AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ನಿಷೇಧ ಮಸೂದೆಯ ಅಸ್ತ್ರ ಹಿಡಿದ ಅಮೆರಿಕ ಅಧ್ಯಕ್ಷ; ಭಾರತ ಮತ್ತಿತರ ದೇಶಗಳ ಮೇಲೆ ಶೇ. 500 ಟ್ಯಾರಿಫ್​ಗೆ ಟ್ರಂಪ್ ಸಜ್ಜು

US threatening to impose 500pc tariffs on India and other countries: ರಿಪಬ್ಲಿಕನ್ ಮತ್ತು ಡೆಮಾಕ್ರಾಟಿಕ್ ಪಕ್ಷದ ಇಬ್ಬರು ಸಂಸದರು ಸೇರಿ ಹೊಸ ಮಸೂದೆ ಸಿದ್ಧಪಡಿಸಿದ್ದಾರೆ. ಇದು ಕಾಯ್ದೆಯಾಗಿ ಜಾರಿಯಾದರೆ ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಶೇ. 500 ಟ್ಯಾರಿಫ್ ಹಾಗು ಇತರ ಕ್ರಮ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಈ ಕಾಯ್ದೆ ಬಳಸಿ ಟ್ರಂಪ್ ಅವರು ಭಾರತ, ಚೀನಾ, ಬ್ರೆಜಿಲ್ ಮೊದಲಾದ ದೇಶಗಳ ದೊಡ್ಡ ಸುಂಕ ಹಾಕಲು ಮುಂದಾಗಬಹುದು.

ರಷ್ಯಾ ನಿಷೇಧ ಮಸೂದೆಯ ಅಸ್ತ್ರ ಹಿಡಿದ ಅಮೆರಿಕ ಅಧ್ಯಕ್ಷ; ಭಾರತ ಮತ್ತಿತರ ದೇಶಗಳ ಮೇಲೆ ಶೇ. 500 ಟ್ಯಾರಿಫ್​ಗೆ ಟ್ರಂಪ್ ಸಜ್ಜು
ಟ್ಯಾರಿಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 08, 2026 | 6:12 PM

Share

ವಾಷಿಂಗ್ಟನ್, ಜನವರಿ 8: ಅಮೆರಿಕ ಅಧ್ಯಕ್ಷರು ರಷ್ಯಾವನ್ನು ಹತ್ತಿಕ್ಕಲು ಹೊಸ ಪ್ರಬಲ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಸರ್ವಪಕ್ಷಗಳ ಸಮ್ಮತಿಯ ಗ್ರಹಾಂ ಬ್ಲೂಮೆಂಥಲ್ ಸ್ಯಾಂಕ್ಷನ್ಸ್ ಬಿಲ್​ಗೆ (Graham Blumenthal sanctions bill) ಅನುಮೋದನೆ ಪಡೆಯಲು ನಿಂತಿದ್ದಾರೆ. ರಷ್ಯಾವನ್ನು ಪೂರ್ಣವಾಗಿ ನಿಷೇಧಿಸಲು ಅನುವು ಮಾಡಿಕೊಡುವ ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ಭಾರತ ಮತ್ತಿತರ ಕೆಲ ದೇಶಗಳು ಅಮೆರಿಕವನ್ನು ಪೂರ್ಣವಾಗಿ ಎದಿರುಹಾಕಿಕೊಳ್ಳಬೇಕಾಗುತ್ತದೆ.

ರಿಪಬ್ಲಿಕನ್ ಸಂಸದರಾದ ಲಿಂಡ್ಸೇ ಗ್ರಹಾಂ ರೂಪಿಸಿರುವ ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ಕೆಲ ವಿಶೇಷಾಧಿಕಾರ ಒದಗಿಸುತ್ತದೆ. ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಗೊತ್ತಿದ್ದೂ ಖರೀದಿಸುವ ದೇಶಗಳ ಮೇಲೆ ಶೇ. 500ರಷ್ಟು ಸುಂಕ ಹಾಕಲು ಟ್ರಂಪ್​ಗೆ ಅವಕಾಶ ಸಿಗುತ್ತದೆ. ರಷ್ಯಾವನ್ನು ಆರ್ಥಿಕವಾಗಿ ಕುಸಿಯುವಂತೆ ಮಾಡಬಲ್ಲಂತಹ ನಿಷೇಧಗಳನ್ನು ಜಾರಿಗೊಳಿಸುವುದು ಸುಲಭವಾಗಲಿದೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

ಲಿಂಡ್ಸೆ ಗ್ರಹಾಂ ಅವರು ಈ ಮಸೂದೆ ರೂಪಿಸಲು ತಿಂಗಳು ಕಾಲ ಸಮಯ ವ್ಯಯಿಸಿದ್ದಾರೆ. ನಿನ್ನೆ ಬುಧವಾರ ಗ್ರಹಾಂ ಅವರು ವೈಟ್​ಹೌಸ್​ನಲ್ಲಿ ಟ್ರಂಪ್​ರನ್ನು ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಈ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಮುಂದಿನ ವಾರ ಸಂಸತ್ತಿನಲ್ಲಿ (ಸೆನೇಟ್) ಇದರ ಮಂಡನೆಯಾಗಿ ವೋಟಿಂಗ್ ಕೂಡ ಆಗಬಹುದು. ಮೂಲಗಳ ಪ್ರಕಾರ ಈ ಮಸೂದೆಗೆ ರಿಪಬ್ಲಿಕನ್ ಜೊತೆಗೆ ಡೆಮಾಕ್ರಾಟಿಕ್ ಪಕ್ಷದವರೂ ಬೆಂಬಲ ಕೊಡುವ ಸಾಧ್ಯತೆ ಇದೆ.

ಒಂದು ಕಾಲದಲ್ಲಿ ಟ್ರಂಪ್ ಅವರ ಕಡು ವಿರೋಧಿಯಾಗಿದ್ದ ಲಿಂಡ್ಸೇ ಗ್ರಹಾಂ ಅವರು ಈಗ ನಿಷ್ಠಾವಂತ ಸಂಸದರೆನಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದನ್ನು ಇವರು ಬಲವಾಗಿ ಆಕ್ಷೇಪಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?

‘ಒಂದೆಡೆ ಉಕ್ರೇನ್ ಶಾಂತಿಗಾಗಿ ರಾಜಿ ಮಾಡಿಕೊಳ್ಳುತ್ತಲೇ ಇದೆ. ಇನ್ನೊಂದೆಡೆ ಪುಟಿನ್ ಬರೀ ಮಾತನಾಡುತ್ತಿದ್ದು ಅಮಾಯಕರನ್ನು ಕೊಲ್ಲುತ್ತಲೇ ಇದ್ದಾರೆ. ಈ ಮಸೂದೆಯು ಸಕಾಲಿಕವಾಗಿದೆ’ ಎಂದು ಲಿಂಡ್ಸೆ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.

ಈ ಮಸೂದೆಯನ್ನು ಗ್ರಹಾಂ ಜೊತೆಗೆ ಡೆಮಾಕ್ರಟಿಕ್ ಸಂಸದ ರಿಚರ್ಡ್ ಬ್ಲೂಮೆಂಥಾಲ್ ಅವರೂ ಸೇರಿ ರಚಿಸಿದ್ದಾರೆ. ಅಂತೆಯೇ ಇದು ದ್ವಿಪಕ್ಷೀಯ ಮಸೂದೆ ಎಂದೆನಿಸಿದೆ. ರಷ್ಯಾದ ಮೇಲೆ ಪೂರ್ಣ ನಿಷೇಧ ಹೇರುವ ಜೊತೆಗೆ, ಆ ದೇಶದೊಂದಿಗೆ ವ್ಯವಹಾರ ಹೊಂದಿರುವ ಇತರ ದೇಶಗಳ ಮೇಲೂ ಟ್ಯಾರಿಫ್ ಇತ್ಯಾದಿ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲು ಈ ಮಸೂದೆ ಅವಕಾಶ ಕೊಡುತ್ತದೆ. ರಷ್ಯಾಗೆ ಹಣದ ಹರಿವಿಗೆ ತಡೆ ಹಾಕುವುದು ಇದರ ಪ್ರಮುಖ ಉದ್ದೇಶ. ಭಾರತ, ಚೀನಾ, ಬ್ರೆಜಿಲ್, ಉತ್ತರ ಕೊರಿಯಾ ಮೊದಲಾದ ದೇಶಗಳು ರಷ್ಯಾದ ತೈಲವನ್ನು ಖರೀದಿಸುತ್ತಿವೆ. ಅಮೆರಿಕದ ನಿಷೇಧ ಕ್ರಮ ಜಾರಿಯಾದರೆ ಹೆಚ್ಚಿನ ಪರಿಣಾಮ ಆಗುವುದು ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳಿಗೆಯೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ