
ಮುಂಬೈ, ಜುಲೈ 7: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಸೋಮವಾರ ಸಂಜೋಗ್ ಗುಪ್ತಾ (Sanjog Gupta) ಅವರನ್ನು ಸಿಇಒ ಆಗಿ ನೇಮಕ ಮಾಡಿದೆ. ಸಂಜೋಗ್ ಅವರು ಜಿಯೋಸ್ಟಾರ್ನ ಸ್ಪೋರ್ಟ್ಸ್ ಮತ್ತು ಲೈವ್ ಎಕ್ಸ್ಪೀರಿಯನ್ಸ್ ವಿಭಾಗದ ಸಿಇಒ ಆಗಿದ್ದರು. ಮಹತ್ತರ ಬೆಳವಣಿಗೆಯಲ್ಲಿ ಸಂಜೋಗ್ ಅವರನ್ನು ಐಸಿಸಿ ಸೆಳೆದುಕೊಂಡಿದೆ. ಸಂಜೋಗ್ ಅವರು ಐಸಿಸಿಯ ಏಳನೇ ಸಿಇಒ ಆಗಿದ್ದಾರೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ (Geoff Allardice) ಅವರು ಈ ಮುಂಚೆ ನಾಲ್ಕು ವರ್ಷ ಸಿಇಒ ಆಗಿದ್ದರು. ಜನವರಿಯಲ್ಲಿ ಅವರು ರಾಜೀನಾಮೆ ನೀಡಿದ ಬಳಿಕ ಆ ಹುದ್ದೆ ಖಾಲಿ ಉಳಿದಿತ್ತು.
ಐಸಿಸಿ ಸಿಇಒ ಸ್ಥಾನಕ್ಕೆ 25 ದೇಶಗಳಿಮದ 2,500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜ ನೇತೃತ್ವದ ನಾಮಿನೇಶನ್ಸ್ ಕಮಿಟಿ 12 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿತು. ನಂತರ, ಸಂಜೋಗ್ ಗುಪ್ತಾ ಅವರ ಹೆಸರನ್ನು ಸಿಇಒ ಸ್ಥಾನಕ್ಕೆ ಶಿಫಾರಸು ಮಾಡಲಾಯಿತು. ಛೇರ್ಮನ್ ಜಯ್ ಶಾ ಅವರು ಅನುಮೋದನೆ ನೀಡಿದ ಬಳಿಕ ಐಸಿಸಿ ಸಿಇಒ ಆಗಿ ಸಂಜೋಗ್ ಅವರನ್ನು ನೇಮಕ ಮಾಡಲಾಯಿತು.
ಇದನ್ನೂ ಓದಿ: Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್ನಲ್ಲಿ ನಿರ್ಮಾಣ
ಜಿಯೋ ಸ್ಟಾರ್ನಲ್ಲಿ ಇದ್ದ ಸಂಜೋಗ್ ಗುಪ್ತಾ ಅವರು ಐಸಿಸಿಗೆ ಹೆಚ್ಚಿನ ಆದಾಯ ತಂದುಕೊಡಬಲ್ಲ ವ್ಯಾವಹಾರಿಕ ಜಾಣ್ಮೆ ಹೊಂದಿರುವುದರಿಂದ ಸಿಇಒ ಆಗಿ ನೇಮಕ ಮಾಡಿರಬಹುದು. ‘ಸಂಜೋಗ್ ಗುಪ್ತಾ ಅವರು ಸ್ಪೋರ್ಟ್ಸ್ ಸ್ಟ್ರಾಟಿಜಿ ಮತ್ತು ವಾಣಿಜ್ಯೀಕರಣದಲ್ಲಿ ಹೊಂದಿರುವ ಅಪಾರ ಅನುಭವವು ಐಸಿಸಿಗೆ ಬಹಳ ಉಪಯುಕ್ತವಾಗಲಿದೆ’ ಎಂದು ಐಸಿಸಿ ಛೇರ್ಮನ್ ಜಯ್ ಶಾ ಹೇಳಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಇದ್ದ ವ್ಯಕ್ತಿಯೊಬ್ಬರು ಐಸಿಸಿಗೆ ಸಿಇಒ ಆಗಿರುವುದು ಪ್ರಾಯಶಃ ಇದೇ ಮೊದಲಿರಬೇಕು. 2028ರ ಲಾಸ್ ಏಂಜಲಿಸ್ ಒಲಿಂಪಿಕ್ ಗೇಮ್ಸ್ನನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಒಳಗೊಂಡಿರುವುದು, ಹಾಗೂ ಕ್ರಿಕೆಟ್ನ ವಾಣಿಜ್ಯೀಕರಣ (commercialization) ಹೊಸ ಸ್ತರಕ್ಕೆ ಏರುತ್ತಿರುವುದು, ಇವುಗಳ ಹಿನ್ನೆಲೆಯಲ್ಲಿ ಗುಪ್ತಾ ಅವರು ಐಸಿಸಿ ಮುಖ್ಯ ಎಕ್ಸಿಕ್ಯೂಟಿವ್ ಆಗಿ ಜವಾಬ್ದಾರಿ ಹೊತ್ತಿರುವುದು ಗಮನಾರ್ಹ ಸಂಗತಿ.
ಇದನ್ನೂ ಓದಿ: ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು
ಹಾಟ್ಸ್ಟಾರ್ ಮತ್ತು ಜಿಯೋದ ಬ್ರಾಡ್ಕ್ಯಾಸ್ಟಿಂಗ್ ಬ್ಯುಸಿನೆಸ್ಗಳು ವಿಲೀನಗೊಂಡ ನಂತರ ಉದಯವಾದ ಜಿಯೋಸ್ಟಾರ್ ಸಂಸ್ಥೆ ಸಾಕಷ್ಟು ಬಂಡವಾಳ ಹಾಕಿದೆ. ಈ ಸಂದರ್ಭದಲ್ಲಿ ಅದು ಇಶಾನ್ ಚಟರ್ಜಿ ಅವರನ್ನು ಸಿಇಒ ಆಗಿ ನೇಮಿಸಿದೆ. ಚಟರ್ಜಿ ಅವರು ಯೂಟ್ಯೂಬ್ ಇಂಡಿಯಾದ ಮುಖ್ಯಸ್ಥರಾಗಿದ್ದು ಕಳೆದ ವರ್ಷ (2024) ಜಿಯೋಸ್ಟಾರ್ಗೆ ಸೇರ್ಪಡೆಯಾಗಿದ್ದರು. ಈಗ ಸಿಇಒ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ