AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನಿಗೆ ಕೊಟ್ಟ ಮಾತು ನೆರವೇರಿಸುತ್ತೇನೆ; ಮಗನ ಡಿಢೀರ್ ಸಾವಿನಿಂದ ಜರ್ಝರಿತಗೊಂಡ ಮೈನಿಂಗ್ ಕಿಂಗ್

Vedanta Chairman Anil Agarwal's son Agnivesh dies of cardiac arrest in US: ವೇದಾಂತ ಕಂಪನಿಯ ಸಂಸ್ಥಾಪಕ ಅನಿಲ್ ಅಗರ್ವಾಲ್ ಅವರ ಮಗ ಅಗ್ನಿವೇಶ್ ಅಮೆರಿಕದ ನ್ಯೂಯಾರ್ಕ್​ನಲ್ಲಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ವೇದಾಂತದ ಅಂಗಸಂಸ್ಥೆಯಾದ ತಲ್ವಾಂಡಿ ಸಾಬೊ ಪವರ್​ನ ಛೇರ್ಮನ್ ಆಗಿದ್ದ ಅಗ್ನಿವೇಶ್ ಅಗರ್ವಾಲ್​ಗೆ 49 ವರ್ಷ ವಯಸ್ಸಾಗಿತ್ತು. ಅಗ್ನಿವೇಶ್ ನಿಧನಕ್ಕೆ ತಂದೆ ಅನಿಲ್ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಅವನಿಗೆ ಕೊಟ್ಟ ಮಾತು ನೆರವೇರಿಸುತ್ತೇನೆ; ಮಗನ ಡಿಢೀರ್ ಸಾವಿನಿಂದ ಜರ್ಝರಿತಗೊಂಡ ಮೈನಿಂಗ್ ಕಿಂಗ್
ಅನಿಲ್ ಅಗರ್ವಾಲ್ ಮತ್ತು ಮಗ ಅಗ್ನಿವೇಶ್ ಅಗರ್ವಾಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 08, 2026 | 2:31 PM

Share

ನವದೆಹಲಿ, ಜನವರಿ 8: ವೇದಾಂತ ಗ್ರೂಪ್​ನ ಛೇರ್ಮನ್ ಅನಿಲ್ ಅಗರ್ವಾಲ್ ಅವರ ಮಗ ಅಗ್ನಿವೇಶ್ ಅಗರ್ವಾಲ್ (Agnivesh Agarwal) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ತಂದೆ ಅನಿಲ್ ಅಗರ್ವಾಲ್, ತಾಯಿ ಕಿರಣ್ ಅಗರ್ವಾಲ್ ಮತ್ತು ಸಹೋದರಿ ಪ್ರಿಯಾ ಅಗರ್ವಾಲ್ ಹೆಬ್ಬಾರ್ ಅವರನ್ನು ಅಗಲಿದ್ದಾರೆ. ವರದಿಗಳ ಪ್ರಕಾರ, ಅಮೆರಿಕದಲ್ಲಿ ಅಗ್ನಿವೇಶ್ ಹೃದಯ ಸ್ತಂಭನಗೊಂಡು (cardiac arrest) ಇಹಲೋಕ ತ್ಯಜಿಸಿದ್ದಾರೆ. ಅಗ್ನಿವೇಶ್ ನಿಧನಕ್ಕೆ ತಂದೆ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

ವೇದಾಂತ ಗ್ರೂಪ್​ನ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಗ್ನಿವೇಶ್ ಅಗರ್ವಾಲ್ ಅವರು ಸ್ಕೈಯಿಂಗ್ ಆಡುವಾಗ ಅಪಘಾತಗೊಂಡು ಗಾಯಗೊಂಡಿದ್ದರು. ನ್ಯೂಯಾರ್ಕ್​ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿದ್ದರು. ಆದರೆ, ಇದೀಗ ದಿಢೀರ್ ಆಗಿ ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನರಾಗಿದ್ದಾರೆ. ತಮ್ಮ ಮಗನ ಮರಣವು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ತಂದೆ ಹಾಗೂ ಉದ್ಯಮಿ ಅನಿಲ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?

ಮಗನಿಗೆ ಕೊಟ್ಟ ಮಾತು…

‘ನನ್ನ ಪ್ರೀತಿಯ ಮಗ ಅಗ್ನಿವೇಶ್ ಬಹಳ ಬೇಗ ನಮ್ಮನ್ನು ಅಗಲಿದ್ದಾನೆ. ಅವನಿಗೆ ವಯಸ್ಸು ಕೇವಲ 49 ವರ್ಷ, ಉತ್ತಮ ಆರೋಗ್ಯ, ಪೂರ್ಣ ಕನಸ್ಸುಗಳನ್ನು ಹೊಂದಿದ್ದ ವ್ಯಕ್ತಿ. ಗಾಯದಿಂದ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದ. ಕಷ್ಟಗಳು ಕಳೆದವು ಎಂದು ಭಾವಿಸಿದ್ದೆವು. ಆದರೆ, ವಿಧಿಯಾಟ ಬೇರೆಯೇ ಇತ್ತು’ ಎಂದು ಅನಿಲ್ ಅಗರ್ವಾಲ್ ನೋವು ತೋಡಿಕೊಂಡಿದ್ದಾರೆ.

ಅನಿಲ್ ಅಗರ್ವಾಲ್ ಅವರ ಟ್ವೀಟ್

ನನ್ನ ಆತ ಕೇವಲ ಮಗ ಮಾತ್ರವಲ್ಲ, ಸ್ನೇಹಿತ, ಹೆಮ್ಮೆ, ಜಗತ್ತು ಎಲ್ಲವೂ ಆಗಿದ್ದ. ಸ್ವಾವಂಬನೆಯ ಭಾರತ ನಿರ್ಮಾಣವಾಗಬೇಕೆಂಬುದು ಅಗ್ನಿಯ ಕನಸಾಗಿತ್ತು. ಒಂದು ದೇಶವಾಗಿ ನಮಗೇನೂ ಕೊರತೆ ಇಲ್ಲ, ಯಾಕೆ ನಾವು ಹಿಂದುಳಿಯಬೇಕು ಎಂದು ಆಗಾಗ್ಗೆ ಹೇಳುತ್ತಿದ್ದ. ನಾವು ಗಳಿಸುವ ಹಣದಲ್ಲಿ ಶೇ. 75ಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ಮರಳಿಸುವುದಾಗಿ ಅಗ್ನಿಗೆ ಆಶ್ವಾಸನೆ ಕೊಟ್ಟಿದ್ದೆ. ಇವತ್ತು ಆ ಭರವಸೆಯನ್ನು ಪುನರುಚ್ಚರಿಸುತ್ತೇನೆ. ಇನ್ನಷ್ಟು ಸರಳ ಜೀವನ ನಡೆಸುವ ನಿರ್ಧಾರ ಮಾಡುತ್ತೇನೆ’ ಎಂದು ಅನಿಲ್ ಅಗರ್ವಾಲ್ ಪಣ ತೊಟ್ಟಿದ್ದಾರೆ.

ಪ್ರಧಾನಿ ಸಂತಾಪ

1976ರಲ್ಲಿ ಜನಿಸಿದ ಅಗ್ನಿವೇಶ್ ಅಗರ್ವಾಲ್ ಅವರು ವೇದಾಂತದ ಅಂಗಸಂಸ್ಥೆಯಾದ ತಲ್ವಾಂಡಿ ಸಾಬೊ ಪವರ್​ನ ಛೇರ್ಮನ್ ಆಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಅನಿಲ್ ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳು. ಅಗ್ನಿವೇಶ್ ಹಾಗು ಪ್ರಿಯಾ. ಆಕರ್ಷ್ ಹೆಬ್ಬಾರ್ ಎಂಬುವರನ್ನು ವಿವಾಹವಾಗಿರುವ ಪ್ರಿಯಾ ಅಗರ್ವಾಲ್ ಅವರು ವೇದಾಂತ ಗ್ರೂಪ್​ನ ಬ್ಯುಸಿನೆಸ್​ಗಳಲ್ಲಿ ಸಕ್ರಿಯವಾಗಿದ್ದಾರೆ. ಅನಿಲ್ ಅಗರ್ವಾಲ್ ಅವರ ಇಬ್ಬರು ತಮ್ಮಂದಿರು ಹಾಗೂ ಅವರ ಕುಟುಂಬ ಸದಸ್ಯರು ಗ್ರೂಪ್​ನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ವೇದಾಂತ ಸಂಸ್ಥೆಯು ಜಿಂಕ್, ಕಾಪರ್ ಇತ್ಯಾದಿ ಮೈನಿಂಗ್ ನಡೆಸುವ ಕಂಪನಿಗಳನ್ನು ಹೊಂದಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೂ ಅದು ಕೈ ಹಾಕಿದೆ. ತಮ್ಮ ಹೆಚ್ಚಿನ ಆದಾಯವನ್ನು ದಾನ ಮಾಡಲು ನಿರ್ಧರಿಸಿದ ಉದ್ಯಮಗಳಲ್ಲಿ ಅನಿಲ್ ಅಗರ್ವಾಲ್ ಕೂಡ ಒಬ್ಬರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ