನೆಗೊಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ