USD Vs INR: ಮೇ 23ರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಅಲ್ಪ ಚೇತರಿಕೆ

ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಮೇ 23, 2022ರ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ.

USD Vs INR: ಮೇ 23ರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಅಲ್ಪ ಚೇತರಿಕೆ
ಸಾಂದರ್ಭಿಕ ಚಿತ್ರ
Edited By:

Updated on: May 23, 2022 | 1:39 PM

ಮೇ 23ನೇ ತಾರೀಕಿನ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ (America Dollar) ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದೆ. ಶುಕ್ರವಾರದಂದು ಅಮೆರಿಕದ ಕರೆನ್ಸಿ ಎದುರು ರೂಪಾಯಿ ಮೌಲ್ಯವು 7 ಪೈಸೆ ಕುಸಿದು, ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77.63ಕ್ಕೆ ತಲುಪಿದ ನಂತರದಲ್ಲಿ ಸೋಮವಾರದ ಬೆಳವಣಿಗೆಯು ಸಕಾರಾತ್ಮಕ ಸಂಕೇತವಾಗಿದೆ. ಸೋಮವಾರದ ಇಂಟರ್‌ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ 77.66ಕ್ಕೆ ಪ್ರಾರಂಭವಾಯಿತು, ಆರಂಭಿಕ ವಹಿವಾಟಿನಲ್ಲಿ 4 ಪೈಸೆ ಏರಿಕೆಯಾಗಿದೆ. ಶುಕ್ರವಾರದಂದು ರೂಪಾಯಿ ಮೌಲ್ಯವು 77.63ಕ್ಕೆ ಕೊನೆಗೊಂಡಿತು, ಗುರುವಾರದ ಹಿಂದಿನ ಮುಕ್ತಾಯದ 77.56ಕ್ಕಿಂತ 7 ಪೈಸೆ ಕಡಿಮೆಯಾಗಿತ್ತು.

ಕಳೆದ ವಾರ ಡಾಲರ್ ಸೂಚ್ಯಂಕವು ಆರು ವಾರಗಳ ಮೇಲ್ಮುಖ ಚಲನೆಯ ನಂತರ ಮೊದಲ ಸಾಪ್ತಾಹಿಕ ಕುಸಿತವನ್ನು ಕಂಡಿತು. ಆ ಬೆಳವಣಿಗೆಗೆ ಕಾರಣವಾದ ಅಂಶ ಏನು ಅಂತ ನೋಡುವುದಾದರೆ, ಪೊಸಿಷನ್ ಲಿಕ್ವಿಡೇಷನ್ ಮತ್ತು ಇತರ ಕರೆನ್ಸಿಗಳಿಗೆ ಕಡಿಮೆ ಮಟ್ಟದಲ್ಲಿ ಹೊರಹೊಮ್ಮಿದ ಆದ್ಯತೆ ಕಂಡುಬರುತ್ತದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ 133.14 ಪಾಯಿಂಟ್ ಅಥವಾ ಶೇ 0.25ರಷ್ಟು ಏರಿಕೆಯಾಗಿ 54,459.53 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು, ಆದರೆ ಎನ್ಎಸ್ಇ ನಿಫ್ಟಿ 24.35 ಪಾಯಿಂಟ್ ಅಥವಾ ಶೇ 0.15ರಷ್ಟು ಜಿಗಿದು 16,290.50ಕ್ಕೆ ತಲುಪಿತ್ತು.

ಇದನ್ನೂ ಓದಿ: INR USD Exchange Rate Today: ಅಮೆರಿಕ ಡಾಲರ್ ವಿರುದ್ಧ ಭಾರತ ರೂಪಾಯಿ ಮೇ 18ಕ್ಕೆ ಎಷ್ಟಿದೆ?

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದರು. ಏಕೆಂದರೆ ವಿನಿಮಯ ಕೇಂದ್ರದ ದತ್ತಾಂಶ ಪ್ರಕಾರ, ಅವರು ರೂ. 1,265.41 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Mon, 23 May 22