AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanchaya Converter: ಕನ್ನಡಕ್ಕೆ ಬರುತ್ತಿದೆ ಹೊಸ ಫಾಂಟ್ ಕನ್ವರ್ಟರ್; ASCII ಇಂದ ಯೂನಿಕೋಡ್, ಯೂನಿಕೋಡ್​ನಿಂದ ASCII ಗೆ ಸುಲಭವಾಗಿ ಪರಿವರ್ತಿಸಿ

Sanchaya Converter, new Kannada font converter for Unicode and ASCII texts: ಸಂಚಿ ಫೌಂಡೇಶನ್ ವತಿಯಿಂದ ಸಂಚಯ ಕನ್ವರ್ಟರ್ ಅಭಿವೃದ್ಧಿಯಾಗುತ್ತಿದೆ. ಇದು ASCII ಫಾಂಟ್​ಗಳಾದ ಬರಹ, ಶ್ರೀಲಿಪಿ, ನುಡಿ, ಪ್ರಕಾಶಕ್, ಆಕೃತಿಯ ಪಠ್ಯವನ್ನು ಯುನಿಕೋಡ್​ಗೆ ಪರಿವರ್ತಿಸಬಲ್ಲುದು. ಯೂನಿಕೋಡ್​ನಿಂದ ASCII ಫಾಂಟ್​ಗಳಿಗೂ ಇದು ಪರಿವರ್ತನೆ ಮಾಡಬಲ್ಲುದು. ಸದ್ಯ ಈ ಕನ್ವರ್ಟರ್ ಅಭಿವೃದ್ಧಿ ಹಂತದಲ್ಲಿದೆ ಎನ್ನಲಾಗುತ್ತಿದೆ.

Sanchaya Converter: ಕನ್ನಡಕ್ಕೆ ಬರುತ್ತಿದೆ ಹೊಸ ಫಾಂಟ್ ಕನ್ವರ್ಟರ್; ASCII ಇಂದ ಯೂನಿಕೋಡ್, ಯೂನಿಕೋಡ್​ನಿಂದ ASCII ಗೆ ಸುಲಭವಾಗಿ ಪರಿವರ್ತಿಸಿ
ಸಂಚಯ ಕನ್ವರ್ಟರ್Image Credit source: Screenshot @ converter.sanchaya.net
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 23, 2026 | 1:36 PM

Share

ಮುಖ್ಯಾಂಶಗಳು

  • ಸಂಚಿ ಫೌಂಡೇಶನ್ ವತಿಯಿಂದ ಸಂಚಯ ಕನ್ವರ್ಟರ್ ಅಭಿವೃದ್ಧಿಯಾಗುತ್ತಿದೆ.
  • ಇದು ASCII ಫಾಂಟ್​ಗಳ ಪಠ್ಯವನ್ನು ಯುನಿಕೋಡ್​ಗೆ ಪರಿವರ್ತಿಸಬಲ್ಲುದು.
  • ಯೂನಿಕೋಡ್​ನಿಂದ ASCII ಫಾಂಟ್​ಗಳಿಗೂ ಇದು ಪರಿವರ್ತನೆ ಮಾಡಬಲ್ಲುದು.

ಬೆಂಗಳೂರು, ಜುಲೈ 23: ಕನ್ನಡದ ಮುದ್ರಣ ಕ್ಷೇತ್ರದ ದಶಕಗಳ ಸಮಸ್ಯೆಗೆ ಮತ್ತೊಂದು ಪರಿಹಾರ ಲಭ್ಯವಾಗುತ್ತಿದೆ. ಶ್ರೀಲಿಪಿ, ನುಡಿ, ಬರಹ ಇತ್ಯಾದಿ ಆಸ್ಕಿ (ASCII) ಫಾಂಟ್​ಗಳಿಂದ ಯೂನಿಕೋಡ್​ಗೆ ಪರಿವರ್ತಿಸಬಲ್ಲ, ಮತ್ತು ಯೂನಿಕೋಡ್​ನಿಂದ ವಿವಿಧ ಆಸ್ಕಿ ಫಾಂಟ್​ಗಳಿಗೆ ಪರಿವರ್ತಿಸಬಲ್ಲ ಸಮಗ್ರ ಕನ್ವರ್ಟರ್​ವೊಂದನ್ನು ಕನ್ನಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಿ ಫೌಂಡೇಶನ್​ನ ಸಂಚಯ ಸಂಸ್ಥೆಯು ಈ ಕನ್ವರ್ಟ್ ಅಭಿವೃದ್ಧಿಪಡಿಸುತ್ತಿರುವುದು.

ಈಗಾಗಲೇ ಕನ್ನಡದಲ್ಲಿ ಕೆಲವು ಕನ್ವರ್ಟರ್​​ಗಳು ಲಭ್ಯ ಇದ್ದರೂ ಯಾವುದೂ ಕೂಡ ಸಮಗ್ರ ಫಾಂಟ್ ಪರಿವರ್ತನೆ ಕೊಡುವುದಿಲ್ಲ. ಸಂಚಯ ಕನ್ವರ್ಟರ್​ನಲ್ಲಿ ಯಾವುದೇ ASCII ಫಾಂಟ್​ಗಳ ಪಠ್ಯವನ್ನು ಯೂನಿಕೋಡ್ ಪಠ್ಯವಾಗಿ ಪರಿವರ್ತಿಸಬಹುದು. ಯೂನಿಕೋಡ್ ಪಠ್ಯವನ್ನು ಯಾವುದೇ ASCII ಪಠ್ಯಗಳಿಗೆ ಕನ್ವರ್ಟ್ ಮಾಡಬಹುದು.

ಇದನ್ನೂ ಓದಿ: ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?

ಸಂಚಯ ಕನ್ವರ್ಟರ್ ಸದ್ಯ ಅಭಿವೃದ್ಧಿ ಹಂತದಲ್ಲಿದೆ. ಶ್ರೀಲಿಪಿ, ನುಡಿ, ಬರಹ, ಆಕೃತಿ, ಪ್ರಕಾಶಕ್ ಫಾಂಟ್​ಗಳನ್ನು ಯುನಿಕೋಡ್​ಗೆ, ಹಾಗೂ ಯುನಿಕೋಡ್​ನಿಂದ ಆ ಫಾಂಟ್​ಗಳಿಗೆ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸದ್ಯಕ್ಕೆ ಟಿವಿ9 ಪರಿಶೀಲನೆ ನಡೆಸಿದಾಗ ಯೂನಿಕೋಡ್​ನಿಂದ ನುಡಿಗೆ ಕನ್ವರ್ಶನ್ ಸರಿಯಾಗಿ ಆಗುತ್ತಿದೆ. ಮುಂದಿ ದಿನಗಳಲ್ಲಿ ಎಲ್ಲಾ ASCII ಫಾಂಟ್​ಗಳ ಪರಿವರ್ತನೆ ಸಾಧ್ಯವಾಗಬಹುದು.

ಈ ಕನ್ವರ್ಟರ್ ಲಿಂಕ್ ಇಲ್ಲಿದೆ: converter.sanchaya.net

ಕನ್ನಡ ಸಂಚಯದಿಂದ ಬಂದ ಪೋಸ್ಟ್​

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

ಯಾರಿಗೆ ಉಪಯೋಗ ಈ ಕನ್ವರ್ಟರ್?

ಮುದ್ರಣ ಕ್ಷೇತ್ರಕ್ಕೆ ಈ ಕನ್ವರ್ಟರ್ ನೆರವಾಗುತ್ತದೆ. ಇಂಟರ್ನೆಟ್​ನಲ್ಲಿ ಕನ್ನಡ ಅಕ್ಷರಗಳೆಲ್ಲವೂ ಯೂನಿಕೋಡ್ ಆಗಿ ಹೋಗಿವೆಯಾದರೂ, ಹೆಚ್ಚಿನ ಮುದ್ರಣ ಸಂಸ್ಥೆಗಳು ಮತ್ತು ಡಿಟಿಪಿ ಸೆಂಟರ್​ಗಳು ಬೇರೆ ಬೇರೆ ಕಾರಣಗಳಿಗೆ ಈಗಲೂ ಕೂಡ ASCII ಫಾಂಟ್​ಗಳನ್ನೇ ಬಳಸುತ್ತಿರುವುದುಂಟು. ಹೀಗಾಗಿ, ಕನ್ವರ್ಟರ್ ಅಗತ್ಯತೆ ಇನ್ನೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Thu, 23 July 26

Follow Us